ಬೆಂಗಳೂರು : ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸ್ ಕಸ್ಟರ್ಡಿಯಲ್ಲಿರುವ ನಟಿ ಪವಿತ್ರ ಗೌಡ ನಟ ದರ್ಶನ್ ಸೇರಿ 13 ಆರೋಪಿಗಳನ್ನು ಪೊಲೀಸರು ಆರು ದಿನಗಳ ಕಾಲ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಇತ್ತ ನಟಿ ಪವಿತ್ರ ಗೌಡ ಅತ್ತ ಅವರ ಮನೆಗೆ ಬೀಗ ಹಾಕಲಾಗಿದೆ ಮನೆಯಲ್ಲಿ ಸದ್ಯ ಯಾವುದೇ ಸದಸ್ಯರು ಇಲ್ಲ ಎಂದು ಹೇಳಲಾಗುತ್ತಿದ್ದು ಅರೆಸ್ಟ್ ಆದ ಬೆನ್ನಲ್ಲೇ ಮನೆಯಲ್ಲಿದ್ದ ಸದಸ್ಯರು ಮನೆಗೆ ಬೀಗ ಹಾಕಿ ತೆರಳಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರಿನ ಆರ್ ಆರ್ ನಗರದಲ್ಲಿರುವ ಪವಿತ್ರ ಗೌಡ ಮನೆಯಮುಂದೆ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಯಾವುದೇ ಅಹಿತಕರ ಘಟನೆ ನಡೆದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಹಾಗೂ ತನಿಖೆಗೆ ಯಾವುದೇ ಸಮಸ್ಯೆ ಆಗಬಾರದು ಎಂದು ಪೋಲಿಸ್ ನಿಯೋಜನೆ ಮಾಡಲಾಗಿದೆ. ಮನೆಯ ಬಳಿ ಆರ್ ಆರ್ ನಗರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.ಪವಿತ್ರ ಗೌಡ ಅರೆಸ್ಟ್ ಆದ ಬಳಿಕ ಇದೀಗ ಮನೆಗೆ ಬೀಗ ಹಾಕಲಾಗಿದೆ ಮನೆಯಲ್ಲಿ ಯಾರು ಸದ್ಯಕ್ಕೆ ಇಲ್ಲ ಎಂದು ಹೇಳಲಾಗುತ್ತಿದೆ.