Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪೋಷಕರೇ, ನಿಮ್ಮ ಮಕ್ಕಳು ರಾತ್ರಿ ವೇಳೆ ‘ಕಾಲು ನೋವು’ ಅಂತಾ ಅಳುತ್ತಿದ್ದಾರಾ.? ಇದಕ್ಕೆ ಕಾರಣಗಳೇನು ಗೊತ್ತಾ?

18/08/2025 10:20 PM

ಗಮನಿಸಿ : ಮುಖ & ಕುತ್ತಿಗೆಯ ಮೇಲೆ ನೀವು ಗುರುತಿಸಬಹುದಾದ ‘ಕಿಡ್ನಿ ಕಾಯಿಲೆ’ಯ ಲಕ್ಷಣಗಳಿವು.!

18/08/2025 9:50 PM

ವಿಶ್ವ ದಾಖಲೆ ಪುಟ ಸೇರಿದ ಶಕ್ತಿ ಯೋಜನೆ: ಸಂತಸ ಹಂಚಿಕೊಂಡ ಸಿಎಂ ಸಿದ್ಧರಾಮಯ್ಯ

18/08/2025 9:45 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಧಾರ್ಮಿಕ ನಂಬಿಕೆ’ ದೌರ್ಬಲ್ಯವಲ್ಲ, ಅದು ಭೂಮಿಯ ಮೇಲಿನ ‘ಸೌಹಾರ್ದತೆಯ’ ಪ್ರಬಲ ಶಕ್ತಿಯಾಗಿದೆ: ಯು.ಟಿ.ಖಾದರ್
WORLD

‘ಧಾರ್ಮಿಕ ನಂಬಿಕೆ’ ದೌರ್ಬಲ್ಯವಲ್ಲ, ಅದು ಭೂಮಿಯ ಮೇಲಿನ ‘ಸೌಹಾರ್ದತೆಯ’ ಪ್ರಬಲ ಶಕ್ತಿಯಾಗಿದೆ: ಯು.ಟಿ.ಖಾದರ್

By kannadanewsnow0503/12/2024 12:09 PM

ಯಾವುದೇ ಧರ್ಮ ಮತ್ತು ಸಮಾಜವು ಕೀಳರಿಮೆ ಹಾಗೂ ಪ್ರತ್ಯೇಕತೆಯನ್ನು ಅನುಭವಿಸುವ ವಾತಾವರಣವಿರಬಾರದು. ಧಾರ್ಮಿಕ ನಂಬಿಕೆ ದೌರ್ಬಲ್ಯವಲ್ಲ, ಅದು ಭೂಮಿಯ ಮೇಲಿನ ಸೌಹಾರ್ದತೆಯ ಪ್ರಬಲ ಶಕ್ತಿಯಾಗಿದೆ ಎಂದು ವಿಧಾನ ಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಫರೀದ್ ಹೇಳಿದ್ದಾರೆ.

ರೋಮಿನ ವ್ಯಾಟಿಕನ್ ನಗರದಲ್ಲಿ, ಬ್ರಹ್ಮಶ್ರೀ ನಾರಾಯಣ ಗುರುಗಳ ಮೊದಲ ಅಂತರರಾಷ್ಟ್ರೀಯ ಸರ್ವಧರ್ಮ ಸಮ್ಮೇಳನದ ಶತಮಾನೋತ್ಸವ ಸ್ಮರಣಾರ್ಥ “ಮಾನವೀಯತೆಗಾಗಿ ಧರ್ಮಗಳ ಒಗ್ಗಟ್ಟು” ಎಂಬ ಶೀರ್ಷಿಕೆಯೊಂದಿಗೆ ಆಯೋಜಿಸಲಾದ ಮೂರು ದಿನಗಳ ವಿಶ್ವ ಸರ್ವಧರ್ಮ ಸಮ್ಮೇಳನದಲ್ಲಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮಾತನಾಡಿದ ಅವರು ನಾವು ವೈವಿಧ್ಯತೆಗಳನ್ನು ಹೊಂದಿದ್ದರೂ, ಪ್ರತಿಯೊಬ್ಬರೊಳಗಿರುವ ದೈವಿಕ ಚೇತನವು ಒಂದೇ. ಸಮಾಜವನ್ನು ಮುನ್ನಡೆಸುವ ನನ್ನ ಸಹೋದರ ಸಹೋದರಿಯರೇ, ನಾವಿಂದು ದ್ವೇಷವನ್ನು ತಿರಸ್ಕರಿಸುವ ಪ್ರತಿಜ್ಞೆ ಮಾಡೋಣ ಎಂದರು.

ನಾನು ಇಲ್ಲಿ ಯಾವುದೇ ಒಂದು ಧರ್ಮದ ಪ್ರತಿನಿಧಿಯಾಗಿ ಬಂದಿಲ್ಲ‌. ಬದಲಾಗಿ ಮಾನವೀಯತೆಯ ವಿನಮ್ರ ಧ್ವನಿಯಾಗಿ, ಶಾಂತಿ, ಪ್ರೀತಿ ಮತ್ತು ಸೌಹಾರ್ದತೆಯಿಂದ ತುಂಬಿದ ಒಂದು ಸುಂದರ ಪ್ರಪಂಚದ ಕನಸು ಕಾಣುವ ಶತಕೋಟಿ ಜನರ ಸಾಮೂಹಿಕ ಆಶಯ, ಹೋರಾಟ ಮತ್ತು ಆಕಾಂಕ್ಷೆಗಳನ್ನು ಹೊತ್ತುಕೊಂಡು ಅವರೆಲ್ಲರ ದ್ವನಿಯಾಗಿ ಇಲ್ಲಿ ನಿಮ್ಮೆದುರು ನಿಂತಿದ್ದೇನೆ ಎಂದು ತಿಳಿಸಿದರು.

“ಒಂದು ಜಾತಿ, ಒಂದು ಧರ್ಮ ಮತ್ತು ಒಬ್ಬ ದೇವರು”ಎಂಬ ಬ್ರಹ್ಮಶ್ರೀ ನಾರಾಯಣ ಗುರುಗಳ ಬೋಧನೆಯು ಕೇರಳದಲ್ಲಿ ಸಾಮಾಜಿಕ ಸಮಾನತೆ, ಸಾಮರಸ್ಯ ಮತ್ತು ಶಾಂತಿಯುತ ಸಹಬಾಳ್ವೆಯನ್ನು ಪ್ರತಿಪಾದಿಸುವ ಮಹತ್ವದ ಸಾಮಾಜಿಕ ಆಂದೋಲನವನ್ನು ಸೃಷ್ಟಿಸಿತ್ತು. ಜೊತೆಗೆ, ಶ್ರೀ ನಾರಾಯಣ ಗುರುಗಳು ಸಮಾಜದ ಸಬಲೀಕರಣ ಮತ್ತು ಉನ್ನತೀಕರಣದಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ಜನರಲ್ಲಿ ಗಾಢವಾದ ಅರಿವು ಮೂಡಿಸಿದವರು. ಬ್ರಹ್ಮಶ್ರೀ ನಾರಾಯಣ ಗುರುಗಳು ಮತ್ತು ಸ್ವಾಮಿ ವಿವೇಕಾನಂದರಂತಹ ಮಹಾನ್ ಆಧ್ಯಾತ್ಮಿಕ ದಾರ್ಶನಿಕರ ಪುಣ್ಯಭೂಮಿ ಭಾರತದಿಂದ ಬಂದಿದ್ದೇನೆ ಎಂದು ಹೇಳಲು ನಾನು ಹೆಮ್ಮೆ ಪಡುತ್ತೇನೆ.

ಹಾಗೆಯೇ, ನನಗೆ ಮತ್ತು ನನ್ನಂತಹ ಅಸಂಖ್ಯಾತರಿಗೆ ಏಕತೆ, ಶಾಂತಿ, ಮತ್ತು ಸೌಹಾರ್ದತೆಯಿಂದ ಕೂಡಿದ ಹೊಸ ಸಮಾಜ ನಿರ್ಮಾಣಕ್ಕೆ ಪ್ರೇರೇಪಣೆ ನೀಡಿದ ಈ ಮಹಾನ್ ವ್ಯಕ್ತಿಗಳನ್ನು ಈ ಸಂದರ್ಭದಲ್ಲಿ ಅತ್ಯಂತ ಗೌರವಪೂರ್ವಕವಾಗಿ ಸ್ಮರಿಸುತ್ತೇನೆ. ನೂರು ವರ್ಷಗಳ ನಂತರ ಈ ಮೈಲಿಗಲ್ಲನ್ನು ಆಚರಿಸುವುದು ಕೇವಲ ಒಂದು ಸ್ಮರಣಾರ್ಥ ಸಮ್ಮೇಳನವಾಗಿ ಮಾತ್ರವಲ್ಲ-ಇದು ಹೊಸ ಸಾಮರಸ್ಯ ಸಮಾಜದ ನಿರ್ಮಾಣಕ್ಕೆ ನೀಡುವಂತಹ ಒಂದು ಶಕ್ತಿಯುತ ಕರೆಯಾಗಿದೆ ಎಂದು ಹೇಳಿದರು.

ಕಳೆದ ಶತಮಾನದಲ್ಲಿ ನಡೆದ ಗಮನಾರ್ಹವಾದ ಪ್ರಗತಿಗಳು, ವಿಶೇಷವಾಗಿ ತಂತ್ರಜ್ಞಾನದಲ್ಲಿ ನಡೆದ ಅನ್ವೇಷಣೆಗಳು ಮತ್ತು ಜಾಗತೀಕರಣದ ಪರಿಣಾಮವಾಗಿ, ನಾವು ಬೌತಿಕವಾಗಿ ಹತ್ತಿರವಾಗಿದ್ದೇವೆ. ಆದರೆ, ನಮ್ಮ ಹೃದಯಗಳು ಮತ್ತಷ್ಟು ದೂರ ಹೋಗಿವೆ. ಅಸಮಾನತೆ, ಅಜ್ಞಾನ, ಅಸಹಿಷ್ಣುತೆ ಮತ್ತು ಪೂರ್ವಾಗ್ರಹಗಳಿಂದ ಪ್ರೇರಿತವಾದ ಭಯ ಮತ್ತು ಅಪನಂಬಿಕೆಗಳು ನಮ್ಮ ಮನಸ್ಸುಗಳನ್ನು ಆವರಿಸಿಕೊಂಡಿವೆ. ಇದರ ಪರಿಣಾಮವಾಗಿ, ಮಾನವೀಯತೆಯ ಮೂಲಭೂತ ಮೌಲ್ಯಗಳು ಮಸುಕಾಗಿವೆ. ಸಮಾಜದಲ್ಲಿ ಎಲ್ಲಾ ವರ್ಗಗಳ ಜನರ ಕೂಗು, ಸಂಘರ್ಷಗಳು ಮತ್ತು ಈ ಜಗತ್ತಿನ ಮೌನ ರೋಧನೆಗಳು ನಮ್ಮೆಲ್ಲರ ತುರ್ತು ಗಮನಕ್ಕೆ ಕಾದಿವೆ.

ಸಮ್ಮೇಳನದ ಈ ಮಹತ್ವಪೂರ್ಣ ಕ್ಷಣಗಳು ಶ್ರೀ ನಾರಾಯಣ ಗುರುಗಳ ಬೋಧನೆಗಳನ್ನು ಪುನರ್ಮನನ ಮಾಡುವ ಕ್ಷಣಗಳು ಮಾತ್ರವಲ್ಲ, ಅದು ಧಾರ್ಮಿಕ ಧ್ರುವೀಕರಣ, ಸಾಮಾಜಿಕ ಅನ್ಯಾಯ ಮತ್ತು ಅಂತರ್ಧರ್ಮೀಯ ಸಂವಾದದ ನಿರ್ಣಾಯಕ ಅಗತ್ಯವನ್ನು ಸ್ಪಷ್ಟವಾಗಿ ಎಲ್ಲರಿಗೆ ಸೂಚಿಸುವ ಸಮಯೋಚಿತ ಜ್ಞಾಪನೆಯಾಗಿವೆ. ಆದ್ದರಿಂದ, “ಮಾನವೀಯತೆಗಾಗಿ ಧರ್ಮಗಳ ಏಕತೆ” ಎಂಬ ಈ ವಿಶ್ವ ಸಮ್ಮೇಳನವನ್ನು ಆಯೋಜಿಸಿದ ಶಿವಗಿರಿ ಮಠದ ಶ್ರೀ ನಾರಾಯಣ ಧರ್ಮ ಸಂಘದ ಟ್ರಸ್ಟ್‌ನ ಅಧ್ಯಕ್ಷರಾದ ಸ್ವಾಮಿ ಸಚ್ಚಿದಾನಂದರಿಗೆ, ಕಾರ್ಡಿನಲ್ ಮಿಗುಯೆಲ್ ಏಂಜೆಲ್ ಆಯುಸೊ ಗುಯಿಕ್ಸೊಟ್, M.C.C.J. ಅಂತರಧರ್ಮಿಯ ಸಂವಾದದ ಡಿಕ್ಯಾಸ್ಟರಿಯ ಪ್ರಿಫೆಕ್ಟ್, ಕಾರ್ಡಿನಲ್- ಡೆಸಿಗ್ನೇಟ್ ಮಾನ್ಸಿಂಜರ್ ಜಾರ್ಜ್ ಕೂವಕಾಡ್ ಮತ್ತು ಅವರ ತಂಡಕ್ಕೆ, ನಾನು ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಸಭಾಧ್ಯಕ್ಷರು ಹೇಳಿದರು.

ಈ ಶುಭ ಸಂದರ್ಭದಲ್ಲಿ, ನನಗೆ ನನ್ನ ತಾಯ್ನಾಡಾದ ಭಾರತದ ಪೂಜ್ಯ ಋಷಿ ಮುನಿಗಳ “ವಸುಧೈವ ಕುಟುಂಬಕಂ” – ಜಗತ್ತು ಒಂದೇ ಕುಟುಂಬ ಎನ್ನುವ ಅಮರ ನುಡಿಗಳು ನೆನಪಿಗೆ ಬರುತ್ತದೆ. ಎಲ್ಲರೂ ನಮ್ಮವರು ಎನ್ನುವ ಈ ಪ್ರಾಚೀನ ಮಂತ್ರವು ಇಂದಿನ ಈ ಸಂದರ್ಭದಲ್ಲಿ ಹೆಚ್ಚು ಪ್ರಸ್ತುತವಾಗಿದ್ದು, ನಮ್ಮ ದೇಶದ ಸಂವಿಧಾನದ ಆದರ್ಶವನ್ನೂ ಪ್ರತಿಬಿಂಬಿಸುತ್ತದೆ. ತಾರತಮ್ಯ ಮತ್ತು ವಿಭಜನೆಯಿಂದ ನಲುಗುತ್ತಿರುವ ಸಮಾಜದಲ್ಲಿ ಪ್ರಬಲ ಧ್ವನಿಗಳು ದ್ವೇಷವನ್ನು ಪ್ರಚೋದಿಸುತ್ತಿರುವಾಗ, ನಾವು ಒಗ್ಗಟ್ಟಾಗಿ ಏಕತೆ ಮತ್ತು ಸಹಿಷ್ಣುತೆಯ ಸಮಾಜ ನಿರ್ಮಾಣಕ್ಕೆ ಮಾರ್ಗದರ್ಶಕರಾಗಬೇಕು ಎಂದರು.

ವಿಶ್ವ ಕ್ರೈಸ್ತ ಧರ್ಮ ಗುರು, ಅತ್ಯಂತ ಗೌರವಾನ್ವಿತ ಮತ್ತು ವಂದನೀಯ ಪೋಪ್ ಫ್ರಾನ್ಸಿಸ್ ಅವರನ್ನು ಖುದ್ದಾಗಿ ಭೇಟಿ ಮಾಡಿ ಅವರ ಆಶೀರ್ವಾದವನ್ನು ಪಡೆದಿರುವುದು, ನನಗೆ ಜನಸೇವೆ ಮಾಡಲು ಇನ್ನಷ್ಟು ಶಕ್ತಿ ನೀಡಿದೆ. ಪೋಪ್ ಫ್ರಾನ್ಸಿಸ್ ಅವರ ಸಹೃದಯತೆ, ಪ್ರೀತಿ ಮತ್ತು ಔದಾರ್ಯವು ನನ್ನ ಹೃದಯವನ್ನು ಸ್ಪರ್ಶಿಸಿದೆ. ಅಂತರ್ಧರ್ಮೀಯ ಸಂವಾದದ ಮೂಲಕ, ಅವರು ಶಾಂತಿ, ನ್ಯಾಯ ಮತ್ತು ಸಹಿಷ್ಣುತೆಯನ್ನು ಪ್ರೋತ್ಸಾಹಿಸುವ 21ನೇ ಶತಮಾನದ ಅತ್ಯಂತ ಪ್ರಭಾವಶಾಲಿ ಗುರುಗಳಾಗಿದ್ದಾರೆ ಎಂದು ಹೇಳಲು ಸಂತೋಷ ಪಡುತ್ತೇನೆ ಎಂದು ಹೇಳಿದರು.

ಪ್ರತಿಯೊಂದು ಧರ್ಮಗ್ರಂಥ, ನಂಬಿಕೆ ಮತ್ತು ಆಧ್ಯಾತ್ಮಿಕ ಮಾರ್ಗದ ಮೂಲ ತತ್ವವು ಅಚಲವಾದ ಪ್ರೀತಿ ಮತ್ತು ಕರುಣೆಯಾಗಿದೆ. ಅದು ಪವಿತ್ರ ಬೈಬಲ್, ಕುರಾನ್, ವೇದಗಳು, ಧಮ್ಮಪದ ಅಥವಾ ಟೋರಾ ಆಗಿರಲಿ, ಎಲ್ಲ ಧರ್ಮಗ್ರಂಥಗಳ ಸಾರವೇ “ನಾವೆಲ್ಲರೂ ಒಂದೇ”. ಇದು ಯಾವ ಕಾಲದಲ್ಲೂ ಬದಲಾವಣೆಯಾಗುವುದಿಲ್ಲ ಎನ್ನುವ ಮೂಲಭೂತ ಸತ್ಯವನ್ನು ನಾವು ಸದಾ ನೆನಪಿಟ್ಟುಕೊಳ್ಳಬೇಕು ಎಂದು ವಿಧಾನ ಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಫರೀದ್ ಹೇಳಿದರು.

it is a powerful force of harmony on earth: UT Khader Religious faith is not a weakness ಅದು ಭೂಮಿಯ ಮೇಲಿನ ಸೌಹಾರ್ದತೆಯ ಪ್ರಬಲ ಶಕ್ತಿಯಾಗಿದೆ: ಯು.ಟಿ.ಖಾದರ್ ಧಾರ್ಮಿಕ ನಂಬಿಕೆ ದೌರ್ಬಲ್ಯವಲ್ಲ
Share. Facebook Twitter LinkedIn WhatsApp Email

Related Posts

2026ರ ಚುನಾವಣೆಗೆ ಮುನ್ನ ಮೇಲ್-ಇನ್ ಮತಪತ್ರಗಳು, ಮತದಾನ ಯಂತ್ರ ತೆಗೆದುಹಾಕುವ ಆದೇಶಕ್ಕೆ ಸಹಿ : ಅಮೆರಿಕಾ ಅಧ್ಯಕ್ಷ ಟ್ರಂಪ್

18/08/2025 6:01 PM1 Min Read

BREAKING : ಆಕಾಶದಲ್ಲಿ ಹಾರುವಾಗಲೇ `ವಿಮಾನದ ಎಂಜಿನ್’ ಸ್ಪೋಟ : ತಪ್ಪಿದ ಭಾರೀ ದುರಂತ | WATCH VIDEO

18/08/2025 8:44 AM1 Min Read

BREAKING : ಪಾಕಿಸ್ತಾನದಲ್ಲಿ ಮತ್ತೊಂದು ರೈಲು ಅಪಘಾತ : ಓರ್ವ ಸಾವು, 20 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ.!

17/08/2025 11:03 AM1 Min Read
Recent News

ಪೋಷಕರೇ, ನಿಮ್ಮ ಮಕ್ಕಳು ರಾತ್ರಿ ವೇಳೆ ‘ಕಾಲು ನೋವು’ ಅಂತಾ ಅಳುತ್ತಿದ್ದಾರಾ.? ಇದಕ್ಕೆ ಕಾರಣಗಳೇನು ಗೊತ್ತಾ?

18/08/2025 10:20 PM

ಗಮನಿಸಿ : ಮುಖ & ಕುತ್ತಿಗೆಯ ಮೇಲೆ ನೀವು ಗುರುತಿಸಬಹುದಾದ ‘ಕಿಡ್ನಿ ಕಾಯಿಲೆ’ಯ ಲಕ್ಷಣಗಳಿವು.!

18/08/2025 9:50 PM

ವಿಶ್ವ ದಾಖಲೆ ಪುಟ ಸೇರಿದ ಶಕ್ತಿ ಯೋಜನೆ: ಸಂತಸ ಹಂಚಿಕೊಂಡ ಸಿಎಂ ಸಿದ್ಧರಾಮಯ್ಯ

18/08/2025 9:45 PM

ಆತ್ಮಹತ್ಯೆ ಮಾಡಿಕೊಳ್ಳಲು ಕಾವೇರಿ ನದಿಗೆ ಹಾರಿದ ಮಾಜಿ ಸೈನಿಕ, ಮುಂದೆ ಆಗಿದ್ದೇನು ಗೊತ್ತಾ?

18/08/2025 9:39 PM
State News
KARNATAKA

ವಿಶ್ವ ದಾಖಲೆ ಪುಟ ಸೇರಿದ ಶಕ್ತಿ ಯೋಜನೆ: ಸಂತಸ ಹಂಚಿಕೊಂಡ ಸಿಎಂ ಸಿದ್ಧರಾಮಯ್ಯ

By kannadanewsnow0918/08/2025 9:45 PM KARNATAKA 1 Min Read

ಬೆಂಗಳೂರು: ಇಡೀ ನಾಡು ಹೆಮ್ಮೆ ಪಡುವ ಕ್ಷಣವಿದು. ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯು ಪ್ರತಿಷ್ಠಿತ “Golden Book of…

ಆತ್ಮಹತ್ಯೆ ಮಾಡಿಕೊಳ್ಳಲು ಕಾವೇರಿ ನದಿಗೆ ಹಾರಿದ ಮಾಜಿ ಸೈನಿಕ, ಮುಂದೆ ಆಗಿದ್ದೇನು ಗೊತ್ತಾ?

18/08/2025 9:39 PM

BREAKING: ಬೆಂಗಳೂರು ಸಿಲಿಂಡರ್ ಸ್ಪೋಟ: ಇಂದು ಚಿಕಿತ್ಸೆ ಫಲಿಸದೇ ಇಬ್ಬರು ಸಾವು, ಮೃತರ ಸಂಖ್ಯೆ 3ಕ್ಕೆ ಏರಿಕೆ

18/08/2025 9:07 PM

ನಾಳೆ, ನಾಡಿದ್ದು ಬಳ್ಳಾರಿ ಜಿಲ್ಲೆಯ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut

18/08/2025 8:59 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.