ಬೆಂಗಳೂರು: ವಯಸ್ಸಾದವರೂ ಕೂಡ ಭಾರತದ ಜಿಡಿಪಿ ಹೆಚ್ಚಳಕ್ಕೆ ಸಹಕಾರ ನೀಡಲು ಶಕ್ತರಾಗಿದ್ದು. ಅವರ ಕೊಡುಗೆಯನ್ನು ಉಪಯೋಗಿಸಿಕೊಳ್ಳಬೇಕು ಎಂದು ರೋಹಿಣಿ ನಿಲೇಕಣಿ ಲೋಕೋಪಕಾರಿ ಸಂಸ್ಥೆ ಅಧ್ಯಕ್ಷೆ ರೋಹಿಣಿ ನಿಲೇಕಣಿ ಪ್ರತಿಪಾದಿಸಿದ್ದಾರೆ.
ರೋಹಿಣಿ ನಿಲೇಕಣಿ ಲೋಕೋಪಕಾರಿ ಸಂಸ್ಥೆ, ಡಾಲ್ಬರ್ಗ್ ಅಡ್ವೈಸರ್ಸ್ ಹಾಗೂ ಅಶೋಕ ಚೇಂಜ್ ಮೇಕರ್ಸ್ ಸಹಭಾಗಿತ್ವದಲ್ಲಿ ಭಾರತಾದ್ಯಂತ “ವಯಸ್ಸಾದವರು ಹಾಗೂ ದೀರ್ಘಾಯುಷ್ಯಗಳ ಬಗ್ಗೆ ಅರ್ಥಮಾಡಿಕೊಳ್ಳವ ಬಗ್ಗೆ ಸಮೀಕ್ಷೆ ನಡೆಸಿ ವರದಿ ಬಿಡುಗಡೆ ಮಾಡಲಾಗಿದೆ.
ಈ ವರದಿಯ ಪ್ರಕಾರ, 2023-24ರಲ್ಲಿ, ಇಳಿವಯಸ್ಸಿನ ಕಾರ್ಮಿಕ ಆದಾಯದಲ್ಲಿ 68 ಬಿಲಿಯನ್ ಯುಎಸ್‌ಡಿ ಕೊಡುಗೆಯನ್ನು ಹಿರಿಯನಾಗರಿಕರು ನೀಡಿದ್ದಾರೆ, ಇದು ಭಾರತದ ಜಿಡಿಪಿಯ ಶೇ.3 ರಷ್ಟಿದೆ. ವಾರ್ಷಿಕವಾಗಿ, ಅವರು ತಮ್ಮ ಕುಟುಂಬಗಳ ಆರೈಕೆಗಾಗಿ ಸುಮಾರು 14 ಬಿಲಿಯನ್ ಗಂಟೆ ಹಾಗೂ 2.6 ಬಿಲಿಯನ್ ಗಂಟೆಗಳ ಕಾಲ ಆರೈಕೆ ಮಾಡಲು ಮೀಸಲಿಡುತ್ತಿದ್ದಾರೆ. ಭಾರತದಲ್ಲಿ ಆರೋಗ್ಯಕರ ಹಿರಿಯನಾಗರಿಕರು ಉದ್ಯೋಗಿಗಳಿಗಾಗಿ ಮುಂದುವರೆಯಲು ಇಚ್ಚಿಸಿದರೆ ದೇಶದ ಜಿಡಿಪಿ ಶೇ.1.5 ರಷ್ಟು ಹೆಚ್ಚಾಗಬಹುದು ಎಂದು ಸಂಶೋಧನೆ ಸೂಚಿಸುತ್ತದೆ.
ವರದಿಯನ್ನು ಹತ್ತು ತಿಂಗಳುಗಳ ಅವಧಿಯಲ್ಲಿ ಪ್ರಮುಖ ತಜ್ಞ ಸಂಸ್ಥೆಗಳೊಂದಿಗಿನ ಸಂವಹನ ನಡೆಸಿ ಸಿದ್ಧಪಡಿಸಲಾಗಿದೆ ಪ್ರಮುಖವಾಗಿ ಆರ್ಥಿಕ ಭದ್ರತೆ, ಆರೋಗ್ಯ ಮತ್ತು ಯೋಗಕ್ಷೇಮ, ಸ್ವಾತಂತ್ರ್ಯ ಮತ್ತು ಸಾಮಾಜಿಕ ಸಂಪರ್ಕ ಈ ವಿಭಾಗದಲ್ಲಿ ಸಮೀಕ್ಷೆ ನಡೆಸಿ ತಯಾರಿಸಲಾಗಿದೆ.
ಈ ಕುರಿತು ಮಾತನಾಡಿದ ರೋಹಿಣಿ ನಿಲೇಕಣಿ, 2047 ರ ಹೊತ್ತಿಗೆ ಭಾರತವು 300 ಮಿಲಿಯನ್ ವಯಸ್ಸಾದವರನ್ನು ಹೊಂದಲಿದೆ. ಇಳಿವಯಸ್ಸಿನವರು ದುರ್ಬಲದ ಗುಂಪಲ್ಲ. ಇವರನ್ನೂ ಸಹ ಮೌಲ್ಯಯುತವಾಗಿ ಪರಿಗಣಿಸಬೇಕು.ನಮ್ಮ ದೇಶದಲ್ಲಿ ವಯಸ್ಸಾದವರ ಬಗ್ಗೆ ಸೂಕ್ತ ವ್ಯಾಖ್ಯಾಯನ ಅವಶ್ಯಕ. ಈಗಿನಿಂದಲೇ ಉತ್ತಮ ಆರೋಗ್ಯ ರೂಪಿಸಿಕೊಳ್ಳುವುದರಿಂದ ವಯಸ್ಸಾದ ಬಳಿಕವೂ ಆರೋಗ್ಯವಾಗಿ ಇರಬಹುದು, ಅಷ್ಟೇ ಏಕೆ, ನಮ್ಮ ದೇಶದ ಜಿಡಿಪಿ ಬೆಳವಣಿಗೆಗೆ ಸಹಕರಿಸಬಹುದು ಎಂದು ಹೇಳಿದರು.
ಡಾಲ್ಬರ್ಗ್‌ನ ಏಷ್ಯಾ ಪೆಸಿಫಿಕ್‌ನ ಪ್ರಾದೇಶಿಕ ನಿರ್ದೇಶಕ ಸ್ವೆಥಾ ಟೊಟಾಪಲ್ಲಿ ಮಾತನಾಡಿ, ಇಳಿವಯಸ್ಸಿನವರ ಬಗ್ಗೆ ನಾವೆಲ್ಲರೂ ಅರ್ಥಮಾಡಿಕೊಳ್ಳುವ ರೀತಿ ಬದಲಾಗಬೇಕು. ಅವರು ಎಂದಿಗೂ ಹೊರೆಯಾಗುವುದಿಲ್ಲ. ನಮ್ಮ ದೇಶದ ಆಸ್ತಿಯಲ್ಲಿ ಅವರ ಪಾಲೂ ಇದೆ. ಈ ಬಗ್ಗೆ ಸೂಕ್ತ ವ್ಯಾಖ್ಯಾಯನ ಅವಶ್ಯಕ, ಈ ನಿಟ್ಟಿನಲ್ಲಿ ವರದಿ ತಯಾರಿಸಲಾಗಿದೆ ಎಂದು ಹೇಳಿದರು.
ಪೌರ ನೌಕರರ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಮದ್ದೂರು ಪುರಸಭೆ ಅಧ್ಯಕ್ಷೆ ಕೋಕಿಲ ಅರುಣ್ ಬೆಂಬಲ
‘ಥಗ್ ಲೈಫ್’ ವಿವಾದ: ಕಮಲ್ ಹಾಸನ್ ಭಾಷಾ ಹೇಳಿಕೆಗೆ ಬಹಿಷ್ಕಾರ ಕರೆ | Thug of life