ನವದೆಹಲಿ : ಲಿವ್-ಇನ್ ಸಂಬಂಧದಲ್ಲಿರುವ ಅಥವಾ ಪ್ರವೇಶಿಸಲು ಯೋಜಿಸುತ್ತಿರುವ ವ್ಯಕ್ತಿಗಳು ಉತ್ತರಾಖಂಡದ ಏಕರೂಪ ನಾಗರಿಕ ಸಂಹಿತೆ (UCC) ಜಾರಿಗೆ ಬಂದ ನಂತರ ತಮ್ಮನ್ನ ನೋಂದಾಯಿಸಿಕೊಳ್ಳಬೇಕು. ನಿಯಮಗಳನ್ನ ಪಾಲಿಸಲು ವಿಫಲವಾದರೆ ಆರು ತಿಂಗಳವರೆಗೆ ಜೈಲು ಶಿಕ್ಷೆ ಮತ್ತು 25,000 ರೂ.ಗಳ ದಂಡ ಅಥವಾ ಎರಡನ್ನೂ ಎದುರಿಸಬೇಕಾಗುತ್ತದೆ.
ಎಲ್ಲಾ ನಾಗರಿಕರಿಗೆ ಅವರ ಧರ್ಮವನ್ನ ಲೆಕ್ಕಿಸದೆ ಏಕರೂಪದ ಮದುವೆ, ವಿಚ್ಛೇದನ, ಭೂಮಿ, ಆಸ್ತಿ ಮತ್ತು ಆನುವಂಶಿಕ ಕಾನೂನುಗಳನ್ನು ಪ್ರಸ್ತಾಪಿಸುವ ಯುಸಿಸಿ ಕುರಿತ ಮಸೂದೆಯನ್ನ ಇಂದು ಉತ್ತರಾಖಂಡ ವಿಧಾನಸಭೆಯಲ್ಲಿ “ಜೈ ಶ್ರೀ ರಾಮ್” ಮತ್ತು “ವಂದೇ ಮಾತರಂ” ಘೋಷಣೆಗಳ ನಡುವೆ ಮಂಡಿಸಲಾಯಿತು.
ಪ್ರಸ್ತಾವಿತ ಕಾನೂನಿನ ಪ್ರಕಾರ, 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳಿಗೆ ಪೋಷಕರ ಒಪ್ಪಿಗೆ ಅಗತ್ಯವಿದೆ ಮತ್ತು ಅವರು ಉತ್ತರಾಖಂಡದ ನಿವಾಸಿಗಳೇ ಅಥವಾ ಅಲ್ಲವೇ ಎಂದು ರಿಜಿಸ್ಟ್ರಾರ್ಗೆ ಹೇಳಿಕೆಯನ್ನು ಸಲ್ಲಿಸಬೇಕು.
BIGG NEWS : 2045ರ ವೇಳೆಗೆ ಭಾರತದ ‘ಇಂಧನ’ ಬೇಡಿಕೆ ದುಪ್ಪಟ್ಟು : ಪ್ರಧಾನಿ ಮೋದಿ
UPDATE : ಮಧ್ಯಪ್ರದೇಶದ ‘ಪಟಾಕಿ ಕಾರ್ಖಾನೆ’ಯಲ್ಲಿ ಸ್ಫೋಟ : 7 ಮಂದಿ ಸಜೀವ ದಹನ, 100ಕ್ಕೂ ಹೆಚ್ಚು ಜನರಿಗೆ ಗಾಯ