ನವದೆಹಲಿ : ಬೆಂಗಳೂರಿನ ಶ್ರೀನಿವಾಸಪುರದ ಬಳಿ ಇರುವ ಕೋಗಿಲು ಕ್ರಾಸ್ ಬಳಿ ಅಕ್ರಮವಾಗಿ ಒತ್ತುವರಿ ಮಾಡಿದ ಮನೆಗಳನ್ನು ತೆರವು ಮಾಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಕೇರಳ ಸಿಎಂ ಪಿಣರಾಯಿ ವಿಜಯನ್ ಟೀಕೆಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಮನೆಗಳನ್ನು ತೆರವು ಮಾಡುವ ವೇಳೆ ಕಾನೂನಿನ ಪಾಲಿಸಲಾಗಿದ್ದು, ಸಂತ್ರಸ್ತರಿಗೆ ಬೇರೆ ವಸತಿ ವ್ಯವಸ್ಥೆ ಕಲ್ಪಿಸುವಂತೆ ಜಿಬಿಎ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ನವದೆಹಲಿಯಲ್ಲಿ ಮಾತನಾಡದ ಅವರು, 2020-2021 ರಿಂದ ಅನಧಿಕೃತವಾಗಿ ಅಲ್ಲಿ ವಾಸಿಸಿದ್ದರು. ಅನಧಿಕೃತ ಮನೆಗಳಿಗೆ ನೋಟಿಸ್ ಸಹ ಕೊಡಲಾಗಿತ್ತು ನೋಟಿಸ್ ಕೊಟ್ಟರು ಸಹ ಅವರು ಕೇಳಿರಲಿಲ್ಲ. ಹಾಗಾಗಿ ಮನೆಗಳನ್ನು ತೆರವು ಮಾಡಲಾಗಿದೆ. ಒತ್ತುವರಿ ತೆರವು ವೇಳೆ ಕಾನೂನು ನಿಯಮ ಪಾಲಿಸಿದ್ದೇವೆ. ಅವರಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡುವಂತೆ ಜಿಬಿಎ ಕಮಿಷನರ್ ಜೊತೆಗೆ ಮಾತನಾಡಿದ್ದೇನೆ ಎಂದು ಅವರು ತಿಳಿಸಿದರು.
ಜನವರಿ 5 ರಿಂದ ದೇಶಾದ್ಯಂತ ಮನ್ ರೇಗಾ ಬಚಾವೋ ಆಂದೋಲನ ಕಾರ್ಯಕ್ರಮ ಹಿನ್ನೆಲೆ ಮನ್ ರೇಗಾ ಯೋಜನೆಗೆ ‘ವಿಬಿಜಿ ರಾಮಜಿ’ ಎಂದು ಬಿಜೆಪಿಯ ನೇತೃತ್ವದ ಕೇಂದ್ರ ಸರ್ಕಾರ ಮರುನಾಮಕರಣ ಮಾಡಿದೆ. ಕೇಂದ್ರದಲ್ಲಿ ಖಂಡಿಸಿ ದೇಶಾದ್ಯಂತ ಆಂದೋಲನ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ದೆಹಲಿಯಲ್ಲಿ ತಿಳಿಸಿದರು.ಇನ್ನು ಕರ್ನಾಟಕ ರಾಜಕೀಯ ಬೆಳವಣಿಗೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಯಾವುದೇ ಚರ್ಚೆಯಾಗಿಲ್ಲ ರಾಜ್ಯದ ರಾಜಕೀಯ ಬೆಳವಣಿಗೆಗೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ತಿಳಿಸಿದರು.








