ಬೆಂಗಳೂರು : ರಾಜ್ಯದಲ್ಲಿ RSS ಚಟುವಟಿಕೆಗಳಿಗೆ ನಿರ್ಬಂಧ ವಿಚಾರಕ್ಕೆ ಸಂಬಂಧಸಿದಂತೆ ಸಿಎಂ ಸಿದ್ದರಾಮಯ್ಯಗೆ ಪ್ರಿಯಾಂಕ್ ಖರ್ಗೆ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅಗ್ರಹಿಸಿದ್ದಾರೆ.
ಬೆಂಗಳೂರಲ್ಲಿ ಮಾತನಾಡಿದ ಅವರು, ಸಂಘ ದೇಶ ಸೇವೆ ನಿರಂತವಾಗಿ ಮಾಡುತ್ತ ನೂರು ವರ್ಷ ಪೂರೈಸಿದೆ. ಜಮ್ಮು ಕಾಶ್ಮೀರದಲ್ಲಿ ಸಂವಿಧಾನ ಜಾರಿಯಲ್ಲಿರಲಿಲ್ಲ ಅಲ್ಲು ಜಾರಿಯಾಗಬೇಕೆಂದು ಶ್ಯಾಮ್ ಪ್ರಕಾಶ್ ಮುಖರ್ಜಿ ಹುತಾತ್ಮರಾದರು. ಸಂಘ ವಂಶಪಾರಂಪರ್ಯ ಇಲ್ಲ, ಸ್ವಾರ್ಥ ಇಲ್ಲ. ಇದನ್ನು ತಿಳಿದುಕೊಳ್ಳಲು ಪ್ರಿಯಾಂಕ್ ಅಪ್ರಬುದ್ಧ ಪತ್ರ ಬರೆದಿದ್ದಾರೆ.
ಓರ್ವ ವ್ಯಕ್ತಿ ಒಬ್ಬರನ್ನು ಟೀಕಿಸಬೇಕು ಅಂದ್ರೆ ಎರಡು ಕಾರಣಗಲಿರುತ್ತೆ. ಒಂದು ಸೈದ್ದಂತಿಕಾ ಮತ್ತೊಂದು ಅರಿವಿನ ಕೊರತೆ ಕಾರಣವಾಗಿರುತ್ತದೆ. ಇಲ್ಲಿ ಪ್ರಿಯಾಂಕ್ ಖರ್ಗೆ ಕೂಡ ಅರಿವಿನ ಕೊರತೆ ಇದೆ. ಪ್ರಿಯಾಂಕ್ ಖರ್ಗೆ ಅವರು ಆರ್ಟಿಕಲ್ 19ನ್ನು ಉಲ್ಲಂಘನೆ ಮಾಡಿದ್ದಾರೆ. ಆರ್ಟಿಕಲ್ 19 ಪ್ರಕಾರ ಮುಕ್ತವಾಗಿ ಸಭೆ ಸೇರಬಹುದು, ಮಾತಾಡಬಹುದು.
ಹಾಗಾಗಿ ಪ್ರಿಯಾಂಕ್ ಅವರನ್ನು ಸಂಪುಟದಿಂದ ವಜಾ ಮಾಡಬೇಕು. ಸಂವಿಧಾನ ಆಶಾಯಕ್ಕೆ ವಿರುದ್ಧವಾಗಿ ನಕಾರಾತ್ಮಕ ಆಲೋಚನೆ ತುಂಬುತ್ತಾರೆ. ನಕಾರಾತ್ಮಕ ಆಲೋಚನೆ ತುಂಬುತ್ತಾರೆ ಅಂತ ಪ್ರಿಯಾಂಕ್ ಉಲ್ಲೆಖಿಸಿದ್ದಾರೆ. ಯಾವ ನಕಾರಾತ್ಮಕ ವಿಚಾರ ಅಂತ ಹೇಳಿ ಇಲ್ಲವೇ ರಾಜೀನಾಮೆ ನೀಡಿ ಎಂದು ಆಗ್ರಹಿಸಿದರು.