ಕಲಬುರ್ಗಿ : ಯಾವುದೇ ಇಲಾಖೆಯಲ್ಲಿನ ಅಧಿಕಾರಿಗಳು ಮಾಡುವ ಎಡವಟ್ಟು ಒಂದೆರಡು ಅಲ್ಲ. ಇದೀಗ ಸರ್ಕಾರದ ಯಡವಟ್ಟಿಗೆ ಕುಟುಂಬವೊಂದು ಕಂಗಾಲಾಗಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಹಿಂದೂ ವ್ಯಕ್ತಿಯನ್ನು ಮುಸ್ಲಿಂ ಜಾತಿಗೆ ಸೇರಿಸಿ ಅಧಿಕಾರಿಗಳು ಯಡವಟ್ಟು ಮಾಡಿದ್ದಾರೆ.
ಹೌದು ಕಲಬುರಗಿಯ ರಾಮತೀರ್ಥ ನಗರದ ಮಹಾಂತಪ್ಪಾ ಕುಟುಂಬ ಕಂಗಾಲಾಗಿದೆ. ಮಹಾಂತಪ್ಪ ಕೊತ್ಲೆ ಕುಟುಂಬ ವೀರಶೈವ ಲಿಂಗಾಯತ ಸಮುದಾಯದವರು. ಮಹಾಂತಪ್ಪ ತನ್ನ ಮಗನ ಜಾತಿ ಮತ್ತು ಆದಾಯ ಪ್ರಮಾಣ ಪಾತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ಭರ್ತಿ ಮಾಡಿ ಸಲ್ಲಿಕೆ ಮಾಡಿದ್ದರು.
ಆದರೆ, ತಹಸಿಲ್ದಾರ್ ಕಚೇರಿಯಿಂದ ಜಾತಿ ಪ್ರಮಾಣ ಪತ್ರ ಪಡೆದಾಗ ಮುಸ್ಲಿಂ ಜಾತಿ ಎಂದು ಉಲ್ಲೇಖ ಆಗಿದೆ.ಕಲಬುರಗಿ ತಹಸಿಲ್ದಾರ್ ಕಚೇರಿಯಿಂದ ಮುಸ್ಲಿಂ ಜಾತಿ ಅಂತಾ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ವಿತರಣೆ ಮಾಡಲಾಗಿದೆ. ಮುಸ್ಲಿಂ ಜಾತಿ ಆದಾಯ ಪ್ರಮಾಣ ವಿತರಿಸಿದ್ದಕ್ಕೆ ಮಹಾಂತಪ್ಪ ಪುತ್ರನ ಶಿಕ್ಷಣಕ್ಕೆ ತೊಂದರೆಯಾಗಿದೆ.