ನವದೆಹಲಿ:ಕೇವಲ ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧಿ ಪಡೆಯಲು ವ್ಯಕ್ತಿಯೊಬ್ಬ ಚಲಿಸುವ ರೈಲಿನ ಜನರಲ್ ಬೋಗಿಯ ಸೀಟನ್ನು ಹರಿದು ಹಾಕುತ್ತಿರುವ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರು ಈತನ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ.
ವೈರಲ್ ವಿಡಿಯೋದಲ್ಲಿ ಅಂಕಿತಾ ಟೊಪ್ಪೊ ಎಂದು ಗುರುತಿಸಲಾದ ಯುವಕ ತನ್ನ ಸ್ನೇಹಿತರೊಂದಿಗೆ ಸೇರಿ ರೈಲ್ವೇ ಸೀಟನ್ನು ಹಾಳು ಮಾಡುತ್ತಿರುವುದು ಕಂಡುಬಂದಿದೆ. ಗುಲಾಬಿ ಬಣ್ಣದ ಶರ್ಟ್ ಮತ್ತು ನೀಲಿ ಜೀನ್ಸ್ ಧರಿಸಿರುವ ಅಂಕಿತಾ, ರೈಲ್ವೇ ಸೀಟಿನ ಕುಶನ್ ಮತ್ತು ಕವರ್ ಅನ್ನು ಬಲವಂತವಾಗಿ ಹರಿದು ರೈಲಿನ ಬಾಗಿಲಿನ ಬಳಿ ಎಸೆದಿದ್ದಾನೆ. ಈ ಅಮಾನವೀಯ ಕೃತ್ಯವನ್ನು ಈತನ ಸ್ನೇಹಿತ ನಗುತ್ತಾ ಕ್ಯಾಮೆರಾದಲ್ಲಿ ಚಿತ್ರೀಕರಿಸಿದ್ದಾನೆ.
ಅಷ್ಟೇ ಅಲ್ಲದೆ, ವಿಡಿಯೋದ ಕೊನೆಯಲ್ಲಿ ಇಬ್ಬರು ವ್ಯಕ್ತಿಗಳು ಚಲಿಸುವ ರೈಲಿನ ಬೋಗಿಯ ಮೇಲ್ಭಾಗದ ರಾಡ್‌ಗಳನ್ನು ಹಿಡಿದು ನೇತಾಡುತ್ತಾ ಅಪಾಯಕಾರಿ ಸಾಹಸವನ್ನೂ ಮಾಡಿದ್ದಾರೆ.
ಈ ವಿಡಿಯೋ ಹಂಚಿಕೊಂಡಿರುವ ಬಳಕೆದಾರರೊಬ್ಬರು, “ಇದನ್ನು ಮಾಡಲು ಒಬ್ಬ ವ್ಯಕ್ತಿ ಎಷ್ಟು ಮೂರ್ಖನಾಗಿರಬೇಕು? ಆತ ಸೀಟು ಹರಿಯುತ್ತಿರುವಾಗ ಅವನ ಸ್ನೇಹಿತ ನಗುತ್ತಿರುವುದನ್ನು ನೋಡಿ. ಅವರು ಏನೋ ದೊಡ್ಡ ಸಾಧನೆ ಮಾಡಿದ್ದೇವೆ ಎಂದುಕೊಂಡಿದ್ದಾರೆ. ಇದು ಕೇವಲ ನಾಗರಿಕ ಪ್ರಜ್ಞೆಯ ಕೊರತೆಯಲ್ಲ, ಇದೊಂದು ಶಿಕ್ಷಾರ್ಹ ಅಪರಾಧ” ಎಂದು ಕಿಡಿಕಾರಿದ್ದಾರೆ.
ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿ, “ಇವರು ನಮ್ಮ ದೇಶವನ್ನು ನಾಶಮಾಡುವ ಗೆದ್ದಲುಗಳಿದ್ದಂತೆ. ಇಂತಹವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
How stupid one has to be to do this?
See his smile while his friend is tearing the train seat cover apart. They think they achieved something here.
This goes beyond civic sense. This is a punishable offense. pic.twitter.com/t2Sq1MJtpH
— Tarun Gautam (@TARUNspeakss) May 2, 2026








