ಬೆಂಗಳೂರು: ರಾಜ್ಯ ಸರ್ಕಾರದಿಂದ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಅಭಿವೃದ್ಧಿಗಾಗಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್ ಆರಂಭಿಸಲಾಗಿದೆ. ಈ ಯೋಜನೆಯ ಅಡಿಯಲ್ಲಿ ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ 51 ಫೆಲೋಗಳ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಈ ಸಂಬಂಧ ರಾಜ್ಯ ಸರ್ಕಾರದಿಂದ ಮಾಹಿತಿಯನ್ನು ಹಂಚಿಕೊಂಡಿದ್ದು ಕಲ್ಯಾಣ ಕರ್ನಟಾಕ ಜಿಲ್ಲೆಗಳಲ್ಲಿ ಸಾರ್ವಜನಿಕ ನೀತಿಯನ್ನು ಅರಿತ ಯುವ ವೃತ್ತಿಪರ ಸಮೂಹವನ್ನು ಅಭಿವೃದ್ಧಿ ಗೊಳಿಸೋದಕ್ಕಾಗಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್ ಆರಂಭಿಸಲಾಗುತ್ತಿದೆ ಎಂದಿದೆ.
ಈ ಫೆಲೋಗಳು ಕ್ಷೇತ್ರದ ಸ್ಥಿತಿಗತಿಗಳ ಮಾಹಿತಿ ಸಂಗ್ರಹ ಮಾಡಬೇಕು. ಸ್ಥಳೀಯ ಆಡಳಿತದ ಬಗ್ಗೆ ತಿಳುವಳಿಕೆ ಹೊಂದಿರಬೇಕು. ಅಭಿವೃದ್ಧಿ ಯೋಜನೆಗಳ ಸಮರ್ಪಕ ಅನುಷ್ಠಾನದಂತ ಕಾರ್ಯವನ್ನು ಮಾಡಬೇಕು ಎಂದು ತಿಳಿಸಿದೆ.
ಕಾರ್ಯಾವಧಿ – 2 ವರ್ಷಗಳು ಆಗಿದ್ದಾವೆ.
ಸಂಭಾವನೆ – ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್ ಗಳಿಗೆ ನೇಮಕಗೊಳ್ಳೋರಿಗೆ ಪ್ರತಿ ತಿಂಗಳು ಪ್ರಯಾಣ ಭತ್ಯೆ ಸೇರಿ 61,500 ನೀಡಲಾಗುತ್ತದೆ.
ಅರ್ಹತೆಯ ಮಾನದಂಡಗಳು
- ವಯಸ್ಸು 32 ವರ್ಷಕ್ಕಿಂತ ಕಡಿಮೆ ಇರಬೇಕು.
- 1-2 ವರ್ಷಗಳ ಕ್ಷೇತ್ರ ಅನುಭವ ಹೊಂದಿರುವ ಪದವೀಧರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು
- ಕನ್ನಡ ಭಾಷಾ ಜ್ಞಾನ ಕಡ್ಡಾಯ. ಅದು ಮಾತಾಡೋಕೆ, ಓದೋಕೆ, ಬರೆಯೋಕೆ ಬರಬೇಕು.
- ಸಾಮಾಜಿಕ ವಿಜ್ಞಾನ ಕ್ಷೇತ್ರಗಳಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಹೊಂದಿರಬೇಕು.
- ಕ್ಷೇತ್ರದ ಅನುಭವ ಹೊಂದಿರುವ ಸ್ನಾತಕ ಪದವೀಧರರಿಗೆ ಆದ್ಯತೆ. ಅಂದ್ರೆ ಎಂ.ಫೀಲ್, ಡಿ.ಫೀಲ್ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಾಶಸ್ತ್ಯವಿದೆ.
- ಕಲ್ಯಾಣ ಕರ್ನಾಟಕ ಪ್ರದೇಶದ ಯಾವುದೇ ತಾಲೂಕಿನಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು.
ಆಯ್ಕೆ ವಿಧಾನ
ಕಲ್ಯಾಣ ಕರ್ನಾಟಕ ಜಿಲ್ಲೆಗಳ ಪ್ರತಿ ತಾಲೂಕಿಗೆ ಒಬ್ಬ ಫೆಲೋಗಳಂತೆ ಒಟ್ಟು 51 ಫೆಲೋಗಳ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಫೆಲೋಗಳನ್ನು ಅರ್ಹತೆಯ ಆಧಾರದ ಮೇಲೆ ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಕೆ
ಈ ಅರ್ಹತೆ, ಮಾನದಂಡಗಳನ್ನು ಪೂರೈಸಿರೋರು, ಈ ಕೆಳಕಂಡ ಕ್ಯೂ ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ನೇರವಾಗಿ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.