ಬೆಂಗಳೂರು: ಸಂಪುಟ ವಿಸ್ತರಣೆ ಮಾಡದೇ, ಕ್ಲೀನ್ ಚಿಟ್ ಸಿಕ್ಕರೂ ಸಚಿವ ಸ್ಥಾನ ನೀಡದೇ ಇರುವ ಕಾರಣ, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಹಾಗೂ ರಮೇಶ್ ಜಾರಕಿಹೊಳಿ ಸಿಡಿದೆದ್ದಿದ್ದರು. ನೇರವಾಗಿ ತೋರಿಸಿಕೊಳ್ಳದೇ ಇದ್ದರೂ, ಬೆಳಗಾವಿ ಸದನಕ್ಕೆ ಹಾಜರಾಗುವುದರಿಂದ ದೂರವೇ ಉಳಿದು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದರು. ಇಂತಹ ಶಾಸಕರರು ಇದೀಗ ಬೆಂಗಳೂರಿನಿಂದ ಬೆಳಗಾವಿಗೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿಗೆ ತೆರಳಿದ್ದಾರೆ.
ಕೋವಿಡ್ ಸೋಂಕಿತರ ಪರೀಕ್ಷಾ ಮಾದರಿಗಳ ಜೀನೋಮ್ ಸೀಕ್ವೆನ್ಸಿಂಗ್ಗೆ ಕ್ರಮ: ಶೀಘ್ರದಲ್ಲೇ ಮಾರ್ಗಸೂಚಿ ಬಿಡುಗಡೆ
ಬೆಳಗಾವಿಯಿಂದ ಬೆಂಗಳೂರಿಗೆ ಜೊತೆಯಾಗಿಯೇ ಆಗಮಿಸಿದ್ದಂತ ಕೆ.ಎಸ್ ಈಶ್ವರಪ್ಪ ಹಾಗೂ ರಮೇಶ್ ಜಾರಕಿಹೊಳಿ ಅವರು, ಈಗ ಮೂರು ದಿನಗಳ ಬಳಿಕ ಮರಳಿ ಬೆಳಗಾವಿಗೆ ಒಟ್ಟಿಗೆ ಪ್ರಯಾಣ ಬೆಳೆಸಿದ್ದಾರೆ. ಬೆಂಗಳೂರಿನಿಂದ ಬೆಳಗಾವಿಗೆ ಹೊರಡಿರುವಂತ ಇಬ್ಬರು ನಾಯಕರು, ಏರ್ಪೋರ್ಟ್ ನಿಂದ ನೇರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಲಿದ್ದಾರೆ.
‘ವಂಡರ್ಲಾ’ ವತಿಯಿಂದ ನೂತನ ‘ಸ್ಕೈ ಟಿಲ್ಟ್’ ರೈಡ್ ಪರಿಚಯ: ‘ನಟಿ ಮೇಘನಾ ರಾಜ್’ ಉದ್ಘಾಟನೆ | Wonderla Bangalore
ಬೆಳಗಾವಿಯ ಸುವರ್ಣ ಸೊಧದ ಹೊರಗೇ ಸಿಎಂ ಬೊಮ್ಮಾಯಿ ಅವರನ್ನು ಇಂದು ಸಂಜೆ 6.10ಕ್ಕೆ ಭೇಟಿಯಾಗಲಿದ್ದಾರೆ. ಇಲ್ಲಿ ಸಿಎಂ ಜೊತೆಗೆ ಸಚಿವ ಸ್ಥಾನಕ ನೀಡುವ ಕುರಿತಂತೆಯೂ ಚರ್ಚೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ. ಹಾಗಾದ್ರೇ ರೆಬಲ್ ಶಾಸಕರಾಗಿರುವಂತ ಬಿಜೆಪಿಯ ಇಬ್ಬರು ಮಾಜಿ ಸಚಿವರಿಗೆ, ಸಂಪುಟದಲ್ಲಿ ಸ್ಥಾನವನ್ನು ಸಚಿವ ಸಂಪುಟ ವಿಸ್ತರಣೆಯಾಗಿ ನೀಡಲಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.