ಕಲಬುರ್ಗಿ: ಅನುಮತಿ ಪಡೆಯದೆ ಕಬ್ಬು ಅರೆದಿರುವ ಆರೋಪ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮ ಉಲ್ಲಂಘಿಸಿರುವ ಆರೋಪ ಹಿನ್ನೆಲೆಯಲ್ಲಿ ವಿಜಯಪುರದ ಬಿಜೆಪಿ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಇಲಾಖೆ ಆಯುಕ್ತರು ನಿರ್ದೇಶಕರಿಂದ ಶಾಸಕ ಯತ್ನಾಳ್ಗೆ ನೋಟಿಸ್ ಜಾರಿ ಮಾಡಲಾಗಿದೆ. ಕಬ್ಬುವುದು ಸಕ್ಕರೆ ಇಲಾಖೆ ಆಯುಕ್ತರು ಹಾಗೂ ನಿರ್ದೇಶಕರು ನಿಮ್ಮ ವಿರುದ್ಧ ಏಕ ಕೇಸ್ ದಾಖಲಿಸಬಾರದೆಂದು ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲದೆ 24 ಗಂಟೆಯಲ್ಲಿ ನೋಟಿಸ್ ಗೆ ಉತ್ತರಿಸುವಂತೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಉತ್ತರ ನೀಡದಿದ್ದರೆ ದೂರು ದಾಖಲಿಸುವುದಾಗಿಯೂ ಯತ್ನಾಳಿಗೆ ಎಚ್ಚರಿಕೆ ನೀಡಿದ್ದಾರೆ.