ಬೆಂಗಳೂರು: : ಜನವರಿ 18ರಿಂದ ಭಾರತ್ ಗೌರವ್ ದಕ್ಷಿಣ ಯಾತ್ರೆ ಆರಂಭವಾಗಲಿದೆ. ಈ ಯಾತ್ರೆ ರಾಮೇಶ್ವರ-ಕನ್ಯಾಕುಮಾರಿ-ಮಧುರೈ ಮತ್ತು ತಿರುವನಂತಪುರಂ ಅನ್ನು ಒಳಗೊಂಡಿದೆ. ಐಆರ್‌ಸಿಟಿಸಿ/ ಐಟಿಎಂಎಸ್ ವೆಬ್‌ಸೈಟ್ ಮೂಲಕ 18/1/2024ರಿಂದ ಬುಕ್ಕಿಂಗ್ ಆರಂಭವಾಗಲಿದೆ ಆಂತ ತಿಳಿಸಲಾಗಿದೆ. ಈ ವಿಶೇಷ ರೈಲು ಹೊರಡಲಿರುವ ದಿನಾಂಕಗಳು. ನಿರ್ಗಮನ 18/1/2024, ಆಗಮನ 23/1/2024. ನಿರ್ಗಮನ 30/1/2024, ಆಗಮನ 4/2/2024 ಆಗಿದೆ.
ರಾಮೇಶ್ವರ- ರಾಮೇಶ್ವರ ದೇವಾಲಯ. ಕನ್ಯಾಕುಮಾರಿ- ಶ್ರೀ ಭಗವತಿ ದೇವಾಲಯ. ಮಧುರೈ- ಶ್ರೀ ಮೀನಾಕ್ಷಿ ದೇವಾಲಯ. ತಿರುವನಂತಪುರಂ- ಶ್ರೀ ಅನಂತಪದ್ಮನಾಭ ಸ್ವಾಮಿ ದೇವಾಲಯಗಳ ದರ್ಶನವನ್ನು ಈ ಪ್ಯಾಕೇಜ್ ನಲ್ಲಿ ನೀಡಲಾಗುತ್ತದೆ. ರೈಲು ಹತ್ತುವ ಮತ್ತು ಇಳಿಯುವ ನಿಲ್ದಾಣಗಳು ಬೆಳಗಾವಿ, ಹುಬ್ಬಳ್ಳಿ, ಬೀರೂರು, ತುಮಕೂರು, ಹಾವೇರಿ, ದಾವಣಗೆರೆ, ಯಶವಂತಪುರ ಆಗಿವೆ. ಯಾತ್ರೆಯ ಒಟ್ಟು ಪ್ಯಾಕೇಜ್ ಮೊತ್ತ 15,000 ರೂ.ಗಳು. ಕರ್ನಾಟಕ ಸರ್ಕಾರದಿಂದ ಸಹಾಯಧನ 5000 ರೂ.ಗಳು. ಯಾತ್ರಿಯ ಪಾವತಿಸಬೇಕಾದ ಮೊತ್ತ ಕೇವಲ 10,000 ರೂ.ಗಳು ಆಗಿವೆ.
ಧಾರ್ಮಿಕ ದತ್ತಿ ಇಲಾಖೆಯ 'ಕರ್ನಾಟಕ ಭಾರತ್ ಗೌರವ್ ಯಾತ್ರೆ'ಯು ಜನವರಿ 18ರಿಂದ ಆರಂಭವಾಗಲಿದೆ. 6 ದಿನಗಳ ಯಾತ್ರೆಯಲ್ಲಿ ರಾಮೇಶ್ವರ, ಮದುರೈ, ಕನ್ಯಾಕುಮಾರಿ, ತಿರುವನಂತಪುರ ಕ್ಷೇತ್ರಗಳ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಯಾತ್ರಿಗೆ ಒಟ್ಟು 15 ಸಾವಿರ ರೂ. ಖರ್ಚಗಲಿದ್ದು, ರಾಜ್ಯ ಸರ್ಕಾರವು 5 ಸಾವಿರ ರೂ. ಸಹಾಯಧನ ನೀಡಲಿದೆ. ಉಳಿದ 10… pic.twitter.com/Ph1eOlRt7z
— DIPR Karnataka (@KarnatakaVarthe) January 6, 2024