ಅಹ್ಮದಾಬಾದ್: ವಿವಿಧ ಕಾರಣಗಳಿಂದಾಗಿ ರಸ್ತೆ ಬದಿಯಲ್ಲಿ ನಿಂತುಕೊಳ್ಳೋರು ಅನೇಕರಿದ್ದಾರೆ. ಬಸ್ಸಿಗಾಗಿ ಕಾಯುತ್ತಲೋ, ಯಾರೋ ಬರ್ತಿದ್ದಾರೆ ಅಂತಲೋ ಇನ್ನೂ ಅನೇಕ ಸಂದರ್ಭಗಳಲ್ಲಿ ರಸ್ತೆ ಬದಿಯಲ್ಲಿ ನಿಂತುಕೊಳ್ಳುತ್ತಾರೆ. ಆದ್ರೇ ನೀವು ರಸ್ತೆ ಬದಿಯಲ್ಲಿ ನಿಂತುಕೊಳ್ಳೋ ಮುನ್ನ ಎಚ್ಚರಿಕೆ ವಹಿಸಬೇಕಿದೆ. ಅದ್ಯಾಕೆ ಅಂತ ಮುಂದೆ ಸುದ್ದಿ ಓದಿ.
ಶನಿವಾರ ರಾತ್ರಿ ನಿಕೋಲ್ನಲ್ಲಿ ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದಂತ ಒಂದೇ ಕುಟುಂಬದ ಮೂವರು ಸದಸ್ಯರ ಮೇಲೆ ಕಾರು ಡಿಕ್ಕಿಯಾಗಿರುವ ದೃಶ್ಯ ಸಿಸಿಟಿವಿ ದೃಶ್ಯಾವಳಿಗಳ ನಂತರ ಅಹಮದಾಬಾದ್ನ ಪೊಲೀಸರು ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ವಾಕಿಂಗ್ ಗೆ ತೆರಳಿದ್ದ ಸಂತ್ರಸ್ತರು, ವೇಗವಾಗಿ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಈ ಭೀಕರ ಅಪಘಾತ ಸಂಭವಿಸಿದೆ. ಇದಕ್ಕೆ ಕಾರಣ ವಾಕಿಂಗ್ ಗೆ ತೆರಳೋ ಮೊದಲು ರಸ್ತೆ ಬದಿಯಲ್ಲಿ ಸ್ವಲ್ಪ ಹೊತ್ತು ನಿಂತುಕೊಂಡು ಹರಟೆ ಹೊಡೆದಿದ್ದಾರೆ. ಇದೇ ಸಂದರ್ಭದಲ್ಲಿ ಕಾರೊಂದು ದಿಢೀರ್ ಅವರಿಗೆ ಡಿಕ್ಕಿಯಾಗಿದೆ. ಕಾರು ಡಿಕ್ಕಿಯಾದ ರಬಸಕ್ಕೆ ಓರ್ವ ವ್ಯಕ್ತಿ ಹಾರಿ ಕೆಳಗೆ ಬೀಳುವುದನ್ನು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಾಣಬಹುದಾಗಿದೆ.
અમદાવાદમાં રફ્તારના રાક્ષસનો કહેર
નરોડામાં ચાલવા નિકળેલા લોકોને કારે લીધા અડફેટે#NewsCapitalGujarat #JaneCheGujarat #Gujarat #GujaratNews #News #GujaratUpdates #Accident #Ahmedabad #Car pic.twitter.com/Ag5lE3UljC— NewsCapital Gujarat (@NewsCapitalGJ) June 1, 2024
ಇನ್ನೂ ಹೀಗೆ ಒಂದೇ ಕುಟುಂಬದ ಐವರ ಮೇಲೆ ಕಾರು ಹರಿಸಿದ ನಂತ್ರ, ಚಾಲಕ ಕಾರನ್ನು ನಿಲ್ಲಿಸದೇ ಅಲ್ಲಿಂದ ಪರಾರಿಯಾಗಿದ್ದಾನೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸ್ ದೂರು ದಾಖಲಿಸಲಾಗಿದೆ. ಪರಾರಿಯಾಗಿರುವ ಚಾಲಕನನ್ನು ಪತ್ತೆ ಹಚ್ಚಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಸೋ ನೀವು ರಸ್ತೆ ಬದಿಯಲ್ಲಿ ಹೀಗೆ ಹರಟೆ ಹೊಡೆಯುತ್ತಲೋ, ವಿವಿಧ ಕಾರಣಗಳಿಗಾಗಿ ನಿಂತುಕೊಂಡು ಕಾಯೋದನ್ನು ತಪ್ಪಿಸಿ. ಇಂತಹ ಅನಾಹುತಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವಂತೆ ಈ ಮೂಲಕ ನಮ್ಮ ಮನವಿ ಕೂಡ ಆಗಿದೆ.
‘ಸಿಎಂ ಸಿದ್ಧರಾಮಯ್ಯ ರಾಜೀನಾಮೆ’ಗೆ ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಒತ್ತಾಯ