ನವದೆಹಲಿ : ನಿಯಂತ್ರಕ ನಿಯಮಗಳನ್ನ ಉಲ್ಲಂಘಿಸಿದ್ದಕ್ಕಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್ ಮತ್ತು ಸಿಟಿ ಯೂನಿಯನ್ ಬ್ಯಾಂಕ್ಗೆ ಸುಮಾರು 3 ಕೋಟಿ ರೂ.ಗಳ ದಂಡ ವಿಧಿಸಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಸೋಮವಾರ ತಿಳಿಸಿದೆ. ಠೇವಣಿದಾರರ ಶಿಕ್ಷಣ ಜಾಗೃತಿ ನಿಧಿ ಯೋಜನೆ, 2014ಗೆ ಸಂಬಂಧಿಸಿದ ಕೆಲವು ಮಾನದಂಡಗಳನ್ನ ಉಲ್ಲಂಘಿಸಿದ್ದಕ್ಕಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)ಗೆ 2 ಕೋಟಿ ರೂ.ಗಳ ದಂಡ ವಿಧಿಸಲಾಗಿದೆ ಎಂದು ಆರ್ಬಿಐ ಹೇಳಿಕೆಯಲ್ಲಿ ತಿಳಿಸಿದೆ.
ಆದಾಯ ಗುರುತಿಸುವಿಕೆ, ಆಸ್ತಿ ವರ್ಗೀಕರಣ ಮತ್ತು ಮುಂಗಡಗಳಿಗೆ ಸಂಬಂಧಿಸಿದ ನಿಬಂಧನೆಗಳ ಬಗ್ಗೆ ಆರ್ಬಿಐ ಹೊರಡಿಸಿದ ಕೆಲವು ನಿರ್ದೇಶನಗಳನ್ನ ಪಾಲಿಸದ ಕಾರಣ ಸಿಟಿ ಯೂನಿಯನ್ ಬ್ಯಾಂಕ್ ಲಿಮಿಟೆಡ್ಗೆ 66 ಲಕ್ಷ ರೂ.ಗಳ ದಂಡ ವಿಧಿಸಲಾಗಿದೆ.
ಕೆಲವು ನಿರ್ದೇಶನಗಳನ್ನ ಪಾಲಿಸದ ಕಾರಣ ಆರ್ಬಿಐ ಕೆನರಾ ಬ್ಯಾಂಕ್ಗೆ 32.30 ಲಕ್ಷ ರೂ.ಗಳ ದಂಡವನ್ನ ವಿಧಿಸಿದೆ.
ಅನಂತ್ ಅಂಬಾನಿಯ ಪ್ರಿ ವೆಡ್ಡಿಂಗ್ ಮೆನು: 2500 ಭಕ್ಷ್ಯಗಳು, ಸಸ್ಯಾಹಾರ,ಸ್ಮ್ಯಾಕ್ಸ್
ಎಸ್.ಟಿ ಸೋಮಶೇಖರ್ ಮನವೊಲಿಸಲು ‘ಪೂಜ್ಯ ತಂದೆ, ಅವರ ಮಗ’ ವಿಫಲ : BSY, BYV ವಿರುದ್ಧ ಯತ್ನಾಳ್ ವಾಗ್ದಾಳಿ
BREAKING : ದೆಹಲಿ ಮದ್ಯ ನೀತಿ ಪ್ರಕರಣ : ಸಿಎಂ ‘ಕೇಜ್ರಿವಾಲ್’ಗೆ 8ನೇ ಬಾರಿಗೆ ‘ED’ ಸಮನ್ಸ್