ನವದೆಹಲಿ : ಬ್ಯಾಂಕಿಂಗ್ ವಲಯದ ನಿಯಂತ್ರಕ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕುಗಳಿಗೆ ಮ್ಯೂಲ್ ಅಕೌಂಟ್ಸ್ ವಿರುದ್ಧ ಕ್ರಮ ತೀವ್ರಗೊಳಿಸುವಂತೆ ಸೂಚಿಸಿದ್ದಾರೆ. ಗ್ರಾಹಕರ ಜಾಗೃತಿ ಅಭಿಯಾನವನ್ನ ತೀವ್ರಗೊಳಿಸಲು, ಅವರಿಗೆ ಶಿಕ್ಷಣ ನೀಡಲು ಮತ್ತು ಡಿಜಿಟಲ್ ವಂಚನೆಗಳನ್ನ ತಡೆಗಟ್ಟಲು ದೃಢವಾದ ಕ್ರಮಗಳನ್ನ ತೆಗೆದುಕೊಳ್ಳಲು ಆರ್ಬಿಐ ಗವರ್ನರ್ ಬ್ಯಾಂಕುಗಳಿಗೆ ಸೂಚಿದ್ದಾರೆ.
ಬುಧವಾರ, ಜುಲೈ 3, 2024ರಂದು, ಆರ್ಬಿಐ ಗವರ್ನರ್ ಮುಂಬೈನಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಖಾಸಗಿ ಬ್ಯಾಂಕುಗಳ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಇಒಗಳೊಂದಿಗೆ ಸಭೆ ನಡೆಸಿದರು. ಅಂದ್ಹಾಗೆ, ಮ್ಯೂಲ್ ಖಾತೆಗಳೆಂದ್ರೆ, ಅನೈತಿಕವಾಗಿ ಸಂಪಾದಿಸಿದ ಹಣವನ್ನ ಸ್ವೀಕರಿಸುವ ಅಥವಾ ಖಾತೆಗೆ ವರ್ಗಾಯಿಸುವ ಬ್ಯಾಂಕ್ ಖಾತೆಗಳಾಗಿವೆ. ಇದು ಅಕ್ರಮವಾಗಿ ಹಣವನ್ನ ವರ್ಗಾಯಿಸುವುದನ್ನು ಸುಲಭಗೊಳಿಸುತ್ತದೆ.
BREAKING : ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ; ಜಾರ್ಖಂಡ್’ನಲ್ಲಿ ‘ಪ್ರಮುಖ ಆರೋಪಿ’ ಅರೆಸ್ಟ್
ಮೋದಿ ಹೇಳಿದನ್ನೆಲ್ಲ ಹಿಂದೂಗಳು ಕೇಳಬೇಕಾ? ಹಿಂದಿನಿಂದಲೂ ಹಿಂದೂ ಧರ್ಮ ಉಳಿದಿಲ್ವಾ? : ಪ್ರಿಯಾಂಕ್ ಖರ್ಗೆ ವಾಗ್ದಾಳಿ