ಶಿವಮೊಗ್ಗ: ಜಿಲ್ಲೆಯ ಸಾಗರ ನಗರದ ಆರ್ಥಿಕ ಚಟುವಟಿಕೆಗಳಿಗೆ ಪೂರಕವಾಗಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಆರ್.ಬಿ.ಡಿ (RBD) ಸೌಹಾರ್ದ ಸಹಕಾರ ಸಂಘವು ಇಂದು ಅದ್ಧೂರಿಯಾಗಿ ಲೋಕಾರ್ಪಣೆಗೊಂಡಿತು.
ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಕೋರ್ಟ್ ರಸ್ತೆಯಲ್ಲಿರುವ ತಾಲ್ಲೂಕು ಕಚೇರಿ ಎದುರಿನ ಕಟ್ಟಡದಲ್ಲಿ ನೂತನ ಕಚೇರಿ ಕಾರ್ಯಾರಂಭ ಮಾಡಿದೆ. ಸಂಘದ ಉದ್ಘಾಟನಾ ಸಮಾರಂಭದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮಕ್ಕೆ ಮಾಜಿ ಸಚಿವರು ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಹರತಾಳು ಹಾಲಪ್ಪ ಅವರು ಭೇಟಿ ನೀಡಿ ಶುಭ ಹಾರೈಸಿದರು.
ಗಣ್ಯರಿಗೆ ಅದ್ಧೂರಿ ಸ್ವಾಗತ
ನೂತನ ಕಚೇರಿಗೆ ಆಗಮಿಸಿದ ಹರತಾಳು ಹಾಲಪ್ಪ ಅವರನ್ನು ಸಂಘದ ಪಾಲುದಾರರಾದ ಜಲೀಲ್ ಮತ್ತು ಮಹೇಶ್ ಅವರು ಆತ್ಮೀಯವಾಗಿ ಬರಮಾಡಿಕೊಂಡರು. ಇದೇ ಸಂದರ್ಭದಲ್ಲಿ ಮಾಜಿ ಸಚಿವರಿಗೆ ಶಾಲು ಹೊದಿಸಿ, ಹಾರ ಹಾಕಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಸಂಘದ ಕಾರ್ಯವೈಖರಿ ಮತ್ತು ಸಾರ್ವಜನಿಕರಿಗೆ ನೀಡುವ ಸೌಲಭ್ಯಗಳ ಕುರಿತು ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಹಕಾರ ಸಂಘಕ್ಕೆ ಶುಭ ಹಾರೈಕೆ
ಕಚೇರಿಯನ್ನು ವೀಕ್ಷಿಸಿದ ಹರತಾಳು ಹಾಲಪ್ಪ ಅವರು ಮಾತನಾಡಿ, “ಸಾಗರ ಭಾಗದ ಜನರಿಗೆ ಆರ್ಥಿಕ ಶಕ್ತಿ ತುಂಬುವ ಕೆಲಸವನ್ನು ಈ ಸೌಹಾರ್ದ ಸಹಕಾರ ಸಂಘ ಮಾಡಲಿ. ಗ್ರಾಹಕರ ವಿಶ್ವಾಸ ಗಳಿಸಿ ಸಂಸ್ಥೆಯು ಉತ್ತುಂಗಕ್ಕೆ ಏರಲಿ” ಎಂದು ಶುಭ ಹಾರೈಸಿದರು.
ಈ ವೇಳೆ ಸಾಗರ ನಗರ ಮಂಡಲದ ಬಿಜೆಪಿ ಅಧ್ಯಕ್ಷ ಕೆ.ಆರ್ ಗಣೇಶ್ ಪ್ರಸಾದ್, ಗ್ರಾಮಾಂತರ ಮಂಡಲದ ಅಧ್ಯಕ್ಷ ದೇವೇಂದ್ರಪ್ಪ ಯಲಕುಂದ್ಲಿ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಗ್ವೆ, ಸಾಗರ ಬಿಜೆಪಿ ಗ್ರಾಮಾಂತರ ಮಂಡಲದ ಕಾರ್ಯದರ್ಶಿ ರವಿ, ಗಣೇಶ್ ಕುಗ್ವೆ, ಆರ್ ಬಿಡಿ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಎಂ.ಪಿ ಶೆಟ್ಟಿ, ಆಶಾ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು..
BREAKING: ಈ ವರ್ಷದಿಂದ ‘SSLC ಪರೀಕ್ಷೆ’ ಅಂಕ 625 ಅಲ್ಲ 525 ಮಾತ್ರ, ಹಿಂದಿ ಮಾರ್ಕ್ಸ್ ಪರಿಗಣನೆ ಇಲ್ಲ
JOB ALERT: ನೀವು ‘SSLC ಪಾಸ್’ ಆಗಿದ್ದೀರಾ? ರೈಲ್ವೆ ಇಲಾಖೆಯ 11,127 ಹುದ್ದೆಗಳ ಭರ್ತಿಗೆ ತಪ್ಪದೇ ಅರ್ಜಿ ಸಲ್ಲಿಸಿ








