ವಿಜಯಪುರ : ಬೀದರ್ ಜಿಲ್ಲೆಯ ವರವಟ್ಟಿ ನನ್ನ ಹುಟ್ಟೂರಾಗಿದ್ದು, ರಜಾಕರು ಆಗಾಗ ಅಲ್ಲಿ ಬಂದು ದಾಳಿ ಮಾಡುತ್ತಿದ್ದರು. ನಾನು ಜಮೀನಿನಲ್ಲಿ ಮರದಡಿ ಆಟವಾಡುತ್ತಿದ್ದಾಗ ರಜಾಕಾರರು ದಾಳಿ ಮಾಡಿ ಮನೆಯಲ್ಲಿದ್ದ ನಮ್ಮ ತಾಯಿ, ಅಕ್ಕ, ಚಿಕ್ಕಪ್ಪ ಎಲ್ಲರನ್ನು ಸುಟ್ಟು ಹಾಕಿದರು ಎಂದು ವಿಜಯಪುರದಲ್ಲಿ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಬಹಮನಿ ಸಾಮ್ರಾಜ್ಯ 6 ತುಕಾಡಿಗಳಾದವು. ಆರು ರಾಜ್ಯಗಳಾದ ಬಳಿಕ ಜಗಳ ಆರಂಭವಾದವು. ಅದು ಜನರಿಗಾಗಿ ಅಲ್ಲ ತಮ್ಮ ರಾಜ್ಯ ಉಳಿಸಿಕೊಳ್ಳಲು ಜಗಳ ಮಾಡಿದರು.ಜನರಿಗಾಗಿ ಮಹಾತ್ಮ ಗಾಂಧೀಜಿ, ಜವಾಹರ್ ಲಾಲ್ ನೆಹರು ಹಾಗು ಡಾ.ಅಂಬೇಡ್ಕರ್ ಹೋರಾಟ ಮಾಡಿದರು. ಬೀದರ್ ಜಿಲ್ಲೆಯ ವರವಟ್ಟಿ ನನ್ನ ಹುಟ್ಟೂರು. ರಜಾಕರು ಅಲ್ಲಿ ದಾಳಿ ಮಾಡುತ್ತಿದ್ದರು. ಗುಂಪಾ ಗ್ರಾಮದಲ್ಲಿ 800 ಜನರನ್ನು ಸಜೀವ ದಹನ ಮಾಡಿ ಹೋದರು. ರಾಜಾಕರು ಹೋಗುವಾಗ ನಾನು ಜಮೀನಿನಲ್ಲಿ ಮರದಡಿ ಆಟ ಆಡುತ್ತಿದೆ.
ರಜಾಕರ ಕೃತ್ಯದಿಂದ ವರವಟ್ಟಿಯಲ್ಲಿದ್ದ ನಮ್ಮ ಮನೆ ಸುಟ್ಟು ಹೋಯಿತು. ನಮ್ಮ ಮನೆಯಲ್ಲಿದ್ದ ನನ್ನ ತಾಯಿ ಅಕ್ಕ ಚಿಕ್ಕಪ್ಪ ಸುಟ್ಟು ಹೋದರು. ನಮ್ಮ ತಂದೆ ಮಾಪಣ್ಣಗೆ ನನ್ನ ನಿನ್ನ ಮಗ ಹೊರಗೆ ಅಳುತ್ತಿದ್ದಾನೆ ಎಂದು ಹೇಳಿದರು ನನ್ನನ್ನು ಹುಡುಕಿಕೊಂಡು ತಂದೆ ಬಂದಿದ್ದರು ಆಗ ಯಾರಿಗೆ ಯಾರು ರಕ್ಷಣೆ ಕೊಡುತ್ತಿರಲಿಲ್ಲ ನಮ್ಮ ತಂದೆ ನನ್ನನ್ನು ಕರೆದುಕೊಂಡು ಪೂನಾಥ ಹೋಗಿದ್ದರು ಆಗ ಸ್ವತಂತ್ರ ಸಿಕ್ಕಿದ್ದರಿಂದ ಸೇನೆಯಲ್ಲಿದ್ದ ಚಿಕ್ಕಪ್ಪ ರಾಜೀನಾಮೆ ನೀಡಿದರು ಹೋಗಿದ್ದರಿಂದ ಅವರು ನಮಗೆ ಸಿಗಲಿಲ್ಲ ನಂತರ ನಾನು ನನ್ನ ತಂದೆ ಕಲಬುರ್ಗಿ ಬಂದು ನೆಲ್ಲಿ ನಿಂತೆವು ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ದೇಶದಲ್ಲಿ ವ್ಯಕ್ತಿ ಮುಖ್ಯ ನಂತರ ದೇಶ ಎನ್ನುತ್ತಿರುವುದು ದುರಂತದ ಸಂಗತಿಯಾಗಿದೆ. ದೇಶ ಇದ್ದರೆ ನಾವು ಸಂವಿಧಾನ ಇದ್ದರೆ ದೇಶದಲ್ಲಿ ಐಕ್ಯತೆ ಮುಖ್ಯ. ರಾಜಕೀಯದಲ್ಲಿ ನಾನು ಹಂತ ಹಂತವಾಗಿ ಬೆಳೆದು ಬಂದವನು ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಕೆಲಸ ಮಾಡಿದೆ ಆಗ ಕಾಂಗ್ರೆಸ್ ಗೆ ಬಂದ ಎಸ್ಎಂ ಕೃಷ್ಣ ಮುಖ್ಯಮಂತ್ರಿ ಆದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂದ ಹಿಡಿದು ವಿಐಸಿಸಿ ಅಧ್ಯಕ್ಷನಾಗಿದ್ದೇನೆ ನಾನು ಇದುವರೆಗೂ ಯಾವುದೇ ಸ್ಥಾನಮಾನದ ಹಿಂದೆ ಬಿದ್ದಿಲ್ಲ ಅಧಿಕಾರಕ್ಕಾಗಿ ಯಾವತ್ತೂ ಯಾರು ಹಿಂದೆ ಬೀಳಬಾರದು.