ಉಳ್ಳಾಲ : ಜನರನ್ನು ಹಿಂಡಿ ಹಿಪ್ಪೆ ಮಾಡಿದ್ದ ಕೊರೊನಾಗೆ ರಮ್ ಮದ್ದು ಎಂದಿದ್ದ ಉಳ್ಳಾಲ ನಗರಸಭೆಯ ಸದಸ್ಯ ರವಿಚಂದ್ರ ಗಟ್ಟಿ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಕಾಂಗ್ರೆಸ್ ಅಮಾನತು ಮಾಡಿದೆ.
ರಮ್ ಕುಡಿದು ಪೆಪ್ಪರ್ ಹಾಕಿ ಮೊಟ್ಟೆ ತಿಂದರೆ ಕೊರೊನಾ ದೂರವಾಗುತ್ತದೆ ಎಂದು ಈತ ಸೋಶಿಯಲ್ ಮೀಡಿಯಾದಲ್ಲಿ ಈತ ವಿಡಿಯೋ ಹರಿಬಿಟ್ಟಿದ್ದನು. ಇದಲ್ಲದೇ ಇವರು ಪಕ್ಷ ವಿರೋಧಿ ಹೇಳಿಕೆ ನೀಡಿ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದನು. ಇವರ ವರ್ತನೆಯನ್ನು ಗಮನಿಸಿದ ಕಾಂಗ್ರೆಸ್ ರವಿಚಂದ್ರ ಗಟ್ಟಿ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಕಾಂಗ್ರೆಸ್ ಅಮಾನತು ಮಾಡಿದೆ.
ದೇಶದಲ್ಲಿ ಅಟ್ಟಹಾಸ ಮೆರೆದಿದ್ದ ಕೊರೊನಾ ಸೋಂಕಿಗೆ ಹಲವರು ಈತ ಹೇಳಿದ್ದ ಔಷಧಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು, ರಮ್ ಕುಡಿದ್ರೆ ಕೊರೊನಾ ಹೋಗುತ್ತದೆ ಎಂದು ಹೇಳಿ ಸುದ್ದಿಯಾಗಿದ್ದರು.
‘ಅವ್ರು ಬಹಳಷ್ಟು ಕೆಲಸ ಮಾಡ್ತಾರೆ, ಮಾಡ್ಬೇಕು’ : ‘ಪ್ರಧಾನಿ ಮೋದಿ’ಗೆ ಅಣ್ಣ ಸೋಮಭಾಯ್ ಸಲಹೆ