ಬೆಂಗಳೂರು : ಅತ್ಯಾಚಾರ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಮನೆ ಊಟ ತಂದು ಕೊಡಿ ಎಂದು ಮನವಿ ಮಾಡಿದ್ದರು. ಈ ಒಂದು ಮನವಿಗೆ ಕೋರ್ಟ್ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ, ಇಂದು ತಂದೆ ಹೆಚ್ ಡಿ ರೇವಣ್ಣ ಅವರು ಬಟ್ಟೆ ಊಟ ತಂದುಕೊಟ್ಟಿದ್ದಾರೆ.
ಹೌದು ಪುತ್ರ ಪ್ರಜ್ವಲ್ ಗೆ ಊಟ ಬಟ್ಟೆ ತಂದುಕೊಟ್ಟ ಶಾಸಕ ಹೆಚ್ ಡಿ ರೇವಣ್ಣ ಅವರು ಸಿಐಡಿ ಕಚೇರಿಗೆ ಕಾರಿನಲ್ಲಿ ಊಟ ಬಟ್ಟೆ ತಂದುಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರಿನ ಸಿಐಡಿ ಕಚೇರಿಯಲ್ಲಿ ಎಚ್ ಡಿ ರೇವಣ್ಣ ಅವರ ಪುತ್ರರು ಇದ್ದು, ಅತ್ಯಾಚಾರ ಕೆಸ್ ನಲ್ಲಿ ಮಾಜಿ ಸಂಸದ ಪ್ರಜ್ವಲ್ ಬಂಧನ ವಾಗಿದ್ದು, ಅಲ್ಲದೆ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸೂರಜ್ ಬಂಧನವಾಗಿದೆ.
ಹಾಗಾಗಿ ಪುತ್ರ ಪ್ರಜ್ವಲ್ ಗೆ ಎಚ್ ಡಿ ರೇವಣ್ಣ ಅವರು ಊಟ ಬಟ್ಟೆ ತಂದುಕೊಟ್ಟಿದ್ದಾರೆ. ನಂತರ ಸಿಐಡಿ ಕಚೇರಿ ಹೊರಬಾಗದಿಂದಲೇ ಶಾಸಕ ಎಚ್ಡಿ ರೇವಣ್ಣ ಹೊರಟು ಹೋಗಿದ್ದಾರೆ. ಈ ವೇಳೆ ಪೋಲಿಸ್ ಸಿಬ್ಬಂದಿ ಎಚ್ಡಿ ರೇವಣ್ಣ ತಂದಿದ್ದ ಬ್ಯಾಗನ್ನು ಪಡೆದುಕೊಂಡಿದ್ದಾರೆ. ಮನೆ ಊಟ ಕೊಡುವಂತೆ ಕೇಳಿಕೊಂಡಿದ್ದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಮನವಿ ಮಾಡಿದ್ದರು. ಅವರ ಮನವಿಗೆ ಕೋರ್ಟ್ ಒಪ್ಪಿಗೆ ನೀಡಿತ್ತು. ಎಸ್ಐಟಿ ವಶದಲ್ಲಿರುವ ಪ್ರಜ್ವಲ್ ಗೆ ಇದೀಗ ಎಚ್ ಡಿ ರೇವಣ್ಣ ಅವರು ಊಟ ಬಟ್ಟೆ ತಂದುಕೊಟ್ಟಿದ್ದಾರೆ.