ಬೆಂಗಳೂರು : ಯೋಗ ಗುರು ನಿರಂಜನ ಮೂರ್ತಿಯಿಂದ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಿ ಪೊಲೀಸ್ ಬೆಂಗಳೂರಿನ ಆರ್ ಆರ್ ನಗರ ಠಾಣೆ ಪೊಲೀಸ್ರು ವಿಶೇಷ ಕೋರ್ಟಿಗೆ ಚಾರ್ಜ ಶೀಟ್ ಸಲ್ಲಿಸಿದ್ದಾರೆ. ಯೋಗ ಕಲಿಯಲು ಬಂದಿದ್ದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ವೇಳೆ ವಿದ್ಯಾರ್ಥಿನಿಗೆ ಅತ್ಯಾಚಾರ ಎಸಗಿರುವ ಸಾಕ್ಷಿ ಲಭ್ಯವಾಗಿದ್ದು ಕೆಲ ವಿಡಿಯೋ ಹಾಗೂ ಫೋಟೋಗಳು ಕೂಡ ಲಭ್ಯವಾಗಿವೆ.
FSL ಒಂದು ವರದಿ ಮಾತ್ರ ಬರುವುದು ಬಾಕಿ ಇದೆ. ಹಲವು ಮಹಿಳೆಯರಿಗೆ ಯೋಗ ಗುರು ಅತ್ಯಾಚಾರ ಬಗ್ಗೆ ಆರೋಪ ಸಹ ಕೇಳಿಬಂದಿತ್ತು. ತನಿಖೆಯ ವೇಳೆ ಆರ್ ಆರ್ ನಗರ ಠಾಣೆ ಪೋಲಿಸರು ಮಾಹಿತಿ ಕಲೆ ಹಾಕಿದ್ದರು. ಮೊಬೈಲ್ ಪರಿಶೀಲನೆ ವೇಳೆ ಮಹಿಳೆಯರ ಜೊತೆ ಯೋಗ ಗುರುಗೆ ಸಂಪರ್ಕ ಇರುವುದು ದೃಢವಾಗಿದೆ. ಹಲೋ ಮಹಿಳೆಯರ ಜೊತೆ ಲೈಂಗಿಕ ಸಂಪರ್ಕ ಮಾಡಿದ್ದು ಕೂಡ ಪತ್ತೆಯಾಗಿದೆ. ಆದರೆ ವಿದ್ಯಾರ್ಥಿನಿ ಹೊರತುಪಡಿಸಿ ಬೇರೆ ಯಾರು ದೂರು ನೀಡಿಲ್ಲ. ಹಲೋ ಮಹಿಳೆಯರು ಮಾಹಿತಿ ಮತ್ತು ಹೇಳಿಕೆ ನೀಡಲು ನಿರಾಕರಿಸಿದ್ದಾರೆ. ಓರ್ವ ಮಹಿಳೆಯ ಹೇಳಿಕೆ ಸಾಕ್ಷಿಯ ಆಧಾರದಲ್ಲಿ ತನಿಖೆ ಪೂರ್ಣಗೊಂಡಿದ್ದು, ಪೊಲೀಸರು ಇದೀಗ ಪೋಕ್ಸೋ ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.








