ಬೆಂಗಳೂರು : ಮಹಿಳೆಯ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂಡುಬಿದರೆ ಇನ್ಸ್ಪೆಕ್ಟರ್ ಪಿ.ಜಿ ಸಂದೇಶ್ ವಿರುದ್ಧ ತನಿಖೆಗೆ ತಡೆ ನೀಡಲು ಹೈಕೋರ್ಟ್ ಇದೀಗ ನಿರಾಕರಿಸಿದೆ. ಪ್ರಕರಣ ರದ್ದು ಕೋರಿದ ಅರ್ಜಿಯನ್ನು ಅರ್ಜಿದಾರರ ಪರ ವಕೀಲರು ಹಿಂಪಡೆದಿದ್ದಾರೆ. ಖಾಸಗಿ ಶಾಲೆಯ ಮುಖ್ಯ ಶಿಕ್ಷಕಿ ದೂರು ಆಧರಿಸಿ ಪೊಲೀಸರು FIR ದಾಖಲಿಸಿದ್ದರು.
ಪ್ರಕರಣ ಹಿನ್ನೆಲೆ?
ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಶಿಕ್ಷಣ ಸಂಸ್ಥೆಯ ಮುಖ್ಯ ಶಿಕ್ಷಕಿ ನೀಡಿದ ದೂರಿನ ಪ್ರಕಾರ, 2018ರಿಂದ 2023ರವರೆಗೆ ಹಲವು ಬಾರಿ ಮನೆಗೆ ಬಂದು ಸಂದೇಶ್ ಪಿಜಿ ಬಲವಂತವಾಗಿ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದಕ್ಕೂ ಮುನ್ನ ಸಂದೇಶ್ ವಿರುದ್ಧ ಇಬ್ಬರು ಮಹಿಳೆಯರು ಮಾಡಿದ್ದ ಲೈಂಗಿಕ ಕಿರುಕುಳ ಆರೋಪಗಳು ಸುಳ್ಳು ಎಂದು ಪೊಲೀಸ್ ವರದಿ ತಿಳಿಸಿತ್ತು. ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ಕೂಡ ಈ ಆರೋಪಗಳು ಪ್ರೇರಿತವಾಗಿವೆ ಎಂದು ಹೇಳಿಕೆ ನೀಡಿದ್ದರು.








