ಕೆಎನ್ಎನ್ಡಿಜಿಟಲ್ ಡೆಸ್ಕ್ : ಅಲಹಾಬಾದ್ ಹೈಕೋರ್ಟ್ನ ಲಕ್ನೋ ಪೀಠವು ಅತ್ಯಾಚಾರ ಆರೋಪಿಗೆ ಜಾಮೀನು ಮಂಜೂರು ಮಾಡಿದೆ. ಹೌದು, 2012ರ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (Pocso) ಕಾಯ್ದೆ, 2012ರ ಅಡಿಯಲ್ಲಿ ದಾಖಲಾದ ಅತ್ಯಾಚಾರ ಆರೋಪಿಗೆ 15 ದಿನಗಳಲ್ಲಿ ಸಂತ್ರಸ್ತೆಯನ್ನ ಮದುವೆಯಾಗಬೇಕು ಅನ್ನೋ ಷರತ್ತು ವಿಧಿಸಿ, ಬಿಡುಗಡೆ ಮಾಡಿದೆ. ಆಪಾದಿತ ಅತ್ಯಾಚಾರದ ನಂತ್ರ ಜನಿಸಿದ ಮಗುವಿಗೆ ಮಗಳ ಹಕ್ಕು ನೀಡುವುದಾಗಿ ಅಲಹಾಬಾದ್ ಹೈಕೋರ್ಟ್ ಆದೇಶದಲ್ಲಿ ಹೇಳಿದೆ.
ಅಲಹಾಬಾದ್ ಹೈಕೋರ್ಟ್ ಕೂಡ ಆರೋಪಿಗೆ ಮದುವೆಯಾದ ದಿನಾಂಕದಿಂದ ಒಂದು ತಿಂಗಳೊಳಗೆ ಮದುವೆಯನ್ನ ನೋಂದಾಯಿಸಲು ಆದೇಶಿಸಿದೆ. ಮಗುವಿಗೆ ಸುಮಾರು ಒಂದು ತಿಂಗಳ ವಯಸ್ಸಾಗಿದ್ದು, ಈ ವರ್ಷದ ಮಾರ್ಚ್ನಲ್ಲಿ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಇನ್ನು ಆರೋಪಿಯು 10 ಏಪ್ರಿಲ್ 2022ರಿಂದ ಜೈಲಿನಲ್ಲಿದ್ದಾನೆ.
ಅಲಹಾಬಾದ್ ಹೈಕೋರ್ಟ್ನಲ್ಲಿ ನ್ಯಾಯಮೂರ್ತಿ ದಿನೇಶ್ ಕುಮಾರ್ ಸಿಂಗ್ ಅವರ ಏಕ ಪೀಠ, “ಆರೋಪಿ ಅರ್ಜಿದಾರರು, ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ತಕ್ಷಣ, ಬಿಡುಗಡೆಯಾದ ದಿನಾಂಕದಿಂದ 15 ದಿನಗಳೊಳಗೆ ಪ್ರಾಸಿಕ್ಯೂಟರ್ (ಬಲಿಪಶು) ಮದುವೆಯಾಗಬೇಕು” ಎಂದಿದೆ.
ಬಾಲಕಿ ಮತ್ತು ಆಕೆಯ ತಂದೆಯ ನಿಲುವು ಪರಿಗಣಿಸಿದ ಅಲಹಾಬಾದ್ ಹೈಕೋರ್ಟ್
ಆರೋಪಿ ಸಂತ್ರಸ್ತೆಯನ್ನ ಮದುವೆಯಾಗಲು ಸಿದ್ಧವಾಗಿರುವುದರಿಂದ ಆರೋಪಿಗೆ ಜಾಮೀನು ನೀಡಿದರೆ ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿದೆ.
ಆರೋಪಿಯ ವಿರುದ್ಧ IPC ಮತ್ತು POCSO ಕಾಯಿದೆಯ ಹಲವು ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ, ಬಾಲಕಿಗೆ ಕೇವಲ 17 ವರ್ಷ ವಯಸ್ಸಾಗಿದ್ದಾಗ ಮಾರ್ಚ್ 2022ರಲ್ಲಿ ತನ್ನೊಂದಿಗೆ ಮನೆ ಬಿಟ್ಟು ಬರಲು ಹುಡುಗಿಯ ಮನವೋಲಿಸಿದ್ದ ಎಂದು ಆರೋಪಿಸಲಾಗಿದೆ. ಆರೋಪಿಯು ಮಾರ್ಚ್ 22-23, 2022ರ ಮಧ್ಯರಾತ್ರಿಯಲ್ಲಿ ಬಾಲಕಿಯೊಂದಿಗೆ ಸಂಬಂಧ ಬೆಳೆಸಿದ್ದು, ನಂತ್ರ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು.