ಬೆಂಗಳೂರು : ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ತಿರುವು ಸಿಕ್ಕಿದ್ದು, ಬಂಧಿತ ಉದ್ಯಮಿ ಪುತ್ರ ತರುಣ್ ರಾಜ್ ನನ್ನು ಮಾರ್ಚ್ 15 ರವರೆಗೆ ಡಿ ಆರ್ ಐ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.
ಹೌದು ಬಂಧಿತ ತರುಣ ರಾಜ್ ಕುಮಾರ್ ಮಾರ್ಚ್ 15 ರವರೆಗೆ ಡಿ ಆರ್ ಐ ಕಸ್ಟಡಿಗೆ ನೀಡಿ ಆರ್ಥಿಕ ಅಪರಾಧಿಗಳ ಕೋರ್ಟ್ ಆದೇಶ ಹೊರಡಿಸಿದೆ. ಇಂದು ಜಡ್ಜ್ ನಿವಾಸದಲ್ಲಿ ಹಾಜರುಪಡಿಸಿ ಆರೋಪಿಯನ್ನು ಡಿ ಆರ್ ಐ ಅಧಿಕಾರಿಗಳು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಡಿ ಆರ್ ಐ ಅಧಿಕಾರಿಗಳ ಮನವಿಯ ಮೇರೆಗೆ ನ್ಯಾಯಾಧೀಶರು ಕಷ್ಟಡಿಗೆ ನೀಡಿ ಅದೇಶಿಸಿದ್ದಾರೆ.