ಬೆಂಗಳೂರು: ಈ ವಾರಾಂತ್ಯದಲ್ಲಿ ಬೆಂಗಳೂರಿನಲ್ಲಿ ನಡೆದ SIIMA ಅವಾರ್ಡ್ಸ್ 2022 ರಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್(Ranveer Singh) ಭಾಗವಹಿಸಿದ್ದರು. ಈ ವೇಳರ ಅಭಿಮಾನಿಗಳೊಂದಿಗೆ ಪೋಸ್ ನೀಡುವಾಗ ರಣವೀರ್ಗೆ ಅವರ ಬಾಡಿಗಾರ್ಡ್ ಕಪಾಳಮೋಕ್ಷ ಮಾಡಿದ್ದಾನೆ. ಇದರ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಹೌದು, SIIMA ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ರಣವೀರ್ ಸಿಂಗ್ ಅವರನ್ನು ನೋಡಲು ಮತ್ತು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಒಬ್ಬರಮೇಲೊಬ್ಬರು ಮುಗಿಬೀಳುತ್ತಿದ್ದರು. ಈ ವೇಳೆ ಅವರನ್ನು ಚದುರಿಸುವ ಭರದಲ್ಲಿ ಅವರ ಬಾಡಿಗಾರ್ಡ್ ಕೈ ರಣವೀರ್ ಕೆನ್ನೆಗೆ ತಾಕಿದೆ. ಆದ್ರೆ, ಇದಕ್ಕೆ ತಲೆಕೆಡಿಸಿಕೊಳ್ಳದ ರಣವೀರ್ ಅಭಿಮಾನಿಗಳೊಂದಿಗೆ ಪೋಸ್ ನೀಡಲು ಮುಂದಾದರು. ಈ ವಿಡಿಯೋ ವೈರಲ್ ಆಗುತ್ತಿದೆ.
View this post on Instagram
ಟ್ರಾಫಿಕ್ ಜಾಮ್: ರೋಗಿ ಜೀವ ಉಳಿಸಿಲು ಕಾರು ಬಿಟ್ಟು 3 ಕಿಮೀ ಓಡಿದ ಬೆಂಗಳೂರಿನ ವೈದ್ಯ… ವಿಡಿಯೋ ವೈರಲ್