ಕಲಬುರಗಿ : ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಡ ಮಕ್ಕಳ ಅನುಕೂಲಕ್ಕಾಗಿ ಜಾರಿಗೊಳಿಸಿದ್ದ ಸ್ಕಾಲರ್ ಶಿಪ್ ರದ್ದುಗೊಳಿಸಿ ಭಾರೀ ಅನ್ಯಾಯ ಮಾಡಿದೆ ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ವಾಗ್ಧಾಳಿ ನಡೆಸಿದರು.
ಇಂದು ಸುದ್ದಿಗಾರರ ಜೊತೆ ಮಾತನಾಡಿದ ಸುರ್ಜೆವಾಲಾ ‘ ರಾಜ್ಯದಲ್ಲಿ ಬೊಮ್ಮಾಯಿ ಸರ್ಕಾರ ಬರೀ ಭ್ರಷ್ಟಾಚಾರದಲ್ಲಿ ಮುಳುಗಿದೆ. ಉದ್ಯಮಿಗಳು ಚೆನ್ನೈ, ಹೈದರಾಬಾದ್ ನತ್ತ ಹೋಗಿದೆ. ಉದ್ಯೊಗ ಸೃಷ್ಟಿಸುವಲ್ಲಿ ಸರ್ಕಾರ ವಿಫಲವಾಗಿದೆ. ಇದಲ್ಲದೇ ಬಡ ಮಕ್ಕಳ ಅನುಕೂಲಕ್ಕಾಗಿ ಜಾರಿಗೊಳಿಸಿದ್ದ ಸ್ಕಾಲರ್ ಶಿಪ್ ರದ್ದುಗೊಳಿಸಿ ಭಾರೀ ಅನ್ಯಾಯ ಮಾಡಿದೆ ಎಂದು ಕಿಡಿಕಾರಿದರು.
ರಾಜ್ತದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರವನ್ನು ಕಿತ್ತೊಗೆಯವುದೇ ಕಾಂಗ್ರೆಸ್ ಆದ್ಯತೆಯಾಗಿದೆ. ಪಕ್ಷದ ಎಲ್ಲಾ ಕಾರ್ಯಕರ್ತರು ಮುಖ್ಯಮಂತ್ರಿ, ಅಭ್ಯರ್ಥಿಯೇ ಆಗಿದ್ದಾರೆ ಎಂದರು.
ಮೂಡಿಗೆರೆಯಲ್ಲಿ ಮುಂದುವರೆದ ‘ಕಾಡಾನೆ’ ಸೆರೆ ಕಾರ್ಯಾಚರಣೆ : ‘ಡ್ರೋನ್’ ಕ್ಯಾಮೆರಾ ಬಳಕೆ