ಬೆಂಗಳೂರು : ದ್ವಾಪರಯುಗದಲ್ಲಿ ಶ್ರೀ ರಾಮಚಂದ್ರ ಹೇಗೋ, ಕಲಿಯುಗದಲ್ಲಿ ಸಿಎಂ ಬೊಮ್ಮಾಯಿ ಹಾಗೆಯೇ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದರು.
ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಎಸ್ ಸಿ ಹಾಗೂ ಎಸ್ ಟಿ ಮೀಸಲಾತಿ ಹೆಚ್ಚಳದ ವಿಚಾರಕ್ಕೆ ಸಂಬಂಧಿಸಿದಂತೆ ಸಂತಸ ವ್ಯಕ್ತಪಡಿಸಿದ ಸಚಿವರು ಸಿಎಂ ಬೊಮ್ಮಾಯಿಯನ್ನು ಶ್ಲಾಘಿಸಿದ್ದಾರೆ.
ಬೊಮ್ಮಾಯಿ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು. ಇಂದು ಬಸವರಾಜ ಬೊಮ್ಮಾಯಿ ಸಾಮಾಜಿಕ ಹರಿಕಾರ. ನಮ್ಮ ಸಮುದಾಯದ ಜನ ವಿಧಾನಸೌಧದ ಈ ಮೆಟ್ಟಿಲು ನೋಡಿಯೇ ಇರಲಿಲ್ಲ. ನಾನು ಅವತ್ತೇ ಹೇಳಿದ್ದೆ. ಮೀಸಲಾತಿ ಕೊಡಲು ನನ್ನ ಸರ್ಕಾರ ಬರಬೇಕು ಅಂದಿದ್ದೆ, ಹಾಗೆಯೇ ಆಯಿತು. ದ್ವಾಪರಯುಗದಲ್ಲಿ ಶ್ರೀ ರಾಮಚಂದ್ರ ಹೇಗೋ, ಕಲಿಯುಗದಲ್ಲಿ ಸಿಎಂ ಬೊಮ್ಮಾಯಿ ಹಾಗೆಯೇ ಎಂದು ಸಚಿವ ಶ್ರೀರಾಮುಲು ಹೇಳಿದರು.
ನಮ್ಮ ಮುಖ್ಯಮಂತ್ರಿಗಳು ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ್ದಾರೆ. ನಮ್ಮ ಸರ್ಕಾರ ನುಡಿದಂತೆ ನಡೆದಿದ್ದೇವೆ. ನಾವು ಇರಬಹುದು, ಹೋಗಬಹುದು. ಆದರೆ 2008 ರಲ್ಲಿ ನಮ್ಮ ಸರ್ಕಾರ ಮಾಡಿದ ನಿರ್ಧಾರ ಶಾಶ್ವತವಾಗಿರುತ್ತದೆ. ಅದಕ್ಕೆ ಯಡಿಯೂರಪ್ಪ, ಬೊಮ್ಮಾಯಿ ಕಾರಣ ಎಂದು ಹೇಳಿದರು.
Karnataka Rain: ರಾಜ್ಯಾಧ್ಯಂತ ಮುಂದಿನ 3 ದಿನ ಭಾರೀ ಮಳೆ: ಕೆಲ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ