ಬೆಂಗಳೂರು : ಕಳೆದ ಶುಕ್ರವಾರ ಬೆಂಗಳೂರಿನ ರಾಮೇಶ್ವರಕ್ಕೆ ಬೆಲೆಯಲ್ಲಿ ಬಾಂಬೆ ಬ್ಲಾಸ್ಟ್ ಸಂಭವಿಸಿ ಸುಮಾರು 10 ಜನರು ಗಾಯಗೊಂಡಿದ್ದರು. ಇದೀಗ ಒಂದು ವಾರದ ನಂತರ ಮತ್ತೆ ರಾಮೇಶ್ವರಂ ಕೆಫೆ ಪುನರಾರಂಭ ವಾಗಿದ್ದು ನಾಳೆಯಿಂದ ಗ್ರಾಹಕರಿಗೆ ಮುಕ್ತವಾಗಿ ಪ್ರವೇಶವಿರಲಿದೆ ಎಂದು ಹೇಳಲಾಗುತ್ತಿದೆ.
ಈ ಕುರಿತಂತೆ ರಾಮೇಶ್ವರಂ ಕೆಫೆ ಸಿ ಓ ರಾಘವೇಂದ್ರ ಅವರು ಈ ಹಿಂದೆ ಹೇಳಿರುವ ಪ್ರಕಾರ ನಾವು ಯಾವುದೇ ರೀತಿಯಾದ ಬೆದರಿಕೆಗಳಿಗೆ ಬಾಂಬುಗಳಿಗೆ ಹೆದರುವುದಿಲ್ಲ ಮತ್ತೆ ರಾಮೇಶ್ವರಂ ಕೆಫೆಯನ್ನು ಓಪನ್ ಮಾಡುತ್ತೇವೆ ಎಂದು ತಿಳಿಸಿದ್ದರು. ಅದರಂತೆ ಇಂದು ರಾಮೇಶ್ವರಂ ಕೆಫೆಗೆ ತಳಿರು ತೋರಣಗಳಿಂದ ಸಿಂಗರಿಸಿ ಅಲಂಕಾರಗೊಳಿಸಲಾಗಿದೆ.ಇದು ಸಂಜೆ ಹೋಮ ಹವನದೊಂದಿಗೆ ಮತ್ತೆ ಆರಂಭವಾಗಲಿದೆ.
ಬೆಂಗಳೂರು: ಯೆಲ್ಲೋ ಲೈನ್ ನಲ್ಲಿ ಪರೀಕ್ಷಾರ್ಥ ಸಂಚಾರ ಆರಂಭಿಸಿದ ‘ನಮ್ಮ ಮೆಟ್ರೋ’
ಅಲ್ಲದೆ ನಾಳೆಯಿಂದ ರಾಮೇಶ್ವರಂ ಕೆಫೆ ಗ್ರಾಹಕರಿಗೆ ಮುಕ್ತವಾಗಿದೆ ಎಂದು ಹೇಳಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಪ್ರವೇಶ ದ್ವಾರದಲ್ಲಿ ಎರಡು ಮೆಟಲ್ ಡಿಟೆಕ್ಟರ್ ಅನ್ನು ಕೂಡ ಅಳವಡಿಸಿಸಲಾಗಿದೆ. ಪ್ರತಿಯೊಬ್ಬ ಗ್ರಾಹಕನನ್ನು ಚೆಕ್ ಮಾಡಿ ಒಳಗಡೆ ಬಿಡುವ ಒಂದು ವ್ಯವಸ್ಥೆ ರಾಮೇಶ್ವರಂ ಕೆಫೆ ಕೈಗೊಂಡಿದೆ.