ಬೆಂಗಳೂರು : ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಅಧಿಕಾರಿಗಳು ಪ್ರಮುಖ ಆರೋಪಿಯಾದ ಮುಜಮಿಲ್ ನನ್ನು ಬಂಧಿಸಿದ್ದು ಇಂದು ಎನ್ ಐ ಎ ಅಧಿಕಾರಿಗಳ ವಿಚಾರಣೆ ವೇಳೆ ಮುಜಾಮಿಲ್ ಸ್ಪೋಟಕ ವಾದಂತಹ ಮಾಹಿತಿಯನ್ನು ಹೊರ ಹಾಕಿದ್ದು, ಬಾಂಬ್ ದಾಳಿ ಸಂಚಿಗು ಮುನ್ನವೇ ಬೆಂಗಳೂರು ಸಮೀಪವೇ ಅವರು IED ಬಾಂಬ್ ತಯಾರಿಕೆಗೆ ಸಿದ್ಧತೆ ಮಾಡಿಕೊಂಡಿದ್ದರು ಎಂಬ ಸ್ಪೋಟಕ ಮಾಹಿತಿ ಹೊರ ಬಿದ್ದಿದೆ.
ಬೆಂಗಳೂರಿನಲ್ಲಿ ರಾಮೇಶ್ವರಂ ಕೆಫೆ ಬಾಂಬೆ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸಮೀಪವೇ IED ಬಾಂಬೆ ಸಿದ್ಧವಾಗಿದೆ ಎಂದು ಎಂಬ ಸ್ಪೋಟಕ ಮಾಹಿತಿ ಹೊರ ಬಿದ್ದಿದೆ. ಮತೀನ್, ಮುಸಫಿರ್ ಜೊತೆ ಮುಜಾಮಿಲ್ ಸಂಪರ್ಕದಲ್ಲಿದ್ದ ಎಂದು ತಿಳಿದುಬಂದಿದೆ.ಮುಜಾಮಿಲ್ ಮೂಲಕ ಅಗತ್ಯ ವಸ್ತುಗಳನ್ನು ಶಂಕಿತರು ತರಿಸಿಕೊಂಡಿದ್ದರು ಎಂದು ತಿಳಿದುಬಂದಿದೆ. ಸ್ಪೋಟಕ್ಕೆ ಬೇಕಾದಂತಹ ಕಚ್ಚಾ ಸಾಮಗ್ರಿಗಳನ್ನು ತರಿಸಿಕೊಂಡಿದ್ದರು ಸಂಚಿನ ಬಳಿಕ ಬೆಂಗಳೂರು ಸಮೀಪವೇ ಬಾಂಬ್ ಅನ್ನು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನ ಸಮೀಪ ಐಇಡಿ ಸಿದ್ದತೆ ಮಾಡಿಕೊಂಡಿದ್ದಾರೆ.ಎಲ್ಲಾ ಆಯಾಮಗಳಲ್ಲಿ ಇದೀಗ NIA ತಂಡ ತನಿಖೆಗೆ ಮುಂದಾಗಿದೆ.ಸ್ಪೋಟಕ್ಕೆ ಬೇಕಾದ ಕಚ್ಚಾ ಸಾಮಗ್ರಿಗಳನ್ನು ಧರಿಸಿಕೊಂಡಿದ್ದಾರೆ ಎಂದು NIA ತಂಡ ಮಾಹಿತಿ ಸಂಗ್ರಹಿಸಿವೆ ಎಂದು ತಿಳಿದುಬಂದಿದೆ.
ಇನ್ನೂ ನಿನ್ನೆ ರಾಮೇಶ್ವರಂ ಕೆಫೆಯಲ್ಲಿನ ಬಾಂಬ್ ಬ್ಲಾಸ್ಟ್ ಪ್ರಕರಣದ ಮೊದಲ ಆರೋಪಿಯನ್ನು ಬಂಧಿಸಲಾಗಿದೆ. ರಾಮೇಶ್ವರಂ ಕೆಫ್ ಬ್ಲಾಸ್ಟ್ ಆದ ಬಾಂಬ್ ತಯಾರಿಕೆಯ ಪ್ರಮುಖ ಆರೋಪಿ ಮುಜಾಮುಲ್ ಶರೀಫ್ ಎನ್ನುವಾತನನ್ನು ಇಂದು ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆ ಮೂರು ರಾಜ್ಯಗಳ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದ ನಂತರ ಪ್ರಮುಖ ಸಂಚುಕೋರನನ್ನು ಬಂಧಿಸಿದೆ. ಈ ಬಗ್ಗೆ ಎನ್ಐಎ ಟ್ವೀಟ್ ಮಾಡಿದ್ದು, ಪ್ರಮುಖ ಆರೋಪಿಯ ಬಂಧನದ ಬಗ್ಗೆ ಖಚಿತಪಡಿಸಿದೆ.
ಕರ್ನಾಟಕದ 12, ತಮಿಳುನಾಡಿನ 5 ಮತ್ತು ಉತ್ತರ ಪ್ರದೇಶದ 1 ಸೇರಿದಂತೆ 18 ಸ್ಥಳಗಳಲ್ಲಿ ಎನ್ಐಎ ತಂಡಗಳು ದಾಳಿ ಮಾಡಿದ ನಂತರ ಮುಜಾಮಿಲ್ ಶರೀಫ್ ನನ್ನು ಬಂಧಿಸಲಾಗಿದೆ ಎಂದು ಎನ್ಐ ಟ್ವೀಟ್ನಲ್ಲಿ ತಿಳಿಸಿದೆ. ಪ್ರಕರಣದಲ್ಲಿ ಗುರುತಿಸಲಾದ ಇತರ ಇಬ್ಬರು ಆರೋಪಿಗಳಿಗೆ ಮುಜಾಮಿಲ್ ಶರೀಫ್ ಕೀ ಕಾಂನ್ಸಪರೇಟರ್ ಆಗಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಇನ್ನು ಬಂಧನದ ವೇಳೆ ಈತನ ಬಳಿ ಇದ್ದ ವಿವಿಧ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್ಐಎ ಮಾಹಿತಿ ನೀಡಿದೆ.