ಬೆಂಗಳೂರು: ನಗರದಲ್ಲಿನ ರಾಮೇಶ್ವರಂ ಕೆಫೆಯಲ್ಲಿ ನಡೆದಂತ ಬಾಂಬ್ ಸ್ಪೋಟ ಪ್ರಕರಣದ ಕುರಿತಂತೆ ಎಫ್ಎಸ್ಎಲ್ ತನಿಖೆಯಲ್ಲಿ ಮತ್ತೊಂದು ಸ್ಪೋಟಕ ಮಾಹಿತಿ ಲಭ್ಯವಾಗಿದೆ. ಅದೇ ಎರಡು ಬಾಂಬ್ ಗಳು ಒಂದೇ ಬಾರಿಗೆ ಸ್ಪೋಟಗೊಂಡಿದ್ದರೇ ಭಾರೀ ಪ್ರಮಾಣ ಉಂಟಾಗಿ, ಸಾವು ನೋವುಗಳ ಸಂಖ್ಯೆ ಹೆಚ್ಚಾಗುತ್ತಿತ್ತು ಎಂಬುದಾಗಿದೆ.
ಬೆಂಗಳೂರಿನ ಕುಂದಲಹಳ್ಳಿ ಬಳಿಯ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟಗೊಂಡಿತ್ತು. ಈ ಘಟನೆಯಲ್ಲಿ 10 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ದೀಪಾಂಶು ಎಂಬುವರು ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಕಾರಣ ಬ್ರೂಕ್ ಫೀಲ್ಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಇದರ ನಡುವೆ ಘಟನೆ ಸಂಬಂಧ ತನಿಖೆ ನಡೆಸುತ್ತಿರುವಂತ ಎಫ್ಎಸ್ಎಲ್ ತಂಡಕ್ಕೆ ಮತ್ತೊಂದು ಸ್ಪೋಟಕ ಮಾಹಿತಿ ಲಭ್ಯವಾಗಿದೆ. ಅದೇ ಆರೋಪಿಗೆ 2 ಬಾಂಬ್ ಒಂದೇ ಸಲದಲ್ಲಿ ಐದು ಸೆಕೆಂಡ್ ಅಂತರದಲ್ಲಿ ಸ್ಪೋಟಿಸೋದಕ್ಕೆ ಬಾರದೇ ಇರುವುದು ಆಗಿದೆ.
ರಾಮೇಶ್ವರಂ ಕೆಫೆಯಲ್ಲಿ ಇಟ್ಟಿದ್ದಂತ ಎರಡು ಬಾಂಬ್ ಗಳು ಒಂದಾದ ನಂತ್ರ ಒಂದರಂತೆ ಐದು ಸೆಕೆಂಡ್ ಗಳ ಅಂತರದಲ್ಲಿ 10 ಸೆಕೆಂಡ್ ನಲ್ಲಿ ಸ್ಪೋಟಗೊಂಡಿದ್ದಾವೆ. ಹೀಗಾಗಿ ಭಾರೀ ಅನಾಹುತವೇನು ಆಗಿಲ್ಲ. ಒಂದು ವೇಳೆ ಐದು ಸೆಕೆಂಡ್ ಅಂತರದಲ್ಲಿ ಎರಡು ಬಾಂಬ್ ಸ್ಪೋಟಗೊಂಡಿದ್ದೇ ಆದರೇ ಇಡೀ ರಾಮೇಶ್ವರಂ ಕೆಫೆಯೇ ನೆಲಸಮವಾಗುತ್ತಿತ್ತಂತೆ. ಆಗ ಸಾವನು ನೋವುಗಳು ಕೂಡ ಹೆಚ್ಚಾಗೋ ಸಾಧ್ಯತೆ ಇತ್ತು ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿದೆ.
ಕೇಂದ್ರ ಸರ್ಕಾರದ ಮದ್ಯಪ್ರವೇಶ: ‘ಗೂಗಲ್ ಪ್ಲೇ ಸ್ಟೋರ್’ನಲ್ಲಿ ‘Naukri, 99acres ಆ್ಯಪ್’ ಮರು ಸೇರ್ಪಡೆ