ಬೆಂಗಳೂರು: ನಗರದ ರಾಮೇಶ್ವರಂ ಕೆಫೆ ಹೊಟೆಲ್ ನಲ್ಲಿ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಶಂಕಿತ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ.
ಮಾರ್ಚ್.11ರಿಂದ 5, 8 ಮತ್ತು 9ನೇ ತರಗತಿಗೆ ‘ಪಬ್ಲಿಕ್ ಪರೀಕ್ಷೆ’: ಶಿಕ್ಷಣ ಇಲಾಖೆಯಿಂದ ‘ಮಾರ್ಗಸೂಚಿ’ ಪ್ರಕಟ
ಈ ಕುರಿತು ಮಾಧ್ಯಮಗಳು ವರದಿ ಮಾಡಿದ್ದು, ರಾಮೇಶ್ವರಂ ಸ್ಫೋಟ ಪ್ರಕರಣದಲ್ಲಿ ಶಂಕೆ ಮೇರೆಗೆ ವಿಚಾರಣೆಗೊಳಪಡಿಸಲಾಗಿದ್ದವರ ಪೈಕಿ ಓರ್ವ ಶಂಕಿತ ವ್ಯಕ್ತಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಶಂಕಿತನನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
BREAKING: ಬೆಂಗಳೂರಿನ ‘ರಾಮೇಶ್ವರಂ ಕೆಫೆ’ ಸ್ಫೋಟದ ಆರೋಪಿ ಸುಳಿವು ಪತ್ತೆ: ‘UAPA ಕಾಯ್ದೆ’ ಅಡಿ ಪ್ರಕರಣ ದಾಖಲು
ಬೆಳಗ್ಗೆ ಸುಮಾರು 11.40ರ ವೇಳೆಗ ಆಗಂತುಕ ರಾಮೇಶ್ವರಂ ಕೆಫೆ ಬಂದಿದ್ದಾನೆ. ಹೆಗಲಿಗೆ ಸೈಡ್ ಬ್ಯಾಗ್, ತಲೆಗೆ ಟೋಪಿ ಹಾಕಿಕೊಂಡು ರಾಮೇಶ್ವರಂ ಕೆಫೆ ಪ್ರವೇಶಿಸಿದ್ದಾನೆ. ಹೊಟೇಲ್ ನಲ್ಲಿ ಸ್ವಲ್ಪ ಹೊತ್ತು ಗಮನಿಸಿ ಕಾಲ ಕಳೆದಿದ್ದಾನೆ. ನಂತರ ತಿಂಡಿ ತಿಂದು ಬ್ಯಾಗ್ ವೊಂದನ್ನ ಹ್ಯಾಂಡ್ ವಾಷ್ ಬಳಿ ಇರಿಸಿದ್ದಾನೆ. ಅಲ್ಲಿಂದ ಕೆಫೆ ಸಮೀಪದಲ್ಲಿರೋ ನಿಲ್ದಾಣದಿಂದ ಬಸ್ ಹತ್ತಿ ತೆರಳಿರೋ ಸಾಧ್ಯೆತೆಗಳಿವೆ.
ಬೆಂಗಳೂರಿನ ‘ರಾಮೇಶ್ವರಂ ಕೆಫೆ’ ಬ್ಲಾಸ್ಟ್ ಕೇಸ್: ಗಾಯಾಳು ಭೇಟಿ ಮಾಡಿದ ರಾಜ್ಯಪಾಲರು ಗೆಹ್ಲೋಟ್, ವಿಜಯೇಂದ್ರ
ಬ್ಯಾಗ್ ಇಟ್ಟು ಒಂದು ಘಂಟೆಯ ನಂತರ ಬ್ಲಾಸ್ಟ್ ಆಗಿದ್ದು, ಆರೋಪಿ ಪತ್ತೆಗಾಗಿ ವಿಶೇಷ ತಂಡ ರಚನೆ ಮಾಡಲಾಗಿದೆ. ಆರೋಪಿ ಯಾರೆಂದು ಆಲ್ ಮೋಸ್ಟ್ ಗೊತ್ತಾಗಿದೆ. ಆರೋಪಿ ಪತ್ತೆಗಾಗಿ ಸಿಸಿಬಿಯಿಂದ ಕಾರ್ಯಾಚರಣೆ ನಡೆಸಿದ್ದು, ಕೆಲವೇ ಘಂಟೆಗಳಲ್ಲಿ ಆರೋಪಿಯನ್ನ ಬಂಧನ ಮಾಡಲಾಗತ್ತದೆ ಎಂದು ಅವರು ಹೇಳಿದರು.
ಶಂಕಿತ 28-30 ವರ್ಷ ವಯಸ್ಸಿನವನಾಗಿದ್ದು, BMTC ಬಸ್‌ನಲ್ಲಿ ರಾಮೇಶ್ವರಂ ಕೆಫೆಗೆ ಬಂದು ಕೂಪನ್ ಖರೀದಿಸಿ, ರವಾ ಇಡ್ಲಿ ಆರ್ಡರ್ ಮಾಡಿ, ಬ್ಯಾಗ್ ಇಟ್ಟು ಹೊರಟುಹೋಗಿದ್ದಾನೆ. ಶೋಧ ಕಾರ್ಯಕ್ಕಾಗಿ 8 ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಆತನ ಸಿಸಿಟಿವಿ ದೃಶ್ಯಾವಳಿಗಳು ಪತ್ತೆಯಾಗಿವೆ.