ಬೆಂಗಳೂರು : ನಿನ್ನೆ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕೇಂದ್ರದ ವಿವಿಧ ತನಿಖಾ ತಂಡಗಳು ಘಟನಾ ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸುತ್ತಿವೆ ಎಂದು ತಿಳಿದುಬಂದಿದೆ.
ಸೇವಾ ಶುಲ್ಕವನ್ನು ಪಾವತಿಸದ ಕಾರಣ ಗೂಗಲ್ ಪ್ಲೇ ಸ್ಟೋರ್‌ನಿಂದ ಬಹು ಭಾರತೀಯ ಅಪ್ಲಿಕೇಶನ್‌ಗಳು ‘ಕಣ್ಮರೆ’
ಅಲ್ಲದೆ ಘಟನಾ ಸ್ಥಳಕ್ಕೆ ಕೇಂದ್ರ ತನಿಖಾ ತಂಡಗಳು ಭೇಟಿ ನೀಡಿದ್ದು, ಇದೀಗ NSG ತಂಡ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ತಡರಾತ್ರಿಯವರೆಗೂ ಕೇಂದ್ರ ಗುಪ್ತಚರ ಇಲಾಖೆ ಭೇಟಿ ನೀಡಿದ್ದು ತೀವ್ರ ಶೋಧ ನಡೆಸುತ್ತಿದೆ. ಎಫ್ಎಸ್ಎಲ್, ಸೊಕೋ ಟೀಮ್, ಬಾಂಬ್ ಸ್ಕ್ವಾಡ್ನಿಂದಲೂ ಶೋಧ ನಡೆಯುತ್ತಿದೆ. ISD , NIA ಬಳಿಕ ಇದೀಗ IB ತಂಡವು ಭೇಟಿ ನೀಡಿದೆ. ತಡರಾತ್ರಿ ಕೆಫೆಯ ಇಂಚಿಂಚು ಜಾಗವನ್ನು ಶೋಧ ತಂಡಗಳು ಜಾಲಾಡಿವೆ ಎಂದು ತಿಳಿದುಬಂದಿದೆ.
ತನಿಖಾಧಿಕಾರಿಗಳ ಅನುಮಾನಾಸ್ಪದ ‘ಕಥೆ’ ನಂಬಲು ಸಾಧ್ಯವಿಲ್ಲ : ಹೈಕೋರ್ಟ್ ಅಭಿಪ್ರಾಯ
ಕುಕ್ಕರ್ ಬಾಂಬ್, ಕೆಫೆ ಬ್ಲಾಸ್ಟ್ ಗು ಸಾಮ್ಯತೆ?
ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ನಡೆಸುತ್ತಿರುವ ಪರಿಶೀಲನ ವೇಳೆ ಸ್ಪೋಟಕ ಮಾಹಿತಿ ಬಯಲಾಗಿದ್ದು 2022 ರಲ್ಲಿ ಮಂಗಳೂರಿನಲ್ಲಿ ನಡೆದ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟಕ್ಕೂ ರಾಮೇಶ್ವರಂ ಕೆಪಿಎಲ್ ಆದ ಬಾಂಬ್ ಬ್ಲಾಸ್ಟಿಗೂ ಸಾಮ್ಯತೆ ಇದೆಯಾ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅಭಿವೃದ್ಧಿ ಕಾಮಗಾರಿಗಳು ಪ್ರತಿಪಕ್ಷಗಳ ಟೀಕೆಗಳಿಗೆ ಉತ್ತರ ನೀಡುತ್ತವೆ : ಮುಖ್ಯಮಂತ್ರಿ ಸಿದ್ದರಾಮಯ್ಯ
ಕುಕ್ಕರ್ ಬಾಂಬ್ ಸ್ಫೋಟಕ್ಕೂ ರಾಮೇಶ್ವರಂ ಕೆಫೆ ಸ್ಫೋಟಕ್ಕೂ ಸಾಮ್ಯತೆ ಇದೆಯಾ ಎಂದು ಇದೀಗ ಖಾಕಿ ಪಡೆ ಪರಿಶೀಲನೆ ನಡೆಸುತ್ತಿದೆ.ಎರಡಕ್ಕೂ ಸಾಮ್ಯತೆ ಇರುವ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಪರಿಶೀಲನೆ ವೇಳೆ ಸಾಮ್ಯತೆ ಇರುವ ಹಲವಾರು ಅಂಶಗಳು ಪತ್ತೆಯಾಗಿವೆ. ಕುಕ್ಕರ್ ಬ್ಲಾಸ್ಟ್ ಪ್ರಕರಣದಲ್ಲಿ ಬಳಸಿದ ಸ್ಪೋಟಕ ವಸ್ತುಗಳನ್ನು ಕೂಡ ಈ ಒಂದು ಸ್ಫೋಟದಲ್ಲಿ ಬಳಸಲಾಗಿದೆ. ಎರಡು ಕಡೆ ಬ್ಲಾಸ್ಟ್ ನಲ್ಲಿ ಒಂದೇ ಮಾದರಿ ಹೊಗೆ ಬಂದಿದ್ದು ಸ್ಫೋಟಕ್ಕೆ ಬ್ಯಾಟರಿ ಡಿಟೋನೇಟರ್, ನಟ್ಟು, ಬೋಲ್ಟ್, ಗಳನ್ನು ಬಳಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಘಟನೆಗೆ ಸಂಬಂಧಿಸಿದಂತೆ ಮಂಗಳೂರು ಸ್ಫೋಟದ ರೂವಾರಿಯ ಶಾರಿಕ್ ವಿಚಾರಣೆಗೆ ಇದೀಗ ಪೊಲೀಸರು ಸಜ್ಜಾಗಿದ್ದಾರೆ. ಮಂಗಳೂರು ಸ್ಫೋಟದ ಆರೋಪಿ ಶಾರಿಕ್ ನನ್ನು ಪೊಲೀಸರು ವಿಚಾರಣೆ ನಡೆಸಲಿದ್ದಾರೆ.ಎಂದು ತಿಳಿದುಬಂದಿದೆ. ಸದ್ಯ ಪರಪ್ಪನ ಅಗ್ರಹಾರದಲ್ಲಿರುವ ಶಾರಿಕ್ ಹಾಗೂ ಆತನ ಸಹಚರರನ್ನು ಕೂಡ ಪೊಲೀಸರು ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.