ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಆಯಾಮಗಳಿಂದ ಎನ್ಎಎ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಬಾಂಬರ್ ಸಮುದ್ರ ಮಾರ್ಗ ಬಳಸಿ ಎಸ್ಕೇಪ್ ಆಗಿರೋ ಶಂಕೆಯನ್ನು ವ್ಯಕ್ತಪಡಿಸಿರುವಂತ ಎನ್ಐಎ ಟೀಂ, ಮಂಗಳೂರಲ್ಲಿ ಕರಾವಳಿ ಕಾವಲು ಪಡೆಯನ್ನು ಹೈ ಅಲರ್ಟ್ ಮಾಡಿದೆ.
ಮಂಗಳೂರಿನ ಕರಾವಳಿ ತೀರದಲ್ಲಿ ರಾಮೇಶ್ವರಂ ಕೆಫೆ ಸ್ಪೋಟಕ ಆರೋಪಿಯು ಸಮುದ್ರ ಮಾರ್ಗದ ಮೂಲಕ ತೆರಳಿರೋ ಶಂಕೆ ವ್ಯಕ್ತವಾದ ಹಿನ್ನಲೆಯಲ್ಲಿ ಎನ್ಐಎ ಅಧಿಕಾರಿಗಳು ಕರಾವಳಿ ಕಾವಲುಪಡೆಯನ್ನು ಅಲರ್ಟ್ ಮಾಡಿದ್ದಾರೆ.
ಎನ್ಐಎ ಸೂಚನೆಯ ಮೇರೆಗೆ ಮಂಗಳೂರಲ್ಲಿ ಕರಾವಳಿ ಕಾವಲುಪಡೆಯಿಂದ ಪ್ರತಿ ಬೋಡ್ ಗಳನ್ನು ತಪಾಸಣೆ ಮಾಡಲಾಗುತ್ತಿದೆ. ಜೊತೆಗೆ ಎನ್ಐಎ ಬಿಡುಗಡೆ ಮಾಡಿರುವಂತ ಬಾಂಬರ್ ಪೋಟೋಗಳನ್ನು ಮೀನುಗಾರರಿಗೆ ತೋರಿಸಿ, ಸುಳಿವು ಸಿಗಲಿದ್ಯಾ ಅಂತ ಪತ್ತೆ ಹಚ್ಚುತ್ತಿದೆ.
ಅರಬ್ಬೀ ಸಮುದ್ರದ ಆಯಕಟ್ಟಿನ ಸ್ಥಳಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಮಂಗಳೂರಿನ ವಿವಿಧ ಕಡೆಯಲ್ಲಿ ಎನ್ಐಎ ಸೂಚನೆಯ ಮೇರೆಗೆ ಕರಾವಳಿ ಕಾವಲುಪಡೆಯಿಂದ ಬೋಟ್ ಗಳನ್ನು ತಪಾಸಣೆ ನಡೆಸಲಾಗುತ್ತಿದೆ. ಜೊತೆಗೆ ಬಾಂಬರ್ ಸಮುದ್ರ ಮಾರ್ಗ ಬಳಸಿ ಪರಾರಿಯಾದ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.
ರಾಜ್ಯದಲ್ಲಿ ‘ವಿವಾಹ ನೋಂದಣಿ’ ಮತ್ತಷ್ಟು ಸುಲಭ: ಈ ಹಂತ ಅನುಸರಿಸಿ, ಆನ್ ಲೈನ್ ನಲ್ಲಿ ಕುಳಿತಲ್ಲೇ ನೋಂದಾಯಿಸಿ
BREAKING: ರಾಮೇಶ್ವರಂ ‘ಕೆಫೆ ಬಾಂಬ್ ಸ್ಪೋಟ’ ಪ್ರಕರಣ: ‘ಬಾಂಬರ್ ಹೊಸ ಪೋಟೋ’ ಬಿಡುಗಡೆ ಮಾಡಿದ ‘NIA’