ಬೆಂಗಳೂರು : ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಶನಿ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಹೇಳಿಕೆಗೆ ಇದೀಗ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಬೆಂಗಳೂರಿನಲ್ಲಿ ಚಲವಾದಿ ನಾರಾಯಣ ಸ್ವಾಮಿ ಅವರು ರಮೇಶ್ ಕುಮಾರ್ ಅವರ ನಾಲಿಗೆಯನ್ನು ಗೋಮೂತ್ರದಲ್ಲಿ ತೊಳೆಯಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮಾಜಿ ಸ್ಪೀಕರ್ ರಮೇಶ್ ಕುಮಾರ್ ಜನ್ಮಕ್ಕೆ ನಾಚಿಕೆ ಆಗಬೇಕು.ರಮೇಶ್ ಕುಮಾರ್ ನಾಲಿಗೆಯನ್ನು ಯಾವುದರಲ್ಲಿ ತೊಳಿಬೇಕು ಹೇಳಿ? ಗೋಮೂತ್ರ ಹಾಕಿ ರಮೇಶ್ ಕುಮಾರ್ ನಾಲಿಗೆ ತೊಳೆಯಬೇಕಾ? ರಮೇಶ್ ಕುಮಾರ್ ವಯಸ್ಸಿಗೆ ತಕ್ಕ ಹಾಗೆ ಮಾತನಾಡಿದ್ದಾರಾ? ಎಂದು ತಿಳಿಸಿದರು.
ಕೋಲಾರದಲ್ಲಿ ರಮೇಶ್ ಕುಮಾರ್ ಗೆ ಸ್ವಾಮಿ ಸ್ವಾಮಿ ಅಂತ ಕರೆಯುತ್ತಾರೆ.ಅದೇ ರೀತಿಯಾಗಿ ಅವರು ವರ್ತಿಸಿದ್ದಾರೆ.ರಮೇಶ್ ಕುಮಾರ್ ಬಹುಶಹ ಕಾಂಗ್ರೆಸ್ಸಿಗೆ ಸಿದ್ದರಾಮಯ್ಯ ಶನಿ ಅಂತಿರಬೇಕು. ನಾವು ಕಟ್ಟಿದ ಮನೆಯಲ್ಲಿ ಬಂದು ಒಕ್ಕರಿಸಿಕೊಂಡಿದ್ದಾನೆಂದು ಹೇಳಿರಬೇಕು. ನರೇಂದ್ರ ಮೋದಿ ಕಾಂಗ್ರೆಸ್ ಗೆ ಶನಿ ಥರಾನೇ ಕಾಣಿಸಿದ್ದರೆ ಸ್ವಾಗತಿಸುತ್ತೇನೆ. ಮೋದಿ ಕಾಂಗ್ರೆಸ್ ಪಾಲಿಗೆ ಶನಿನೆ ಎಂದು ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.
ರಮೇಶ್ ಕುಮಾರ್ ಹೇಳಿದ್ದೇನು?
ಪ್ರಧಾನಿ ನರೇಂದ್ರ ಮೋದಿ ಅವರು ಶನಿ ಇದ್ದಹಾಗೇ ಎಂದು ಹೇಳುವ ಮೂಲಕ ಮಾಜಿ ಸ್ಪೀಕರ್, ಕಾಂಗ್ರೆಸ್ ನಾಯಕ ರಮೇಶ್ ಕುಮಾರ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಈ ದೇಶಕ್ಕೆ ಹಿಡಿದಿರುವ ಶನಿ ಬಿಟ್ಟಿ ಹೋಗಲಿ ಎಂದು ಕಾಯುತ್ತಿದ್ದೇವೆ. ಜೂನ್ ೪ ರಂದು ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಕಾಯುತ್ತಿದ್ದೇವೆ. ಇಂದಿರಾ ಗಾಂಧಿ ಅವರು ಎಲ್ಲಾ ಜಾತಿ, ಜನಾಂಗದವರಿಗೆ ಆತ್ಮಸ್ಥೈರ್ಯ ತುಂಬುತ್ತಿದ್ದರು. ಅಂತಹ ಸ್ಥಾನಕ್ಕೆ ಶನಿ ಬಂದು ಕೂತಿದ್ದಾನೆ ಎಂದು ಪ್ರಧಾನಿ ಮೋದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಸಂತೆಯಲ್ಲಿ ಹಾವಾಡಿಗ ಸುಳ್ಳು ಹೇಳುವುದನ್ನು ನಾವೆಲ್ಲಾ ನೋಡಿದ್ದೇವೆ. ಆದರೆ ಪ್ರಧಾನ ಮಂತ್ರಿ ಸುಳ್ಳು ಹೇಳುವುದು ಪ್ರಪಂಚದಲ್ಲಿ ಎಲ್ಲೂ ನೋಡಿಲ್ಲ. ರಾಜ್ಯದಲ್ಲಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲಿದೆ ಎಂದು ಹೇಳಿದ್ದಾರೆ.