ಬೆಂಗಳೂರು: ಸಿಎಂ ಸಿದ್ಧರಾಮಯ್ಯ ಅವರು ಆರೋಗ್ಯ ಇಲಾಖೆಯಿಂದ ಅಬಕಾರಿ ಇಲಾಖೆಗೆ ಶಿಫಾರಸ್ಸು ಮಾಡಿದ್ದಾರೆ ಎನ್ನುವಂತ ನಕಲಿ ಪತ್ರವನ್ನು ಶೇರ್ ಮಾಡಿದಂತ ಶಾಸಕ ಸುನೀಲ್ ಕುಮಾರ್ ಕಾರ್ಕಳ, ಎಂಎಲ್ಸಿ ರವಿಕುಮಾರ್ ಸೇರಿ ಇತರರ ವಿರುದ್ಧ ಪೊಲೀಸ್ ಆಯುಕ್ತರಿಗೆ ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ದೂರು ನೀಡಿದ್ದಾರೆ.
ಕಾಂಗ್ರೆಸ್ ಎಂಎಲ್ಸಿ, ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷರಾದಂತ ರಮೇಶ್ ಬಾಬು ನೀಡಿರುವಂತ ದೂರಿನಲ್ಲಿ, ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳ ಹೆಸರಿನಲ್ಲಿ ನಕಲಿ/ಕಟ್ಟುಕತೆ ವರ್ಗಾವಣೆ ಪತ್ರವನ್ನು ತಯಾರಿಸಿ (Dr ಅದನ್ನು ಈ ದಿನ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ್ದು, ಆ ನಕಲಿ ಪತ್ರದ ಆಧಾರದ ಮೇಲೆ ಭ್ರಷ್ಟಾಚಾರದ ಸುಳ್ಳು ಆರೋಪಗಳನ್ನು ಮಾಡಿದ ಒಬ್ಬ ಶಾಸಕ ಸುನಿಲ್ ಕುಮಾರ್ (MLA) ಹಾಗೂ ಒಬ್ಬ ವಿಧಾನ ಪರಿಷತ್ ಸದಸ್ಯ ರವಿಕುಮಾರ್ (MLC) ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ದೂರು ಸಲ್ಲಿಸುತ್ತಿದ್ದೇನೆ ಎಂದಿದ್ದಾರೆ.
ಪ್ರಸಾರವಾಗಿರುವ ಪತ್ರವು ಸಂಪೂರ್ಣ ಕೃತಕ ಹಾಗೂ ದುರುದ್ದೇಶದಿಂದ ಕೂಡಿರುತ್ತದೆ. ದಿನಾಂಕ ಇಲ್ಲದ 2024 ರ ಸಂಖ್ಯೆ ಇಲ್ಲದ ಪತ್ರ ಸೃಷ್ಟಿ ಮಾಡಿ ಅಪಪ್ರಚಾರ ಮೂಲಕ ವ್ಯಕ್ತಿತ್ವಕ್ಕೆ ಮಸಿ ಬಳಿದು ಚಾರಿತ್ರ್ಯ ಹರಣ ಮಾಡುವ ಕೆಲಸ ಮಾಡಿ ಅಪರಾಧ ಎಸಗಿರುತ್ತಾರೆ. ಇವರ ದುರುದ್ದೇಶ ಆಗಿದೆ ಎಂದು ಹೇಳಿದ್ದಾರೆ.
1.ಸಾರ್ವಜನಿಕರನ್ನು ತಪ್ಪುದಾರಿಗೆಳೆಯುವುದು
2.ಮುಖ್ಯಮಂತ್ರಿಗಳ ಸಂವಿಧಾನಿಕ ಹುದ್ದೆಯ ಗೌರವ ಹಾನಿ ಮಾಡುವುದು
3.ಸರ್ಕಾರದ ವಿರುದ್ಧ ಜನರಲ್ಲಿ ಅನುಮಾನ ಮತ್ತು ಅಶಾಂತಿ ಉಂಟುಮಾಡುವುದು
4.ರಾಜಕೀಯ ಲಾಭ ಪಡೆಯಲು ಸುಳ್ಳು ಪ್ರಚಾರ ನಡೆಸುವುದು, ಆಗಿದ್ದು ಕ್ರಿಮಿನಲ್ ಅಪರಾಧದಿಂದ ಕೂಡಿರುತ್ತದೆ.ಈ ಕೃತ್ಯವು ಗಂಭೀರ ಅಪರಾಧವಾಗಿದ್ದು, ವಿಶೇಷವಾಗಿ,ಸರ್ಕಾರಿ ದಾಖಲೆಗಳ ಕಟ್ಟುಕತೆ (Forgery), ಸುಳ್ಳು ದಾಖಲೆಗಳನ್ನು ನಿಜವೆಂದು ಬಳಕೆ, ಮಾನಹಾನಿ,ಸಾರ್ವಜನಿಕ ಶಾಂತಿಗೆ ಧಕ್ಕೆ ಉಂಟುಮಾಡುವ ಸುಳ್ಳು ಮಾಹಿತಿ ಪ್ರಸಾರ, ಅಪರಾಧ ಸಂಚುಗಳಿಂದ ಕೂಡಿರುತ್ತದೆ. ಇವುಗಳು Bharatiya Nyaya Sanhita, 2023 ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಾಗಿವೆ. ಚುನಾಯಿತ ಜನಪ್ರತಿನಿಧಿಗಳಿಂದ ಇಂತಹ ಕೃತ್ಯ ನಡೆಯುವುದು ಅತ್ಯಂತ ಗಂಭೀರ ವಿಷಯವಾಗಿದ್ದು, ಇದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ಉಂಟುಮಾಡುತ್ತದೆ.
ಆದ್ದರಿಂದ, ದಯವಿಟ್ಟು ಸಂಬಂಧಪಟ್ಟ ಶಾಸಕ ಮತ್ತು ವಿಧಾನ ಪರಿಷತ್ ಸದಸ್ಯರ ವಿರುದ್ಧ ತಕ್ಷಣ FIR ದಾಖಲಿಸಲು, ಸಂಬಂಧಿತ BNS ಕಲಂಗಳನ್ನು ಅನ್ವಯಿಸಲು, ನಕಲಿ ಪತ್ರದ ಫೊರೆನ್ಸಿಕ್ ಪರಿಶೀಲನೆ ನಡೆಸಲು ಸಾಮಾಜಿಕ ಜಾಲತಾಣಗಳಲ್ಲಿ ಮೂಲ ಮೂಲವನ್ನು ಪತ್ತೆಹಚ್ಚಲು, ಮುಂದಿನ ಪ್ರಸಾರ ತಡೆಯಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.
ಈ ಸಂಬಂಧಿತ ನಕಲಿ ಪತ್ರ ಹಾಗೂ ಸಾಮಾಜಿಕ ಜಾಲತಾಣದ ಸ್ಕ್ರೀನ್‌ಶಾಟ್‌ಗಳನ್ನು ಈ ದೂರು ಜೊತೆಗೆ ಲಗತ್ತಿಸಿದ್ದೇನೆ. ಈ ವಿಷಯವನ್ನು ತುರ್ತುಗತಿಯಲ್ಲಿ ಪರಿಗಣಿಸಿ ಕಾನೂನುಬದ್ಧ ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದಾರೆ.
Watch Video: ಹಗಲು ಹೊತ್ತಲ್ಲೇ ಕಳ್ಳತನ ಮಾಡಲು ಹೋಗಿ ಸಿಕ್ಕಿಬಿದ್ದ ಕಳ್ಳ, ಊರ ತುಂಬೆಲ್ಲ ಮೆರವಣಿಗೆ
BREAKING : ಅಬಕಾರಿ ಬಳಿಕ ‘RTO’ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ : ತಪಾಸಣೆ ಮಾಡದೇ ವಾಹನಗಳಿಗೆ ‘FC’ ವಿತರಣೆ!








