ರಾಮನಗರ : ಟೆಲಿಗ್ರಾಂ ಮೆಸೇಜ್ ಬೆನ್ನತ್ತಿದ ಯುವತಿ ಒಬ್ಬಳು 12.59 ಲಕ್ಷವನ್ನು ಕಳೆದುಕೊಂಡಿರುವ ಘಟನೆ ರಾಮನಗರದಲ್ಲಿ ನಡೆದಿದೆ.ಹೂಡಿಕೆ ಮಾಡಿದ ಹಣ ದುಪ್ಪಟ್ಟು ಆಗುತ್ತದೆ ಎಂದು ವಂಚಕರು ಕಳುಹಿಸಿದ ಟೆಲಿಗ್ರಾಂ ಮೆಸೇಜ್ ಹಿಂದೆ ಬಿದ್ದ ಯುವತಿ ಬರೋಬ್ಬರಿ 12.59 ಲಕ್ಷ ಕಳೆದುಕೊಂಡು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
BREAKING:ವಾಹನ ಸವಾರರ ಗಮನಕ್ಕೆ ‘ಫಾಸ್ಟ್‌ಟ್ಯಾಗ್’ KYC ಗಡುವನ್ನು ಮಾರ್ಚ್ ಅಂತ್ಯದವರೆಗೆ ವಿಸ್ತರಿಸಲು NHAI ಚಿಂತನೆ
ಹೀಗೆ ವಂಷಕರ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡಿರುವ ಯುವತಿಯನ್ನು ಬಿಕಾಂ ವಿದ್ಯಾರ್ಥಿನಿ ಕೆ. ಎಂ ನಯನಶ್ರೀ ಎಂದು ಹೇಳಲಾಗುತ್ತಿದೆ.ಕಳೆದ ಫೆ.18ರಂದು ಯುವತಿ ಮೊಬೈಲ್ ಟೆಲಿಗ್ರಾಂಗೆ ಮೈಂತ್ರಾ ಎಂಬ ಶಾಪಿಂಗ್ ಕಂಪನಿಯಿಂದ 100 ರು. ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಹಣ ನೀವು ಪಡೆಯುತ್ತೀರಿ ಎಂಬ ಸಂದೇಶದ ಲಿಂಕ್ ಕ್ಲಿಕ್ ಮಾಡಿ ಆರಂಭದಲ್ಲಿ 100 ರು. ಹಣ ಹೂಡಿಕೆ ಮಾಡಿದ್ದಾಳೆ. ಬಳಿಕ ಅವರ ಖಾತೆಗೆ 160 ರುಪಾಯಿ ಜಮೆ ಮಾಡಿದ್ದಾರೆ.
BREAKING: 1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಆರೋಪಿ ಅಬ್ದುಲ್ ಕರೀಂ ತುಂಡಾನನ್ನು ಖುಲಾಸೆ ಗೊಳಿಸಿದ ಕೋರ್ಟ್!
ಹೀಗೆ ವಂಚಕರು ನಯನಾಗೆ ಹಣ ದುಪ್ಪಟ್ಟು ಮಾಡಿಸುವ ಆಸೆಯನ್ನು ತೋರಿಸಿದ್ದಾರೆ. ಇದನ್ನು ನಂಬಿದ ನಯನ ಸಂಬಂಧಿಕರ ಬಳಿ ಸಾಲವನ್ನು ಮಾಡಿ ಹಂತ ಹಂತವಾಗಿ ವಂಚಕರ ಬೇರೆ ಬೇರೆ ಖಾತೆಗಳಿಗೆ ಒಟ್ಟು 12 ಲಕ್ಷದ 59 ಸಾವಿರ ರೂಪಾಯಿಗಳನ್ನು ಹಾಕಿದ್ದಾಳೆ.ಬಳಿಕ ಅ ಹಣ ವಾಪಸ್ ಬರದೇ ಇದ್ದಾಗ ತಾನು ಮೋಸ ಹೋಗಿರುವುದು ಗೊತ್ತಾಗಿದ್ದು ಈ ಸಂಬಂಧ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಯುವತಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಕಲಬುರ್ಗಿಗೆ ಪ್ರವೇಶಕ್ಕೆ ಚಕ್ರವರ್ತಿ ಸೂಲಿಬೆಲೆಗೆ ‘ನಿರ್ಬಂಧ’ : ಕೋರ್ಟ್ ಮೊರೆ ಹೋದ ಬಿಜೆಪಿ