ರಾಮನಗರ : 40 ವಕೀಲರ ವಿರುದ್ಧ ಕಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್‌ಐ ಅಮಾನತಿಗೆ ಆಗ್ರಹಿಸಿ ನಿನ್ನೆ ತಡರಾತ್ರಿ ಕೂಡ ವಕೀಲರು ರಾಮನಗರ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು. ಸದ್ಯ ಈಗ ಐಜೂರು ಪೊಲೀಸ್ ಠಾಣೆ ಪಿಎಸ್‌ಐ ತನ್ವೀರ್ ಹುಸೇನ್‌ರನ್ನ ಅಮಾನತು ಮಾಡಿದ್ದರಿಂದ ವಕೀಲರ ಸಂಘಟನೆ ಪ್ರತಿಭಟನೆ ಇಂದ ಹಿಂದೆ ಸರಿದಿದೆ ಎಂದು ತಿಳಿದುಬಂದಿದೆ.
‘ಅಕ್ಕಿ ಬೆಲೆ’ ನಿಯಂತ್ರಣಕ್ಕೆ ಕೇಂದ್ರದಿಂದ ಹೊಸ ಪ್ರಯತ್ನ: ದಾಸ್ತಾನು ಸಂಗ್ರಹದ ಮಾಹಿತಿ ನೀಡುವಂತೆ ಸೂಚನೆ
ಪಿಎಸ್ಐ ತನ್ವೀರ್ ನನ್ನು ರಾಜ್ಯ ಸರ್ಕಾರ ಅಮಾನತು ಮಾಡಿ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಇದೀಗ ವಕೀಲರ ಸಂಘಟನೆ ಪ್ರತಿಭಟನೆಯಿಂದ ಹಿಂದೆ ಸರಿದಿದೆ. ಜಿಲ್ಲಾಧಿಕಾರಿ ಕಚೇರಿ ಮುಂದೆ ವಕೀಲರ ಸಂಘವು ಪ್ರತಿಭಟನೆ ನಡೆಸುತ್ತಿತ್ತು. ಪಿಎಸ್‌ಐ ಅಮಾನತಿಗೆ ಆಗ್ರಹಿಸಿ ನಿನ್ನೆ ತಡರಾತ್ರಿ ಕೂಡ ವಕೀಲರು ರಾಮನಗರ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು.
ಹಿಂದಿಭಾಷೆಗೆ ‘1600 ಕೋಟಿ’ ನೀಡಿರುವ ಕೇಂದ್ರ ಕನ್ನಡಕ್ಕೆ ಕೇವಲ ‘3 ಕೋಟಿ’ ನೀಡಿ ತಾರತಮ್ಯ: ಬಿಕೆ ಹರಿಪ್ರಸಾದ್
ಪಿಎಸ್ಐ ಸಸ್ಪೆಂಡ್
ಸದ್ಯ ಈಗ ಐಜೂರು ಪೊಲೀಸ್ ಠಾಣೆ ಪಿಎಸ್‌ಐ ತನ್ವೀರ್ ಹುಸೇನ್‌ರನ್ನ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. 40 ವಕೀಲರ ವಿರುದ್ಧ ಎಫ್ಐಆರ್ ದಾಖಲು ವಿಚಾರ ಸಂಬಂಧ ರಾಮನಗರದ ಐಜೂರು ಠಾಣೆ ಪಿಎಸ್ಐ ಸಸ್ಪೆಂಡ್ ಮಾಡಲಾಗಿದೆ.ವಕೀಲರ ಪ್ರತಿಭಟನೆ ರಾಜಕೀಯ ತಿರುಗು ಪಡೆದಿತ್ತು.ವಕೀಲರ ಹೋರಾಟಕ್ಕೆ ಇದೀಗ ರಾಜ್ಯ ಸರ್ಕಾರ ಕೊನೆಗೂ ಮಣಿದಿದೆ. ಈ ಸಂಬಂಧ ರಾಮನಗರ ಐಜೂರು ಠಾಣೆ ಪಿಎಸ್ಐ ಸಸ್ಪೆಂಡ್ ಆಗಿದ್ದಾರೆ. ಪಿ ಎಸ್ ಐ ತನ್ವೀರ್ ಹುಸೇನನ್ನು ಅಮಾನತುಗೊಳಿಸಿ ರಾಜ ಸರ್ಕಾರ ಆದೇಶ ಹೊರಡಿಸಿದೆ.
ಹುಬ್ಬಳ್ಳಿಯಲ್ಲಿ ಸೃಷ್ಟಿಯಾಗದ ಉದ್ಯೋಗ : ‘ಇನ್ಫೋಸಿಸ್’ ಜೊತೆ ಸಭೆ : ಸಚಿವ ಎಂಬಿ ಪಾಟೀಲ್
40 ವಕೀಲರು ವಿರುದ್ಧ FIR ಖಂಡಿಸಿ ಪ್ರತಿಭಟನೆ ನಡೆಸಿದ್ದರು.ಡಿ ಸಿ ಕಚೇರಿಯ ಮುಂದೆ ವಕೀಲರು ರಾತ್ರಿ ಇಡೀ ಮಲಗಿ ಪ್ರತಿಭಟನೆ ನಡೆಸಿದರು. ಅಮಾನತು ಮಾಡುವಂತೆ ಬಿಜೆಪಿ ಜೆಡಿಎಸ್ ಪಟ್ಟು ಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಪಿಎಸ್ಐ ತನ್ವೀರ್ ಹುಸೇನನ್ನು ಇದೀಗ ರಾಜ್ಯ ಸರಕಾರ ಅಮಾನತುಗೊಳಿಸಿ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ.