ರಾಮನಗರ : 30 ಸಾವಿರ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಬೆಸ್ಕಾಂ AEE ಲೋಕಾಯುಕ್ತ ಪೋಲೀಸರ ಬಲೆಗೆ ಬಿದ್ದಿರುವ ಘಟನೆ ರಾಮನಗರ ತಾಲೂಕಿನ ಬಿಡದಿ ಬೆಸ್ಕಾಂ ಉಪಕಛೆರಿಯಲ್ಲಿ ನಡೆದಿದೆ.
ಹೌದು ರಾಮನಗರ ತಾಲೂಕಿನ ಬಿಡದಿ ಬೆಸ್ಕಾಂ ಉಪಕಛೆರಿಯಲ್ಲಿ ಸಹಾಯಕ ಕಾರ್ಯ ಪಾಲಕ ಅಭಿಯಂತರರಾಗಿ ಕಾರ್ಯ ನಿರ್ವಹಿಸುತ್ತಿರುವ ಎನ್ ಪುಟ್ಟಸ್ವಾಮಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. 30,000 ಲಂಚ ಸ್ವೀಕರಿಸುವಾಗ ಪುಟ್ಟಸ್ವಾಮಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.ಸದ್ಯ ಪುಟ್ಟಸ್ವಾಮಿಯನ್ನು ವಶಕ್ಕೆ ಪಡೆದು ಸದ್ಯ ಪೋಲೀಸರು ಕಡತ ಪರಿಶೀಲನೆ ಮಾಡುತ್ತಿದ್ದಾರೆ.