ಹಾಸನ: ಬಿಜೆಪಿ ಸೇರಬೇಕೆಂದು ರಾಮಲಿಂಗಾರೆಡ್ಡಿ, ಏರ್ಪೋರ್ಟ್ವರೆಗೂ ಬಂದಿದ್ರು. ತಾನು ಬಂದಿರಲಿಲ್ಲವೆಂದು ಆಣೆ ಮಾಡಿ ಹೇಳಲಿ ನೋಡೋಣ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮಾಧ್ಯಮಗಳ ಮುಂದೆ ಸವಾಲು ಹಾಕಿದ್ದಾರೆ.
PM Kisan: 12ನೇ ಕಂತಿನ ‘ಪಿಎಂ ಕಿಸಾನ್ ನಿಧಿ’ಯ ಹಣ ಬಿಡುಗಡೆ: ರಾಜ್ಯದ 50.36 ಲಕ್ಷ ರೈತರ ಖಾತೆಗೆ ಹಣ ಜಮಾ
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಆರ್ಎಸ್ಎಸ್ನವರು ಬ್ರಿಟಿಷರ ಜೊತೆ ಶಾಮೀಲಾಗಿದ್ದರು, ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾಗಿರಲಿಲ್ಲ ಎಂಬ ರಾಮಲಿಂಗಾ ರೆಡ್ಡಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಸೇರಲು ಬಂದಾಗ ಅವರಿಗೆ ಗೊತ್ತಿರಲಿಲ್ವಾ, 17 ಜನ ಬಿಜೆಪಿ (BJP) ಸೇರಿದರಲ್ಲ ಅವರ ಜೊತೆ ರಾಮಲಿಂಗರೆಡ್ಡಿನೂ ಬಂದಿದ್ದರು. ಆರ್ಎಸ್ಎಸ್, ಬಿಜೆಪಿ ಏನು ಅಂತ ಅವರಿಗೆ ಆಗಲೂ ಗೊತ್ತು, ಈಗಲೂ ಗೊತ್ತು. ಅವರ ಮನಸ್ಸಿನಲ್ಲಿ ಇವು ರಾಷ್ಟ್ರಭಕ್ತಿ ಸಂಘಟನೆಗಳು ಅಂತ ಗೊತ್ತಿದೆ. ಏಕೆಂದರೆ ಇವತ್ತು ದೇಶದಲ್ಲಿ, ರಾಷ್ಟ್ರದಲ್ಲಿ ದೇಶದ್ರೋಹಿ ಸಂಘಟನೆಗಳು ಇಷ್ಟು ಬೆಳೆಯಲು ಕಾರಣ ಇದೇ ಕಾಂಗ್ರೆಸ್ ಎಂದು ಕಿಡಿಕಾರಿದ್ದಾರೆ.
PM Kisan: 12ನೇ ಕಂತಿನ ‘ಪಿಎಂ ಕಿಸಾನ್ ನಿಧಿ’ಯ ಹಣ ಬಿಡುಗಡೆ: ರಾಜ್ಯದ 50.36 ಲಕ್ಷ ರೈತರ ಖಾತೆಗೆ ಹಣ ಜಮಾ
ಕಾಂಗ್ರೆಸ್ನವರಿಗೆ ಪಿಎಫ್ಐ , ಎಸ್ಡಿಪಿಐನವರು ರಾಷ್ಟ್ರಭಕ್ತರು. ಬಾಂಬ್ ತಯಾರಿಕೆ ಮಾಡೋರು, ಭಯೋತ್ಪಾದನೆ ಚಟುವಟಿಕೆ ಮಾಡೋರು, ವಿದೇಶದಿಂದ ಹಣ ತರಿಸಿಕೊಳ್ಳೋರು ರಾಷ್ಟ್ರಭಕ್ತರು. ಆದರೆ ಬೆಳಗ್ಗೆಯಿಂದ ಸಂಜೆವರೆಗೂ ಈ ದೇಶದ ಬಗ್ಗೆ ಚಿಂತನೆ ಮಾಡೋ ನರೇಂದ್ರಮೋದಿ ಹಾಗೂ ಬಿಜೆಪಿಯವರು ರಾಷ್ಟ್ರದ್ರೋಹಿಗಳಾಗಿ ಕಾಣಿಸ್ತಾರೆ. ಯಾರೂ ರಾಷ್ಟ್ರದ್ರೋಹಿಗಳು ಅನ್ನೋದನ್ನ ಚುನಾವಣೆಯಲ್ಲಿ ಜನ ತೀರ್ಮಾನ ಮಾಡ್ತಾರೆ ಎಂದು ತಿರುಗೇಟು ನೀಡಿದ್ದಾರೆ.
PM Kisan: 12ನೇ ಕಂತಿನ ‘ಪಿಎಂ ಕಿಸಾನ್ ನಿಧಿ’ಯ ಹಣ ಬಿಡುಗಡೆ: ರಾಜ್ಯದ 50.36 ಲಕ್ಷ ರೈತರ ಖಾತೆಗೆ ಹಣ ಜಮಾ
ಮೋದಿ ವಿರುದ್ಧ ಸಿದ್ದರಾಮಯ್ಯ ಟೀಕೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಅವನು ತಾನು ದೊಡ್ಡ ಮನುಷ್ಯ ಅಂದುಕೊಂಡಿದ್ದಾನೆ. ಅವನ್ಯಾವೂರ ದಾಸ, ನರೇಂದ್ರ ಮೋದಿಯಂತ ವಿಶ್ವ ನಾಯಕನ ಬಗ್ಗೆ ಮಾತಾಡ್ತಾರೆ. ಮೋದಿ ಬಗ್ಗೆ ಏಕವಚನದಲ್ಲಿ ಮಾತಾಡಿದ್ರೆ ಬಾಯಿಗೆ ಹುಳ ಬೀಳುತ್ತೆ ಎಂದು ಹೆಸರು ಹೇಳದೇಯೇ ಸಿದ್ದರಾಮಯ್ಯ ಅವರ ಬಗ್ಗೆ ಕಿಡಿ ಕಾರಿದ್ದಾರೆ.
PM Kisan: 12ನೇ ಕಂತಿನ ‘ಪಿಎಂ ಕಿಸಾನ್ ನಿಧಿ’ಯ ಹಣ ಬಿಡುಗಡೆ: ರಾಜ್ಯದ 50.36 ಲಕ್ಷ ರೈತರ ಖಾತೆಗೆ ಹಣ ಜಮಾ