ಚಿಕ್ಕಮಗಳೂರು :ಅಯೋಧ್ಯೆಯಲ್ಲಿ ರಾಮನಲ್ಲ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಎಂದು ಇಡೀ ದೇಶದ ಜನತೆಯ ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಒಂದು ಹಬ್ಬದ ರೀತಿಯಲ್ಲಿ ಒಂದು ಕ್ಷಣವನ್ನು ಆನಂದಿಸುತ್ತಿದ್ದಾರೆ. ಅಲ್ಲದೆ ರಾಜ್ಯದಲ್ಲಿ ಕೂಡ ಎಂದು ರಾಮಲಲ್ಲ ಪ್ರಾಣಾ ಪ್ರತಿಷ್ಠಾಪನೆ ಅಂಗವಾಗಿ ಮುಜರಾಯಿ ಇಲಾಖೆಗೆ ಒಳಪಡುವಂತ ದೇವಸ್ಥಾನಗಳಲ್ಲಿ ಪೂಜೆ ನೆರವೇರಿಸಬೇಕೆಂದು ಆದೇಶವಿದೆ.
ಆದರೆ ಇದಕ್ಕೆ ತದ್ವಿರುದ್ಧವಾಗಿ ಚಿಕ್ಕಮಂಗಳೂರಿನ ದತ್ತಪೀಠದಲ್ಲಿ ರಾಮ ತಾರಕ ಹೋಮಕ್ಕೆ ಅಲ್ಲಿನ ಜಿಲ್ಲಾಡಳಿತವು ನಿರ್ಬಂಧ ವಿಧಿಸಿದೆ ಎಂದು ತಿಳಿದುಬಂದಿದೆ.ಯಾಗ ಶಾಲೆಗೆ ಚಿಕ್ಕಮಗಳೂರು ಜಿಲ್ಲಾ ಆಡಳಿತ ಬೀಗ ಹಾಕಿದೆ ವಿವಾದಿತ ಇನಾಮ ದತ್ತಾತ್ರೇಯ ದರ್ಗಾದ ಸಮೀಪವಿರುವ ಯಾಗ ಶಾಲೆಗೆ ಈಗ ಜಿಲ್ಲಾಡಳಿತ ಬೀಗ ಹಾಗಿದೆ ಎಂದು ತಿಳಿದುಬಂದಿದೆ.
ಇಂದು ದತ್ತಪೀಠ ವ್ಯವಸ್ಥಾಪನ ಸಮಿತಿ ಸಿದ್ಧತೆ ನಡೆಸಿತ್ತು ಎಂದು ಹೇಳಲಾಗುತ್ತಿದೆ. ರಾಮ ತಾರಕ ಹೋಮ ಮಾಡಲು ವ್ಯವಸ್ಥಾಪನ ಸಮಿತಿ ಸಿದ್ಧತೆ ನಡೆಸಿತ್ತು.ದತ್ತ ಪೀಠದಲ್ಲಿ ಪೂಜೆ ಹೋಮ ಮಾಡದಂತೆ ಜಿಲ್ಲಾಡಳಿತದಿಂದ ನಿರ್ಬಂಧ ವಿಧಿಸಲಾಗಿದೆ.ಬಾಬಾ ಬುಡನ್ ಸ್ವಾಮಿ ದರ್ಗಾ ಮುಜರಾಯಿ ಇಲಾಖೆಗೆ ಸೇರಿದಾಗಿದೆ.
ಮುಜರಾಯಿ ಇಲಾಖೆಯ ವಲಯಗಳಲ್ಲಿ ಇಂದು ಪೂಜೆಗೆ ಸರ್ಕಾರ ಆದೇಶಿಸಿದೆ. ರಾಜ್ಯ ಸರ್ಕಾರದ ದ್ವಂದ್ವ ನೀತಿಯ ವಿರುದ್ಧ ಇದೀಗ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಚಿಕ್ಕಮಗಳೂರು ತಾಲೂಕಿನ ರಾಮ್ ದತ್ತಾತ್ರೇಯ ಬಾಬಾಬುಡನ್ ದರ್ಗಾದ ವಿನಾಮ ದತ್ತಾತ್ರೇಯ ಪೀಠಕ್ಕೆ ಇದೀಗ ಜಿಲ್ಲಾ ಆಡಳಿತ ಬೀಗ ಜಡಿದಿದೆ ಎಂದು ತಿಳಿದುಬಂದಿದೆ.