ವಿಜಯಪುರ: ನಿವೃತ್ತ ನ್ಯಾಯಾಧೀಶ ವಸಂತ ಮುಳಸಾವಳಗಿ ಅವರು ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ನಡೆದ ‘ಸಂವಿಧಾನ ಆಶಯ ಈಡೇರಿದೆಯೇ?’ ಎನ್ನುವ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.
ಇದೇ ವೇಳೆ ಅವರು ಮಾತನಾಡಿ,ಶ್ರೀರಾಮ ಮತ್ತು ಶ್ರೀಕೃಷ್ಣ (Sri Rama and Sri Krishna) ಐತಿಹಾಸಿಕ ವ್ಯಕ್ತಿಗಳಲ್ಲ. ಅವು ಕೇವಲ ಕಾದಂಬರಿ ಪಾತ್ರಗಳು ಅವರು ಅಶೋಕ್ ಅವರು ಎಂಬತ್ತು ಸಾವಿರ ವಿಹಾರಗಳನ್ನು ಕಟ್ಟಿರುವ ಬಗ್ಗೆ ಕಲ್ಲಿನ ಕೆತ್ತಲಾಗಿದೆ. ನಮ್ಮಲ್ಲಿ ಸಮಸ್ಯೆಗಳು ಇದ್ದಾವೆ, ನಿರುದ್ಯೋಗ, ಸೇರಿದಂತೆ ಹಲವು ಸಮಸ್ಯೆಗಳು ಇದ್ದಾವೆ ಅವುಗಳ ಬಗ್ಗೆ ಚರ್ಚೆ ಇದ್ದಾವೆ. ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಪ್ರಶ್ನೆ ಮಾಡಿದ್ರೆ ಕೆಲವು ಮಂದಿ ವಿತ್ತಂಡ ವಾದ ಮಾಡುತ್ತಾರೆ ಅಂತ ಅವರು ಕಿಡಿಕಾರಿದರು. ಇದೇ ವೆಳೇ ಅವರು ಮಾತನಾಡಿ, ಮುಸ್ಲಿಂ ಮಂದಿ ಏಳು ನೂರು ವರ್ಶಗಳ ಕಾಲ ದೇಶವನ್ನು ಅಡಳಿತ ಮಾಡಿದ್ದು, ಒಂದು ವೇಳೆ ಅವರು ಹಿಂದೂಗಳನ್ನು ಕೊಲ್ಲಬಹುದಾಗಿತ್ತು, ಆದರೆ ಹಾಗೇ ಇಲ್ಲ,. ಮುಸ್ಲಿಂರು ಇಂದಿಗೂ ಅಲ್ಪಸಂಖ್ಯಾತರಾಗಿದ್ದಾರೆ. ಇದಲ್ಲದೇ ಕ್ಬರ್ ಹೆಂಡತಿ ಹಿಂದೂ ಇದ್ದರೂ. ಆಕೆ ಧರ್ಮಾಂತರ ಆಗಿರಲಿಲ್ಲ. ಅಕ್ಬರ್ನ ಆಸ್ಥಾನದಲ್ಲಿ ಕೃಷ್ಣನ ಮಂದಿರ ಕಟ್ಟಿದ್ದಾನೆ ಅಂತ ಅವರು ತಿಳಿಸಿದರು.