ಗದಗ : ಇದೇ ಜನವರಿ 22ರಂದು ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ರಾಮಮಂದಿರ ಉದ್ಘಾಟನೆ ಹಾಗೂ ಬಾಲ ರಾಮನ ಪ್ರತಿಷ್ಠಾಪನ ಸಮಾರಂಭಕ್ಕೆ ಗದಗಿನ ಶಿವಾನಂದ ಮಠಕ್ಕೆ ಆಹ್ವಾನ ಬರೆದಿದ್ದು, ಈ ಕುರಿತಂತೆ ಮಠದ ಸ್ವಾಮೀಜಿಗಳಾದ ಸದಾಶಿವನಂದ ಭಾರತಿ ಸ್ವಾಮೀಜಿ ಅವರು ಮಾತನಾಡಿ ಅಯೋಧ್ಯಕ್ಕೂ ಶಿವಾನಂದ ಮಠಕ್ಕೂ ಬಹಳ ನಂಟಿದೆ ಎಂದು ತಿಳಿಸಿದ್ದಾರೆ.
ಈ ಕುರಿತಂತೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬಾಲ ರಾಮನ ಮೂರ್ತಿ ಪ್ರತಿಷ್ಠಾಪನ ಸಮಾರಂಭಕ್ಕೆ ಅಹ್ವಾನ ಬಂದಿರುವುದು ಸಂತೋಷ ತಂದಿದೆ ಎಂದು ಗದಗ ಶಿವಾನಂದ ಮಠದ ಸದಾಶಿವಾನಂದ ಭಾರತಿ ಶ್ರೀ ಹೇಳಿಕೆ ನೀಡಿದ್ದಾರೆ.ಅಯೋಧ್ಯ ರಾಮ ಮಂದಿರಕ್ಕೂ ಗದಗ ಶಿವಾನಂದ ಮಠಕ್ಕೂ ನಂಟು ಇದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಮಠದ ಹಿರಿಯ ಸ್ವಾಮೀಜಿಗಳದ ನಂದೀಶ್ವರ ಶ್ರೀಗಳು ರಾಮಮಂದಿರ ಹೋರಾಟದಲ್ಲಿ ಸಕ್ರಿಯವಾಗಿದ್ದರು. 1992 ರಲ್ಲಿ ಶಿವಾನಂದ ಮಠದಿಂದಲೂ ರಾಮಮಂದಿರಕ್ಕೆ ಇಟ್ಟಿಗೆ ರವಾನೆಯಾಗಿದೆ.ಶಿವನಂದ ಶ್ರೀಗಳ ಗದ್ದುಗೆ ಬಳಿ ಇಟ್ಟಿಗೆ ಇಟ್ಟು ಪೂಜೆ ಮಾಡಿ ರವಾನಿಸಲಾಗಿತ್ತು ಈ ನಿಟ್ಟಿನಿಂದ ಪ್ರತಿಷ್ಠಾವನ ಸಮಾರಂಭಕ್ಕೆ ಆಹ್ವಾನ ಬಂದಿದೆ. ರಾಜಕಾರಣಿಗಳು, ರಾಜಕೀಯ ದೃಷ್ಟಿ ಇಟ್ಟುಕೊಂಡು ಹೇಳಿಕೆಗಳನ್ನು ನೀಡುತ್ತಿದ್ದಾರೆ.ಯಾವುದು ಸರಿಯಲ್ಲ ತಪ್ಪು ಅಲ್ಲ ಎಂದು ಸದಾಶಿವಾನಂದ ಭಾರತಿ ಶ್ರೀ ತಿಳಿಸಿದ್ದಾರೆ.