ಭೋಪಾಲ್: ಅಯೋಧ್ಯೆಯ ರಾಮ ಮಂದಿರ ಅಪೂರ್ಣವಾಗಿದ್ದು, ರಾಜಕೀಯ ಲಾಭಕ್ಕಾಗಿ ಗೋವುಗಳನ್ನು ಬಳಸಿಕೊಳ್ಳುತ್ತಿದೆ ಎಂದು ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಪ್ರಧಾನಿ ಮೋದಿ ದೇಶಗಳ ನಡುವಿನ ಯುದ್ಧಗಳನ್ನು ನಿಲ್ಲಿಸಿದ್ದಾರೆ ಎಂದು ನಾನು ಕೇಳಿದ್ದೇನೆ. ಅವರು ಅಷ್ಟು ಪ್ರಸಿದ್ಧರಾಗಿದ್ದರೆ, ಅವರ ಪಕ್ಷವು ಚುನಾವಣೆಯಲ್ಲಿ ಕೇವಲ 400 ಸ್ಥಾನಗಳನ್ನು ಗುರಿಯಾಗಿಸಿಕೊಂಡಿದೆ ಮತ್ತು ಎಲ್ಲಾ 543 ಸ್ಥಾನಗಳನ್ನು ಹೊಂದಿಲ್ಲ ಎಂದು ನನಗೆ ತುಂಬಾ ಆಘಾತವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
“Jab Modi ji ka danka pure vishwa mein hai toh BJP ko 543 Lok Sabha seat ka lakshya rakhna tha,” says Shankracharya Swami Avimukteshwarananad#NarendraModi #BJP pic.twitter.com/ndlNq7ORd5
— Free Press Madhya Pradesh (@FreePressMP) May 21, 2024
ಉತ್ತರಾಖಂಡದ ಜೋಶಿಮಠದ ಜ್ಯೋತಿರ್ಮಠದ ಜಗದ್ಗುರು ಶಂಕರಾಚಾರ್ಯ ಎಂಬ ಗೌರವಾನ್ವಿತ ಬಿರುದನ್ನು ಹೊಂದಿರುವ ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ಅಯೋಧ್ಯೆ ರಾಮ ಮಂದಿರದ ಬಗ್ಗೆ ಮತ್ತೊಮ್ಮೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
WATCH | “Mandir abhi bana hi nahi hai, toh pran prathishtha kaisi ,” Shankracharya Swami Avimukteshwaranand slams BJP govt over Ayodhya Ram Temple👇#ayodhyaramtemple #RamTemple #BJP #NarendraModi pic.twitter.com/MxyqQ2OUKA
— Free Press Madhya Pradesh (@FreePressMP) May 21, 2024
ರಾಮ ಮಂದಿರದ ಪ್ರತಿಷ್ಠಾಪನಾ ಸಮಾರಂಭದಲ್ಲಿ ವೇದಗಳ ಉಲ್ಲಂಘನೆಯ ಬಗ್ಗೆ ತಮ್ಮ ನಿಲುವನ್ನು ಪುನರುಚ್ಚರಿಸಿದ ಶಂಕರಾಚಾರ್ಯ, ಇನ್ನೂ ಸಂಪೂರ್ಣವಾಗಿ ಅಯೋಧ್ಯಯ ರಾಮಮಂದಿರ ನಿರ್ಮಾಣವಾಗಿಲ್ಲ, ಆದರೂ ಹೇಗೆ ಪ್ರಾಣಪ್ರತಿಷ್ಠಾಪನೆ ಮಾಡಿದ್ದಾರೆ (ಜಬ್ ಮಂದಿರ್ ಅಭಿ ಬನಾ ಹಿ ನಹೀ ಹೈ, ತೋ ಪ್ರಾಣ್ ಪ್ರತಿಷ್ಠಾ ಕೈಸಿ) ಎಂದು ಹೇಳಿದರು.