ಉತ್ತರ ಪ್ರದೇಶ: ಜನವರಿ.22, 2024ರ ಇಂದು ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆ ಆಗಲಿದೆ. ಅಲ್ಲದೇ ದೇವಾಲಯದಲ್ಲಿ ಶ್ರೀ ರಾಮಲಲ್ಲಾ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಹಾಗಾದ್ರೇ ಅದರ ಮುಹೂರ್ತದ ವಿವರ ಹೇಗಿದೆ ಅಂತ ಮುಂದೆ ಓದಿ.
ಇಂದು ಮಧ್ಯಾಹ್ನ 12 ಗಂಟೆ 29 ನಿಮಿಷ 8 ಸೆಕೆಂಡುಗಳು ಮತ್ತು 12 ಗಂಟೆ 30 ನಿಮಿ| 32 ಸೆಕೆಂಡುಗಳ ನಡುವಿನ ಅವಧಿಯಲ್ಲಿ ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಜರುಗಲಿದೆ.
ವಿಶೇಷಗಳಲ್ಲಿ ವಿಶೇಷ ಎನ್ನುವಂತೆ ಅತ್ಯಂತ ನಿರ್ಣಾಯಕವಾದ ಪ್ರಾಣ ಪ್ರತಿಷ್ಠಾಪನೆ ಮತ್ತು ನೇತ್ರೋನ್ಮಿಲನ 84 ಸೆಕೆಂಡುಗಳ ಅಲ್ಪಾವಧಿಯಲ್ಲಿ ನಡೆಯಲಿದೆ. ಈ ನಿರ್ಣಾಯಕ 84 ಸೆಕೆಂಡುಗಳು ಮೇಷ ಲಗ್ನದಲ್ಲಿ ಅಭಿಜಿತ್ ಮುಹೂರ್ತವಾಗಿರುತ್ತದೆ.
ಹೀಗೆ ಪ್ರಾಣ ಪ್ರತಿಷ್ಠಾಪನೆ ಹಾಗೂ ನೇತ್ರೋನ್ಮಿಲನದ ಕಾರ್ಯಕ್ರಮದ ಶುಭ ಮುಹೂರ್ತವನ್ನು ಸಂಜೀವಿನಿ ಮುಹೂರ್ತ ಅಂತ ಕರೆಯಲಾಗುತ್ತದೆ.
ಈ ಸುಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೇವಲ 84 ಸೆಕೆಂಡುಗಳಲ್ಲಿ ಪ್ರಾಣ ಪ್ರತಿಷ್ಠಾಪನೆ ಮತ್ತು ನೇತ್ರೋನ್ಮಿಲನದಲ್ಲಿ ಪಾಲ್ಗೊಳ್ಳಲಿದ್ದಾರೆ.