ಬೆಂಗಳೂರು : ನಾಳೆ ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಸಂಜೆ 6 ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆ ನಡೆಯಲಿದೆ. ನಾಳೆ ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಾಸಕಾಂಗ ಪಕ್ಷದ ಸಭೆ ಆ ಯೋಜನೆ ಮಾಡಲಾಗಿದೆ. ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ನ ಹಿಲ್ಟನ್ ಹೋಟೆಲ್ ಅಲ್ಲಿ ಸಿಎಲ್ಪಿ ನಡೆಯಲಿದೆ.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಿಎಲ್ಪಿ ಸಭೆ ನಡೆಯಲಿದೆ. ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದಿಪ್ ಸಿಂಗ್ ಸುರ್ಜೆವಾಲ, ರಾಜ್ಯಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಗಳಾದ ಅಜಯ್ ಮಕೇನ್ ಸೈಯದ್ ಹುಸೇನ್ ಜೆಸಿ ಚಂದ್ರಶೇಖರ್ ಸಿಎಲ್ಪಿ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ʻಯುವನಿಧಿʼ ಯೋಜನೆ ಫಲಾನುಭವಿಗಳೇ ಗಮನಿಸಿ: ಫೆ.29ರೊಳಗೆ ‘ಈ ರೀತಿ’ ಮಾಡದಿದ್ರೆ ‘ಹಣ ಬರಲ್ಲ’!
ಅಲ್ಲದೆ ಈ ಒಂದು ಸಭೆಯಲ್ಲಿ ಭಾಗಿಯಾಗುವಂತೆ ಎಲ್ಲಾ ಶಾಸಕರಿಗೂ ಸೂಚನೆ ನೀಡಲಾಗಿದೆ. ಅಧಿವೇಶನ ನಂತರ ನೇರವಾಗಿ ಬರಲು ಸೂಚನೆ ನೀಡಲಾಗಿದೆ. ನಾಳೆ ಬೆಳಗ್ಗೆ ಹೋಟೆಲ್ ನಿಂದ ನೇರವಾಗಿ ವಿಧಾನಸೌಧಕ್ಕೆ ಪ್ರಯಾಣ ಬೆಳೆಸಲಾಗುತ್ತದೆ. ಮಾತದಾನಕ್ಕೆ ಕಾಂಗ್ರೆಸ್ ಶಾಸಕರನ್ನು ಒಟ್ಟಿಗೆ ಕರೆತರಲು ಹಾಕಿಕೊಂಡಿದೆ.
BIG NEWS: ಇನ್ಮುಂದೆ ‘1ನೇ ತರಗತಿ ಪ್ರವೇಶ’ಕ್ಕೆ ‘ಕನಿಷ್ಠ 6 ವರ್ಷ’ ಕಡ್ಡಾಯ- ಕೇಂದ್ರ ಸರ್ಕಾರ