ನವದೆಹಲಿ: ಆಗಸ್ಟ್ 10 ರಂದು ಜಿಮ್ನಲ್ಲಿ ವರ್ಕೌಟ್ ಮಾಡುವಾಗ ಹೃದಯಾಘಾತಕ್ಕೆ ಒಳಗಾದ ರಾಜು ಶ್ರೀವಾಸ್ತವ ಅವರು ಇಂದು ವಿಧಿವಶರಾಗಿದ್ದಾರೆ. ಆಸ್ಪತ್ರೆಯಲ್ಲಿ ಚೇತರಿಕೆಗಾಗಿ ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು, ಆದರೆ ಸುದೀರ್ಘ ಹೋರಾಟದ ನಂತರ ಕೂಡ ಅವರ ಆರೋಗ್ಯದಲ್ಲಿ ಚೇತರಿಕಗೆ ಕಾಣದೇ ಇಂದು ನಿಧನರಾದರು. ರಾಜು ಶ್ರೀವಾಸ್ತವ ಅವರ ಕುಟುಂಬ ಸದಸ್ಯರು – ಅವರ ಪತ್ನಿ, ಮಗ ಮತ್ತು ಮಗಳು – ಪ್ರಸ್ತುತ ಏಮ್ಸ್ ನಲ್ಲಿದ್ದು ಸೆಪ್ಟೆಂಬರ್ 22ರ ಗುರುವಾರ ದೆಹಲಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎನ್ನಲಾಗಿದೆ.
ರಾಜು ಶ್ರೀವಾಸ್ತವ ನಿಧನ, ಪ್ರಧಾನಿ ನರೇಂದ್ರ ಮೋದಿಯಿಂದ ಸಂತಾಪ | Raju Srivastava passes away
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ರಾಜು ಶ್ರೀವಾಸ್ತವ ಅವರ ನಿಧನಕ್ಕೆ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪ ಸೂಚಿಸಿದ್ದಾರೆ. “ರಾಜು ಶ್ರೀವಾಸ್ತವ ಅವರು ನಗು, ಹಾಸ್ಯ ಮತ್ತು ಸಕಾರಾತ್ಮಕತೆಯಿಂದ ನಮ್ಮ ಜೀವನವನ್ನು ಉಜ್ವಲಗೊಳಿಸಿದ್ದಾರೆ. ಅವರು ನಮ್ಮನ್ನು ಬಹುಬೇಗನೆ ಬಿಟ್ಟು ಹೋಗಿದ್ದಾರೆ, ಆದರೆ ಅವರು ಅಸಂಖ್ಯಾತ ಜನರ ಹೃದಯಗಳಲ್ಲಿ ಜೀವಿಸುವುದನ್ನು ಮುಂದುವರಿಸುತ್ತಾರೆ, ಅವರ ನಿಧನ ದುಃಖ ತಂದಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ” ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
BIGG NEWS : ಮಂಗಳೂರಿನಲ್ಲಿ ಹಾಸ್ಟೆಲ್ ಕಿಟಕಿ ಮುರಿದು ಮೂವರು ವಿದ್ಯಾರ್ಥಿನಿಯರು ಎಸ್ಕೇಪ್ : ಪೊಲೀಸರ ಹುಡುಕಾಟ
BREAKING NEWS : `PAYCM’ ಪೋಸ್ಟರ್ ಅಂಟಿಸಿದ ಕೇಸ್ : ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
BIGG NEWS : ಕರ್ನಾಟಕದ ಶಿಕ್ಷಕರೇ ಗಮನಿಸಿ : `ಶಿಕ್ಷಕ ಮಿತ್ರ’ ತಂತ್ರಾಂಶದ ಮೂಲಕ ಸಿಗಲಿವೆ ಈ 17 ಸೇವಾ ಸೌಲಭ್ಯಗಳು