ನವದೆಹಲಿ: ಹಾಸ್ಯನಟ ರಾಜು ಶ್ರೀವಾಸ್ತವ ಅವರ ಅಂತ್ಯಕ್ರಿಯೆ ಗುರುವಾರ ದೆಹಲಿಯಲ್ಲಿ ನಡೆಯಲಿದೆ. ಇದಕ್ಕೂ ಮೊದಲು, ಅವರ ದೇಹವನ್ನು ಆಸ್ಪತ್ರೆಯಿಂದ ದ್ವಾರಕಾಕ್ಕೆ ಅವರ ಮನೆಗೆ ಕೊಂಡೊಯ್ಯಲಾಗಿ ಅಲ್ಲಿ ಅವರ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ಬುಧವಾರ ಬೆಳಿಗ್ಗೆ, ರಾಜು ಶ್ರೀವಾಸ್ತವ ಅವರು ದೆಹಲಿ ಏಮ್ಸ್ನಲ್ಲಿ ಕೊನೆಯುಸಿರೆಳೆದರು. ಅವರು ಆಗಸ್ಟ್ 10 ರಂದು ಹೃದಯಾಘಾತಕ್ಕೆ ಒಳಗಾದರು. ಅದರ ನಂತರ ಅವರನ್ನು ಚಿಕಿತ್ಸೆಗಾಗಿ ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು, ಆದರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾದರು. 58 ವರ್ಷದ ರಾಜು ಶ್ರೀವಾಸ್ತವ ಅವರ ಅಂತ್ಯಕ್ರಿಯೆ ಗುರುವಾರ (ಇಂದುಇ) ಬೆಳಿಗ್ಗೆ 9.30 ಕ್ಕೆ ದೆಹಲಿಯ ನಿಗಮ್ಬೋಧ್ ಘಾಟ್ನಲ್ಲಿ ನಡೆಯಲಿದೆ. ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವರ ಸಂಬಂಧಿಕರು ಕಾನ್ಪುರದಿಂದ ದೆಹಲಿಗೆ ತೆರಳಿದ್ದಾರೆ.