ಉಲಾನ್ಬಾತರ್: ಮಂಗೋಲಿಯಾಕ್ಕೆ ಭೇಟಿ ನೀಡಿದ ಭಾರತದ ಮೊದಲ ರಕ್ಷಣಾ ಸಚಿವ ರಾಜನಾಥ್ ಸಿಂಗ್(Rajnath Singh) ಅವರಿಗೆ ಮಂಗೋಲಿಯನ್ ಅಧ್ಯಕ್ಷ ಉಖ್ನಾಗಿಯಿನ್ ಖುರೆಲ್ಸುಖ್ ಅವರು ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ.
ಹೌದು, ಉಖ್ನಾಗಿಯಿನ್ ಖುರೆಲ್ಸುಖ್ ಅವರು ರಾಜನಾಥ್ ಸಿಂಗ್ ಅವರಿಗೆ ಬಿಳಿಯ ಕುದುರೆಯೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಅದಕ್ಕೆ ರಾಜನಾಥ್ ಅವರು “ತೇಜಸ್” ಎಂದು ಹೆಸರಿಸಿದ್ದಾರೆ.
“ಮಂಗೋಲಿಯಾದಲ್ಲಿರುವ ನಮ್ಮ ವಿಶೇಷ ಸ್ನೇಹಿತರಿಂದ ವಿಶೇಷ ಉಡುಗೊರೆಯೊಂದನ್ನು ಪಡೆದಿದ್ದೇನೆ. ಅದಕ್ಕೆ ನಾನು ‘ತೇಜಸ್’ ಎಂದು ಹೆಸರಿಸಿದ್ದೇನೆ.
ಮಂಗೋಲಿಯಾ ಅಧ್ಯಕ್ಷ ಖುರೆಲ್ಸುಖ್ ಅವರಿಗೆ ಧನ್ಯವಾದಗಳು” ಎಂದು ರಾಜನಾಥ್ ಸಿಂಗ್ ಬುಧವಾರ ಬಿಳಿ ಕುದುರೆಯ ಚಿತ್ರಗಳೊಂದಿಗೆ ಟ್ವೀಟ್ ಮಾಡಿದ್ದಾರೆ.
A special gift from our special friends in Mongolia. I have named this magnificent beauty, ‘Tejas’.
Thank you, President Khurelsukh. Thank you Mongolia. pic.twitter.com/4DfWF4kZfR
— Rajnath Singh (@rajnathsingh) September 7, 2022
ಮಂಗಳವಾರ, ರಾಜನಾಥ್ ಸಿಂಗ್ ಅವರು ಮಂಗೋಲಿಯನ್ ಅಧ್ಯಕ್ಷ ಉಖ್ನಾಗಿನ್ ಖುರೆಲ್ಸುಖ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
2015 ರಲ್ಲಿ ಪ್ರಧಾನಿ ಮೋದಿ ಅವರು ಈ ದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆಗಿನ ಮಂಗೋಲಿಯನ್ ಕೌಂಟರ್ ಚಿಮೆಡ್ ಸೈಖಾನ್ಬಿಲೆಗ್ ಅವರಿಂದ ಕಂದು ಬಣ್ಣದ ಕುದುರೆಯನ್ನು ವಿಶೇಷ ಉಡುಗೊರೆಯಾಗಿ ಪಡೆದರು.
ರಾಜನಾಥ್ ಸಿಂಗ್ ಅವರು ಸೆಪ್ಟೆಂಬರ್ 5 ರಿಂದ 7 ರವರೆಗೆ ಮಂಗೋಲಿಯಾಕ್ಕೆ ಭೇಟಿ ನೀಡಿದ್ದಾರೆ. ಇದು ಪೂರ್ವ ಏಷ್ಯಾದ ದೇಶಕ್ಕೆ ಭಾರತದ ರಕ್ಷಣಾ ಸಚಿವರ ಮೊದಲ ಪ್ರವಾಸವಾಗಿದೆ.
BREAKING NEWS : ಸಚಿವ ಉಮೇಶ್ ಕತ್ತಿ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ
BIGG NEWS: ಸಚಿವ ಉಮೇಶ್ ಕತ್ತಿ ನಿಧನಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಸಂತಾಪ