ಬೆಂಗಳೂರು : ಕೆಲವು ದಿನಗಳಿಂದ ಸ್ಥಗಿತಗೊಂಡಿದ್ದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಿನ್ನೆಯಿಂದ ಮತ್ತೆ ಆರಂಭವಾಗಿದ್ದು, ಒತ್ತುವರಿ ಮಾಡಿಕೊಂಡವರಲ್ಲಿ ಮತ್ತೆ ನಡುಕ ಉಂಟುಮಾಡಿದೆ.
BREAKING NEWS : ಹಿರಿಯ ನಟ ಲೋಹಿತಾಶ್ವ ಆರೋಗ್ಯ ಸ್ಥಿತಿ ಗಂಭೀರ | Actor Lohithaswa
BREAKING NEWS : ಹಿರಿಯ ನಟ ಲೋಹಿತಾಶ್ವ ಆರೋಗ್ಯ ಸ್ಥಿತಿ ಗಂಭೀರ | Actor Lohithaswa
ರಾಜಧಾನಿ ಬೆಮಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯ ಸ್ಥಗಿತಗೊಂಡಿದೆಯಾ ಎಂಬ ಅನುಮಾನಗಳ ನಡುವೆ ಬಿಬಿಎಂಪಿ ಸೋಮವಾರದಿಂದ ಮತ್ತೆ ಆರಂಭಿಸಿದೆ. ಇದರ ಹೊರತಾಗಿ ಪೂರ್ವ ಪಾರ್ಕ್ರಿಡ್ಜ್ ನ ಮೂರು ವಿಲ್ಲಾಗಳು, ರೈನ್ ಬೋ ಲೇಔಟ್ ನ 30 ವಿಲ್ಲಾಗಳು ಡೆಮಾಲಿಷನ್ ಗೆ ಫಿಕ್ಸ್ ಆಗಿ ನಿಂತಿವೆ.
BREAKING NEWS : ಹಿರಿಯ ನಟ ಲೋಹಿತಾಶ್ವ ಆರೋಗ್ಯ ಸ್ಥಿತಿ ಗಂಭೀರ | Actor Lohithaswa
ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವ ಇಕೋಸ್ಪೇಸ್ ಕಂಪನಿಯ (Ecospace company) ಒತ್ತುವರಿ ಜಾಗ ತೆರವು ಮಾಡಲು ಅಧಿಕಾರಿಗಳಿಗೆ ಫ್ರೀಹ್ಯಾಂಡ್ ನೀಡಲಾಗಿದೆ. ಇದರೊಂದಿಗೆ ಇಕೋಸ್ಪೇಸ್ ಒಳಗಿರುವ 12 ಅಂತಸ್ತಿನ 2 ಕಟ್ಟಡ ತೆರವು ನಿಶ್ಚಿತವಾಗಿದೆ. ಸಾವಳಕೆರೆಯಿಂದ ಬೆಳ್ಳಂದೂರು ಕೆರೆಗೆ ಸಂಪರ್ಕ ಸಲ್ಲಿಸುವ ರಾಜಕಾಲುವೆ ಮಾರ್ಗದಲ್ಲಿ500 ಮೀಟರ್ ಉದ್ದ, 40-50 ಅಡಿ ಅಗಲದ ಜಾಗ ಒತ್ತುವರಿಯಾಗಿದೆ.
BREAKING NEWS : ಹಿರಿಯ ನಟ ಲೋಹಿತಾಶ್ವ ಆರೋಗ್ಯ ಸ್ಥಿತಿ ಗಂಭೀರ | Actor Lohithaswa
ದೊಡ್ಡ ಸ್ಟ್ರಕ್ಚರ್ಗಳಿಗೆ ಸ್ಟೇ
ರಾಜಕಾಲುವೆ ಒತ್ತುವರಿ ವಿಚಾರ ಸಂಬಂಧ ಮಾತನಾಡಿದ ಬಿಬಿಎಂಪಿ ಮುಖ್ಯ ಇಂಜಿನಿಯರ್ ಬಸವರಾಜ ಕಬಾಡೆ, ಇಂದು ಕಾಂಪೌಡ್ ವಾಲ್, ಖಾಲಿಜಾಗ, ಶೆಡ್ ಮಾತ್ರ ತೆರವು ಮಾಡುತ್ತೇವೆ. ದೊಡ್ಡ ಸ್ಟ್ರಕ್ಚರ್ಗಳಿಗೆ ಸ್ಟೇ ಆರ್ಡರ್ ಇದೆ. ಹೀಗಾಗಿ ತಹಶೀಲ್ದಾರ್ ನೋಟಿಸ್ ಕೊಟ್ಟು ರಿ ಸರ್ವೆ ಆಗಬೇಕು. ಇದಕ್ಕೆ ಎರಡರಿಂದ ಮೂರು ದಿನ ಹಿಡಿಯಬಹುದು. ತಹಶೀಲ್ದಾರ್ ನಮಗೆ ಆದೇಶ ನೀಡಿದ ತಕ್ಷಣ ದೊಡ್ಡ ಕಟ್ಟಡಗಳನ್ನೂ ತೆರವು ಮಾಡುತ್ತೇವೆ. ಇದಕ್ಕೆ ಮೂರು ದಿನಗಳಾಗಬಹುದು. ಅದು ಬಿಟ್ಟು ನಾವು ಏಕಾಏಕಿ ಒಡೆದುಹಾಕಲು ಸಾಧ್ಯವಿಲ್ಲ. ಇವತ್ತು ನಾಳೆ ಎಲ್ಲೆಲ್ಲಿ ಅಡ್ಡಿ ಇಲ್ಲವೋ ಅಲ್ಲೆಲ್ಲಾ ತೆರವು ಮಾಡುತ್ತೇವೆ ಎಂದರು.