ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ಮಹತ್ತರದ ಬೆಳವಣಿಗೆಯಲ್ಲಿ ಆಮ್ ಆದ್ಮಿ ಪಕ್ಷದ ಸಚಿವ ರಾಜೇಂದ್ರ ಪೌಲ್ ಗೌತಮ್ ರಾಜೀನಾಮೆ ನೀಡಿದ್ದಾರೆ.
ಹಿಂದೂ ದೇವತೆಗಳನ್ನು ಪ್ರಾರ್ಥಿಸಬೇಡಿ ಎಂದು ಹೇಳಿಕೆ ನೀಡಿ ಧಾರ್ಮಿಕ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದ್ದ ರಾಜೇಂದ್ರ ಪಾಲ್’ ವಿರುದ್ಧ ಬಿಜೆಪಿ ಕಿಡಿಕಾರಿತ್ತು. ಈ ಮೂಲಕ ರಾಜೇಂದ್ರ ಪಾಲ್ ಹೇಳಿಕೆ ರಾಜಕೀಯ ಬಣ್ಣ ಪಡೆದುಕೊಂಡಿತ್ತು. ಈ ಎಲ್ಲಾ ಬೆಳವಣಿಗೆಯ ನಂತರ ಆಮ್ ಆದ್ಮಿ ಪಕ್ಷದ ಸಚಿವ ರಾಜೇಂದ್ರ ಪೌಲ್ ಗೌತಮ್ ರಾಜೀನಾಮೆ ನೀಡಿದ್ದಾರೆ.
ಅಕ್ಟೋಬರ್ 5 ರಂದು ದೆಹಲಿಯ ಅಂಬೇಡ್ಕರ್ ಭವನದಲ್ಲಿ ಸುಮಾರು 10,000 ಹಿಂದೂಗಳು ಬೌದ್ಧ ಧರ್ಮವನ್ನು ಸ್ವೀಕರಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿದ ವೀಡಿಯೊವನ್ನು ಉಲ್ಲೇಖಿಸಿ ಆಮ್ ಆದ್ಮಿ ಪಕ್ಷದ ಸಚಿವ ರಾಜೇಂದ್ರ ಪಾಲ್ ಗೌತಮ್ ಅವರ ರಾಜೀನಾಮೆಗೆ ಬಿಜೆಪಿ ಒತ್ತಾಯಿಸಿತ್ತು.
ಆಮ್ ಆದ್ಮಿ ಪಕ್ಷದ ಸಚಿವ ರಾಜೇಂದ್ರ ಪಾಲ್ ಗೌತಮ್ ಅವರು ಇತ್ತೀಚೆಗೆ ಸಾಮೂಹಿಕ ಧಾರ್ಮಿಕ ಮತಾಂತರ ಕಾರ್ಯಕ್ರಮದಲ್ಲಿ ಭಾಗಿಯಾದ ವಿಡಿಯೋ ವೈರಲ್ ಆಗಿದೆ. ಅಲ್ಲಿ ನಡೆದ ಬೃಹತ್ ಜನ ಸಮೂಹವು ಹಿಂದೂ ದೇವರು ಮತ್ತು ದೇವತೆಗಳನ್ನು ನಿರಾಕರಿಸುವ ಪ್ರತಿಜ್ಞೆ ಕೈಗೊಂಡಿರುವುದು ವಿಡಿಯೋಗಳಲ್ಲಿ ದಾಖಲಾಗಿದೆ. ಈ ವಿಚಾರವಾಗಿ ಎಎಪಿ ಮತ್ತು ಬಿಜೆಪಿ ನಡುವೆ ಹೊಸ ವಾಕ್ಸಮರ ಶುರುವಾಗಿತ್ತು.
ಇದರಲ್ಲಿ ಎಎಪಿ ಸಚಿವ ರಾಜೇಂದ್ರ ಪಾಲ್ ಮತ್ತು ಉಳಿದ ಜನರು ಪ್ರತಿಜ್ಞೆ ಕೈಗೊಂಡಿದ್ದಾರೆ. “ನಾನು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರಲ್ಲಿ ನಂಬಿಕೆ ಹೊಂದಿಲ್ಲ, ಅವರನ್ನು ಆರಾಧಿಸುವುದೂ ಇಲ್ಲ. ದೇವರ ಅವತಾರ ಎಂದು ನಂಬಲಾಗಿರುವ ರಾಮ ಮತ್ತು ಕೃಷ್ಣರಲ್ಲಿ ನಾನು ಯಾವುದೇ ನಂಬಿಕೆ ಹೊಂದಿರುವುದಿಲ್ಲ, ನಾನು ಅವರನ್ನು ಪೂಜಿಸುವುದೂ ಇಲ್ಲ” ಎಂದು ಹೇಳುವುದು ವಿಡಿಯೋದಲ್ಲಿ ಸೆರೆಯಾಗಿತ್ತು, ಬೌದ್ಧ ಧರ್ಮಕ್ಕೆ ಮತಾಂತರ ಮಾಡುವ ಉದ್ದೇಶದಿಂದ ಅಕ್ಟೋಬರ್ 5ರಂದು ದೆಹಲಿಯ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 10,000 ಜನರು ಭಾಗವಹಿಸಿದ್ದರು ಎನ್ನಲಾಗಿದೆ.
‘ಚರ್ಮ ಗಂಟು ರೋಗದಿಂದ ಹಸು ಮೃತಪಟ್ಟರೆ 50 ಸಾವಿರ ರೂ.ಪರಿಹಾರ ನೀಡಬೇಕು : ರಾಜ್ಯ ಸರ್ಕಾರಕ್ಕೆ H.D ಕುಮಾರಸ್ವಾಮಿ ಪತ್ರ
BREAKING NEWS : ಟಿ.ಬೇಗೂರು ತೆಪ್ಪೋತ್ಸವದ ವೇಳೆ ತಪ್ಪಿದ ದುರಂತ : ಆಯತಪ್ಪಿ ಕೆರೆಗೆ ಬಿದ್ದಿದ್ದ ಮೂವರ ರಕ್ಷಣೆ