ರಾಜಸ್ಥಾನ: ಪಾಕಿಸ್ತಾನದಿಂದ ಇಂದು ಮತ್ತೆ ಭಾರತದ ಮೇಲೆ ದಾಳಿಯ ಭೀತಿ ಹಿನ್ನಲೆಯಲ್ಲಿ ರಾಜಸ್ಥಾನದ ಜೈಸಲ್ಮೇರ್ ಅನ್ನು ಸಂಪೂರ್ಣ ಬ್ಲ್ಯಾಕ್ ಔಟ್ ಮಾಡಲಾಗಿದೆ.
ಪಾಕಿಸ್ತಾನದಿಂದ ದಾಳಿಯ ಭೀತಿ ಹಿನ್ನಲೆಯಲ್ಲಿ ಲೈಟ್ಸ್ ಗಳನ್ನು ಬಂದ್ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಜೈಸಲ್ಮೇರ್ ನಲ್ಲಿ ಬ್ಲ್ಕ್ಯಾಕ್ ಔಟ್ ಮಾಡಲಾಗಿದೆ.
ನಿನ್ನೆ ಪಾಕಿಸ್ತಾನದಿಂದ ರಾಜಸ್ಥಾನದ ಜೈಸಲ್ಮೇರ್ ಸೇರಿದಂತೆ 36 ಸ್ಥಳಗಳ ಮೇಲೆ 300 ರಿಂದ 400 ಡ್ರೋನ್ ಗಳ ಮೂಲಕ ದಾಳಿಯನ್ನು ನಡೆಸಲಾಗಿತ್ತು. ಅಷ್ಟೇ ಸಮರ್ಥವಾಗಿ ಭಾರತೀಯ ಸೇನೆ ಈ ಡ್ರೋನ್ ಗಳನ್ನು ಹೊಡೆದುರುಳಿಸಿದ್ದವು.